ಕರ್ನಾಟಕ

karnataka

ಡೇವಿಡ್​ ವಾರ್ನರ್ ಭಾರತದ ಈ ಸ್ಥಳವನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರಂತೆ: ಅದು ಯಾವುದು ಗೊತ್ತಾ? - David Warner insta post

By ETV Bharat Sports Team

Published : Aug 27, 2024, 7:44 PM IST

ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಡೇವಿಡ್​ ವಾರ್ನರ್​ ಭಾರತದ ಪ್ರವಾಸಿ ಸ್ಥಳವೊಂದರ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡು ಅದನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​ (Getty images)

ಹೈದರಾಬಾದ್​:ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ ಅವರು ಭಾರತದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಈ ಎಡಗೈ ಬ್ಯಾಟರ್​ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಚಲನಚಿತ್ರಗಳಿಗೆ ನೃತ್ಯ ಮಾಡುವುದು ಮತ್ತು ಆಡಿಯೋ ಡಬ್​ ಮಾಡಿರುವಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಭಾರತದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ.

ಇದೀಗ ಮತ್ತೊಮ್ಮೆ ಭಾರತೀಯ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅವರ ತಮ್ಮ ಇನ್ಸ್ಟಾ ಖಾತೆಯಲ್ಲಿ, ವಿದ್ಯುತ್​ ದೀಪಗಳ ಮಧ್ಯದಲ್ಲಿ ಕಂಗೊಳಿಸುತ್ತಿರುವ ಚಾರ್ಮಿನಾರ್ ಫೋಟೋವನ್ನು ಹಂಚಿಕೊಂಡು, 'ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾದ ಇದನ್ನೂ ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದು ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ಗೆ ನೆಟಿಜನ್‌ಗಳು ಪ್ರತಿಕ್ರಿಯೆ ನೀಡುತ್ತಿದ್ದು, 'ವಾರ್ನರ್​ಗೆ​ ಹೈದರಾಬಾದ್‌ನೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಮುಂಬರುವ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ವಾರ್ನರ್ ಅವರನ್ನು ಖರೀದಿಸಿದರೆ ಒಳ್ಳೆಯದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವಾರ್ನರ್ 2014 ರಿಂದ 2021ರ ವರೆಗೆ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ಅವರ ನಾಯಕತ್ವದಲ್ಲಿ ಎಸ್​ಆರ್​ಹೆಚ್​ ಚಾಂಪಿಯನ್ ಪಟ್ಟಕ್ಕೇರಿತ್ತು. ಎಡಗೈ ಬ್ಯಾಟರ್ ಎಂಟು ಆವೃತ್ತಿಗಳಲ್ಲಿ ಸನ್​ ರೈಸರ್ಸ್​ ಪರ ಒಟ್ಟು 95 ಪಂದ್ಯಗಳನ್ನು ಆಡಿದ್ದಾರೆ. 142.59 ಸ್ಟ್ರೈಕ್ ರೇಟ್‌ನೊಂದಿಗೆ 4014 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಐಪಿಎಲ್ 2022ರ ಆಟಗಾರರ ಹರಾಜಿನ ವೇಳೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಾರ್ನರ್​ ಅವರನ್ನು ಖರೀದಿಸಿತ್ತು. 8 ವರ್ಷಗಳ ಬಳಿಕ ವಾರ್ನರ್​ ಎಸ್‌ಆರ್‌ಹೆಚ್ ತಂಡದಿಂದ ಬೇರ್ಪಟ್ಟರು. ಬಳಿಕ ತಂಡದ ಆಯ್ಕೆಗಾರರ ವಿರುದ್ಧ ತೆಲುಗು ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಅತ್ಯುತ್ತಮ ಆಟಗಾರರನನ್ನು ತಂಡದಿಂದ ಕೈ ಬಿಡಬಾರದಿತ್ತು ಎಂದು ಟೀಕಿಸಿದ್ದರು.

ವಾರ್ನರ್ ಆಗಾಗ್ಗೆ ಅಲ್ಲು ಅರ್ಜುನ್ ಅವರ ಚಲನಚಿತ್ರಗಳು ಮತ್ತು ಹಾಡುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಪುಷ್ಪಾ ಸಿನಿಮಾದ ‘ತಗ್ಗೆದೆಲೇ’ ಡೈಲಾಗ್ ವಿಡಿಯೋ ಭಾರೀ ವೈರಲ್​ ಆಗಿತ್ತು.

ಇದನ್ನೂ ಓದಿ:ಮಹಿಳಾ ಟಿ20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐ: ಕನ್ನಡತಿ ಶ್ರೇಯಾಂಕಾ ಪಾಟೀಲ್​​​​ಗೂ ಸ್ಥಾನ - Womens T20 World Cup

ABOUT THE AUTHOR

...view details