IPL Mega Auction: ಭಾನುವಾರ (ಇಂದು) ಮೊದಲ ದಿನ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈದಿನ ಮೂವರು ಭಾರತೀಯರು ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಮಾರಟವಾದ ಆಟಗಾರನಾಗಿ ರಿಷಭ್ ಪಂತ್ ದಾಖಲೆ ಬರೆದಿದ್ದಾರೆ. ಜಿದ್ದಾಜಿದ್ದಿನ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂಪಾಯಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.
ಇದೇ ಹರಾಜಿನಲ್ಲಿ ಭಾರತದ ಮತ್ತೊಬ್ಬ ಆಟಗಾರ ಹೆಚ್ಚಿನ ಮೊತ್ತಕ್ಕೆ ಮಾರಾಟ ಆಗಿದ್ದಾರೆ. ನಾಯಕನಾಗಿ ಕಳೆದ ವರ್ಷ ಕೆಕೆಆರ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕೇರಿಸಿದ್ದ ಶ್ರೇಯಸ್ ಅಯ್ಯರ್ ಐಪಿಎಲ್ ಮೆಗಾ ಹರಾಜಿನಲ್ಲಿ ಅತೀ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇವರನ್ನು ಪಂಜಾಬ್ ಕಿಂಗ್ಸ್ 26.75 ಕೋಟಿ ರೂಪಾಯಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.
ಮೂರನೇ ಹೆಚ್ಚಿನ ಮೊತ್ತ ಪಡೆದ ಆಟಗಾರನಾಗಿ ವೆಂಕಟೇಶ್ ಅಯ್ಯರ್ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ 23.75 ಕೋಟಿಗೆ ಖರೀದಿಸಿದೆ. ಏತನ್ಮಧ್ಯೆ IPL ಲೀಗ್ ಮೆಗಾ ಹರಾಜಿನಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಸ್ಪೋಟಕ ಬ್ಯಾಟರ್ವೊಬ್ಬರು ಅನ್ಸೋಲ್ಡ್ ಆಗಿದ್ದಾರೆ.
2009 ರಿಂದ 2024ರ ವರೆಗೆ ಐಪಿಎಲ್ನಲ್ಲಿ ಆಡಿರುವ ಇವರು ನಾಯಕನಾಗಿ ಒಮ್ಮೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದುವರೆಗೂ ಐಪಿಎ ಲ್ನಲ್ಲಿ ಈ ಆಟಗಾರ ಒಟ್ಟು 184 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 6565 ರನ್ಗಳನ್ನು ಕಲೆಹಾಕಿದ್ದಾರೆ. ಅಲ್ಲದೇ ಇವರ ಖಾತೆಯೆಲ್ಲಿ 4 ಶತಕಗಳು ಮತ್ತು 62 ಅರ್ಧಶತಕಗಳು ಸೇರಿವೆ. ಈ ಆಟಗಾರ ಟಿ20 ಅಂತರಾಷ್ಟ್ರೀಯ ಪಂದ್ಯಕ್ಕಿಂತಲೂ ಐಪಿಎಲ್ನಲ್ಲೆ ಹೆಚ್ಚಿ ರನ್ ಮತ್ತು ಶತಕ ಸಿಡಿಸಿದ್ದಾರೆ. ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾರ ನಂತರ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ದಾಖಲೆಯನ್ನೂ ಬರೆದಿದ್ದಾರೆ.
ಹೌದು, ನಾವು ಹೇಳುತ್ತಿರುವುದು ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್ ಬಗ್ಗೆ. ಮೊದಲ ದಿನದ ಹರಾಜಿನಲ್ಲಿ ಬಂದ ವಾರ್ನರ್ ಅವರನ್ನು ಯಾವುದೇ ತಂಡಗಳು ಖರೀದಿಸಲು ಮುಂದೆ ಬರಲಿಲ್ಲ. ಕಳೆದ ಬಾರಿಯ ಮಿನಿ ಹರಾಜಿನಲ್ಲಿ ಡೆಲ್ಲಿ ತಂಡ 6.25 ಕೋಟಿಗೆ ವಾರ್ನರ್ ಅವರನ್ನು ಖರೀದಿಸಿತ್ತು. ಆದರೆ ಈ ಬಾರಿ ಡೆಲ್ಲಿ ಕೂಡ ಹಿಂದೆಟು ಹಾಕಿದೆ. 2 ಕೋಟಿ ಮೂಲಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಡೇವಿಡ್ ವಾರ್ನರ್ಗೆ ಭಾರೀ ನಿರಾಸೆಯಾಗಿದೆ. ಇನ್ನು ಒಂದು ದಿನದ ಹರಾಜು ಬಾಕಿ ಇದ್ದು ನಾಳೆ ಮಾರಾಟ ಆಗುವ ಸಾಧ್ಯತೆ ಇದೆ. ಮತ್ತೊಬ್ಬ ಆಟಗಾರ ದೇವದತ್ ಪಡಿಕ್ಕಲ್ ಕೂಡ ಹರಾಜಿನಲ್ಲಿ ಮಾರಾಟವಾಗದೇ ಅನ್ಸೋಲ್ಡ್ ಆಟಗಾರನಾಗಿ ಉಳಿದರು. ಕಳೆದ ಬಾರಿ 7.75 ಕೋಟಿ ಬಿಕರಿಯಾಗದ್ದ ಪಡಿಕ್ಕಲ್ಗೆ ಈ ಬಾರಿ ನಿರಾಸೆ ಮೂಡಿಸಿದೆ.
ಇದನ್ನೂ ಓದಿ:IPL Auction: ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗನಿಗೆ ಭಾರೀ ನಿರಾಸೆ: Unsold ಆದ ಸ್ಟಾರ್ ಆಟಗಾರ!