ಕರ್ನಾಟಕ

karnataka

ETV Bharat / sports

ಭಾರತೀಯ ಯುವ ಕ್ರಿಕೆಟಿಗರಿಗೆ ​ದ್ರಾವಿಡ್ ಸಲಹೆ ಏನು?:​ ವಿಡಿಯೋ ನೋಡಿ - Rahul Dravid

ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್ ಟೆಸ್ಟ್​ ಸರಣಿ ಗೆಲುವಿನ ಬಳಿಕ ಯುವ ಆಟಗಾರರಿಗೆ ಭಾರತ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಕೆಲವು ಸಲಹೆಗಳನ್ನು ನೀಡಿದ್ದಾರೆ.

Etv Bharatಭಾರತೀಯ ಯುವ ಆಟಗಾರರಿಗೆ ​ದ್ರಾವಿಡ್ ಸಲಹೆ:​ ವಿಡಿಯೋ ಹಂಚಿಕೊಂಡ ಬಿಸಿಸಿಐ
ಭಾರತೀಯ ಯುವ ಆಟಗಾರರಿಗೆ ​ದ್ರಾವಿಡ್ ಸಲಹೆ:​ ವಿಡಿಯೋ ಹಂಚಿಕೊಂಡ ಬಿಸಿಸಿಐ

By PTI

Published : Mar 10, 2024, 7:17 PM IST

ಧರ್ಮಶಾಲಾ:ಇಂಗ್ಲೆಂಡ್​ ವಿರುದ್ಧದ 5 ​ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 4-1ರ ಅಂತರದಿಂದ ಗೆದ್ದುಕೊಂಡ ನಂತರ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನ ಕಠಿಣ ಹಾದಿಯಲ್ಲಿ ಗೆಲುವು ಸಾಧಿಸಲು ಒಗ್ಗಟ್ಟಿನ ಪ್ರದರ್ಶನದ ಪ್ರಾಮುಖ್ಯತೆಯ ಕುರಿತು ಯುವ ಆಟಗಾರರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

5ನೇ ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ​​ ಟೀಮ್​ ಇಂಡಿಯಾದ ಆಟಗಾರರೊಂದಿಗೆ ದ್ರಾವಿಡ್ ನಡೆಸಿದ ಸಂಭಾಷಣೆಯ ವಿಡಿಯೋವನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದೆ.

ಇದರಲ್ಲಿ ಮೊದಲಿಗೆ ದ್ರಾವಿಡ್, "ಈ ಸರಣಿಯಲ್ಲಿ ತಂಡದ ಮೇಲೆ ಸಾಕಷ್ಟು ಒತ್ತಡವಿತ್ತು. ಅದರ ಹೊರತಾಗಿಯೂ ಉತ್ತಮ ಪ್ರದರ್ಶನ ತೋರಿ ನಾವು ಸರಣಿ ಗೆದ್ದೆವು. ಇದು ಖುಷಿ ಸಂಗತಿ. ಟೆಸ್ಟ್ ಕ್ರಿಕೆಟ್ ಎಂಬುದು ಸುಲಭದ ಆಟವಲ್ಲ, ಇದು ಕೌಶಲ್ಯದ ದೃಷ್ಟಿಯಿಂದಲೂ, ದೈಹಿಕ ದೃಷ್ಟಿಯಿಂದಲೂ ಮತ್ತು ಮಾನಸಿಕವಾಗಿಯೂ ಕಷ್ಟಕರವಾದದ್ದು. ಹಾಗಾಗಿ ಅದನ್ನು ಈ ಎಲ್ಲಾ ರೀತಿಯಲ್ಲೂ ಆಡಲು ಸಿದ್ಧರಿರಬೇಕು" ಎಂದರು.

ಒಬ್ಬರಿಗೊಬ್ಬರ ಬೆಂಬಲ ಬಹಳ ಮುಖ್ಯ: "ಬಹಳಷ್ಟು ಯುವ ಕ್ರಿಕೆಟರ್​ಗಳು ವಿಶೇಷವಾಗಿ ಈ ಟೆಸ್ಟ್​ ಪಂದ್ಯಗಳನ್ನು ಆಡಬಯಸುವ ಬ್ಯಾಟರ್‌ ಅಥವಾ ಬೌಲರ್ ಯಾರೇ ಆಗಿರಲಿ, ಈ ಮಾದರಿಯಲ್ಲಿ ಯಶಸ್ವಿಯಾಗಬೇಕಾದರೆ ಒಬ್ಬರಿಗೊಬ್ಬರು ಬೆಂಬಲ ನೀಡುವುದು ಬಹಳ ಮುಖ್ಯ. ನೀವು ಇತರೆ ಆಟಗಾರರೊಂದಿಗೆ ಪರಸ್ಪರ ಒಗ್ಗಟ್ಟಿನೊಂದಿಗೆ ಆಡಿದಾಗ ಮಾತ್ರ ಯಶಸ್ಸಿನ ಹಾದಿ ತಲುಪಲು ಸಾಧ್ಯ. ಇದೇ ರೀತಿ ಎಲ್ಲಾ ಯುವ ಆಟಗಾರರು ಭವಿಷ್ಯದಲ್ಲೂ ಒಟ್ಟಿಗೆ ಪರಸ್ಪರ ಬೆಂಬಲಿಸುತ್ತಾರೆ ಎಂಬ ನಂಬಿಕೆ ನನಗಿದೆ".

"ಈ ಸರಣಿಯಲ್ಲಿ ನಾವು ಹಲವು ಬಾರಿ ಏಳು-ಬೀಳುಗಳೊಂದಿಗೆ ಕಠಿಣ ಸವಾಲನ್ನು ಎದುರಿಸಿದ್ದೇವೆ. ಆದರೂ ಅವೆಲ್ಲವನ್ನೂ ಮೀರಿ ಸರಣಿಯಲ್ಲಿ ಅದ್ಭುತ ಕಮ್​ಬ್ಯಾಕ್ ಮಾಡಿದ್ದೇವೆ. ಇದು ನಿಮ್ಮಲ್ಲಿರುವ ಕೌಶಲ್ಯಗಳನ್ನು ಎತ್ತಿ ತೋರಿಸುತ್ತದೆ" ಎಂದು ಆಟಗಾರರನ್ನು ಪ್ರಶಂಸಿಸಿದರು.

ಬಳಿಕ ರೋಹಿತ್ ಶರ್ಮಾ ಮಾತನಾಡಿ, "ಇದು ಉತ್ತಮ ಸರಣಿಯಾಗಿತ್ತು. ಎಲ್ಲಾ ಆಟಗಾರರು ಜವಾಬ್ದಾರಿಯುತವಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಎಲ್ಲರೂ ಒಟ್ಟಾಗಿ ಈ ಸರಣಿಯ ಗೆಲುವಿಗೆ ಗಣನೀಯ ಕೊಡುಗೆ ನೀಡಿದ್ದಾರೆ" ಎಂದರು.

ಇದನ್ನೂ ಓದಿ:ವಿಶ್ವ ಕ್ರಿಕೆಟ್​ಗೆ ಭಾರತವೇ ನಂಬರ್​ 1; ಮೂರೂ ಮಾದರಿಗಳಲ್ಲಿ ಟೀಂ ಇಂಡಿಯಾ ಅಗ್ರಜ

ABOUT THE AUTHOR

...view details