ಹೈದರಾಬಾದ್: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ-2025ರ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಂದು ಬಿಡುಗಡೆ ಮಾಡಿದೆ. ಮೆಗಾ ಟೂರ್ನಿ ಫೆಬ್ರವರಿ 19ರಿಂದ ಆರಂಭವಾಗಲಿದೆ. ಭಾರತದ ನಿರೀಕ್ಷೆಯಂತೆ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲೇ ನಡೆಯಲಿದೆ. ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಈ ಅವಧಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯುತ್ತವೆ. ಎಲ್ಲಾ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ.
Check out the full fixtures for the ICC Champions Trophy 2025. pic.twitter.com/oecuikydca
— ICC (@ICC) December 24, 2024
ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಂತೆ ಫೆಬ್ರವರಿ 19ರಂದು ಮೊದಲ ಪಂದ್ಯದಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ಆತಿಥೇಯ ಪಾಕಿಸ್ತಾನ ಮುಖಾಮುಖಿಯಾಗುವ ಮೂಲಕ ಟೂರ್ನಿ ಆರಂಭವಾಗಲಿದೆ. ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 10 ಮೀಸಲು ದಿನವಾಗಿದೆ.
ಟೂರ್ನಿಯ ಅಂಗವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ. ಲೀಗ್ ಸುತ್ತಿನ ಅಂತಿಮ ಪಂದ್ಯದಲ್ಲಿ ಭಾರತ ಮಾರ್ಚ್ 2ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
🚨 Announced 🚨
— ICC (@ICC) December 24, 2024
The official fixtures for the upcoming ICC Champions Trophy 2025 are out!
Read on ⬇https://t.co/V8AVhRxxYu
ಎ ಗುಂಪು: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ
ಬಿ ಗುಂಪು: ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:
ದಿನಾಂಕ | ಮುಖಾಮುಖಿ | ಸ್ಥಳ |
19 ಫೆಬ್ರವರಿ, 2025 | ಪಾಕಿಸ್ತಾನ vs ನ್ಯೂಜಿಲೆಂಡ್ | ಕರಾಚಿ |
20 ಫೆಬ್ರವರಿ, 2025 | ಭಾರತ vs ಬಾಂಗ್ಲಾದೇಶ | ದುಬೈ |
21 ಫೆಬ್ರವರಿ, 2025 | ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ | ಕರಾಚಿ |
22 ಫೆಬ್ರವರಿ, 2025 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಲಾಹೋರ್ |
23 ಫೆಬ್ರವರಿ, 2025 | ಪಾಕಿಸ್ತಾನ vs ಭಾರತ | ದುಬೈ |
24 ಫೆಬ್ರವರಿ, 2025 | ಬಾಂಗ್ಲಾದೇಶ vs ನ್ಯೂಜಿಲೆಂಡ್ | ರಾವಲ್ಪಿಂಡಿ |
25 ಫೆಬ್ರವರಿ, 2025 | ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ | ರಾವಲ್ಪಿಂಡಿ |
26 ಫೆಬ್ರವರಿ, 2025 | ಅಫ್ಘಾನಿಸ್ತಾನ vs ಇಂಗ್ಲೆಂಡ್ | ಲಾಹೋರ್ |
27 ಫೆಬ್ರವರಿ, 2025 | ಪಾಕಿಸ್ತಾನ vs ಬಾಂಗ್ಲಾದೇಶ | ರಾವಲ್ಪಿಂಡಿ |
28 ಫೆಬ್ರವರಿ, 2025 | ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ | ಲಾಹೋರ್ |
1 ಮಾರ್ಚ್, 2025 | ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ | ಕರಾಚಿ |
2 ಮಾರ್ಚ್, 2025 | ನ್ಯೂಜಿಲೆಂಡ್ vs ಭಾರತ | ದುಬೈ |
4 ಮಾರ್ಚ್, 2025 | ಸೆಮಿಫೈನಲ್ 1 | ದುಬೈ |
5 ಮಾರ್ಚ್, 2025 | ಸೆಮಿಫೈನಲ್ 2 | ಲಾಹೋರ್ |
9 ಮಾರ್ಚ್, 2025 | ಫೈನಲ್ | ಲಾಹೋರ್/ದುಬೈ |
10 ಮಾರ್ಚ್, 2025 | ಮೀಸಲು ದಿನ | ಲಾಹೋರ್/ದುಬೈ |
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?