ವಿಶಾಖಪಟ್ಟಣಂ (ಆಂಧ್ರಪ್ರದೇಶ):2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22 ರಂದು ಆರಂಭವಾಗುತ್ತಿದ್ದು, ಈ ಮೆಗಾ ಟೂರ್ನಿಗಾಗಿ ಡೆಲ್ಲಿ ಕ್ಯಾಪಿಟಲ್ ಮಿನಿ ಹರಾಜಿನಲ್ಲಿ ಮೂರು ಅದ್ಭುತ ಯುವ ದೇಶೀಯ ಪ್ರತಿಭೆಗಳಾದ ಆಲ್ ರೌಂಡರ್ ಸುಮಿತ್ ಕುಮಾರ್, ವಿಕೆಟ್ ಕೀಪರ್ - ಬ್ಯಾಟರ್ ಕುಮಾರ್ ಕುಶಾಗ್ರಾ ಮತ್ತು ಬ್ಯಾಟರ್ ರಿಕಿ ಭುಯಿ ಬಿಡ್ ಮಾಡಿದೆ. ಈಗಾಗಲೇ ಈ ಆಟಗಾರರು ಪ್ರಸ್ತುತ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಪೂರ್ವ - ಋತುವಿನ ಶಿಬಿರದಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಕ್ರಿಕೆಟ್ ಡಿಸಿ ಡೈರೆಕ್ಟರ್ ಸೌರವ್ ಗಂಗೂಲಿ ಅವರ ಮಾರ್ಗ ದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
19 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,245 ರನ್ಗಳಿಸಿರುವ ಯುವ ಬ್ಯಾಟರ್ ಕುಮಾರ್ ಕುಶಾಗ್ರಾ, ಮೊದಲ ಬಾರಿಗೆ ಐಪಿಎಲ್ ತಂಡವೊಂದರ ಭಾಗವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ನಾನು ಮೊದಲ ಬಾರಿಗೆ ಐಪಿಎಲ್‌ನ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ. ನಾನು ಅನೇಕ ದೊಡ್ಡ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಆಡುವ ಅವಕಾಶ ಪಡೆಯುತ್ತೇನೆ. ಅವರನ್ನು ನೋಡುತ್ತಾ ಬೆಳೆದಿದ್ದೇನೆ. ಆದರೆ, ನನ್ನ ಮುಖ್ಯ ಗುರಿ ಡೆಲ್ಲಿ ಪರ ಉತ್ತಮವಾಗಿ ಆಡಿ ಪಂದ್ಯಗಳನ್ನು ಗೆಲ್ಲುವುದಾಗಿದೆ ಎಂದಿದ್ದಾರೆ.
ಅಭ್ಯಾಸದ ವೇಳೆ ಟೀಮ್ ಇಂಡಿಯಾ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರೊಂದಿಗೆ ಕುಶಾಗ್ರ ಬ್ಯಾಟಿಂಗ್ ನಡೆಸಿರುವ ಕುರಿತು ಕೂಡಾ ಅನುಭವ ಹಂಚಿಕೊಂಡಿದ್ದಾರೆ. ರಿಷಭ್ ಪಂತ್ ಅವರೊಂದಿಗೆ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿರುವುದು ಖುಷಿ ತಂದಿದೆ. ಅವರು ನನ್ನ ಆಟ ಬಗ್ಗೆ ಸಾಕಷ್ಟು ವಿಶ್ಲೇಕ್ಷಣೆ ಮಾಡಿ ಹೇಳಿದ್ದಾರೆ. ರಿಷಭ್ ಪಂತ್ ಒಬ್ಬರೇ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಂತು ಏಕಾಂಗಿಯಾಗಿ ಸಿಕ್ಸರ್ಗಳನ್ನು ಬಾರಿಸುತ್ತಿದ್ದರು. ಇದನ್ನು ನೋಡಿದ ಮೇಲೆ ನಾವು ಒಟ್ಟಾಗಿ ಡೆಲ್ಲಿ ಪರ ಅಡಿ ಎಲ್ಲ ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಅನಿಸುತ್ತಿದೆ ಎಂದು ಕುಮಾರ್ ಕುಶಾಗ್ರ ಹೇಳಿದರು.