ENG vs NZ 1st Test: ನ್ಯೂಜಿಲೆಂಡ್ (New Zealanad) ಮತ್ತು ಇಂಗ್ಲೆಂಡ್ (England) ನಡುವೆ ಟೆಸ್ಟ್ ಸರಣಿ (Test Series) ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಹ್ಯಾಗ್ಲಿ ಓವಲ್ನಲ್ಲಿ ನಡೆದ ಈ ಪಂದ್ಯವನ್ನು ಇಂಗ್ಲೆಂಡ್ ತಂಡ ಟಿ20 ಶೈಲಿಯಲ್ಲಿ ಗೆದ್ದುಕೊಂಡಿದೆ. ಕಿವೀಸ್ ತಂಡ ನೀಡಿದ್ದ ಗುರಿಯನ್ನು ಕೇವಲ 12.4 ಓವರ್‌ಗಳಲ್ಲಿ ತಲುಪಿ ಜಯಭೇರಿ ಬಾರಿಸಿದೆ.
ಪ್ರವಾಸಿ ನ್ಯೂಜಿಲೆಂಡ್ ತಂಡವು ನಾಲ್ಕನೇ ದಿನದಾಟದಂದು ಕೇವಲ 12.4 ಓವರ್‌ಗಳಲ್ಲಿ 104 ರನ್ಗಳನ್ನು ಕಲೆ ಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ 348ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 499 ರನ್ ಗಳಿಸಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 171 ರನ್‌ಗಳ ಇನ್ನಿಂಗ್ಸ್ ಆಡಿದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ತಂಡ 254 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದರಿಂದಾಗಿ ಇಂಗ್ಲೆಂಡ್ಗೆ ಕೇವಲ 104 ರನ್‌ಗಳ ಗುರಿಯನ್ನು ಪಡೆದು ಬೇಸ್‌ಬಾಲ್ ರೀತಿಯಲ್ಲಿ ಬ್ಯಾಟ್ಬೀಸಿ ಪಂದ್ಯದಲ್ಲಿ ಗೆಲುವು ಸಾಧಿಸಿತು.
🏴 ENGLAND WIN! 🏴
— England Cricket (@englandcricket) December 1, 2024
Brydon Carse takes 10 in the match and Harry Brook hits 171 in a brilliant victory in Christchurch 👊 pic.twitter.com/Zil5SWyW7Z
ವಿಶ್ವದಾಖಲೆ ಬರೆದ RCBಯ ಯುವ ಆಟಗಾರ: ಎರಡನೇ ಇನ್ನಿಂಗ್ಸ್‌ನಲ್ಲಿ RCB ಖರೀದಿಸಿದ ಯುವ ಬ್ಯಾಟರ್ ಸ್ಫೋಟಕ ಪ್ರದರ್ಶನ ತೋರಿ ವಿಶ್ವದಾಖಲೆ ಬರೆದಿದ್ದಾರೆ. ಹೌದು, 21 ವರ್ಷದ ಯುವ ಬ್ಯಾಟರ್ ಜಾಕೋಬ್ ಬೆಥೆಲ್ ಕೇವಲ 37 ಎಸೆತಗಳಲ್ಲಿ ಅಜೇಯವಾಗಿ 50ರನ್ ಸಿಡಿಸಿದ್ದಾರೆ. ಇದರೊಂದಿಗೆ ದಾಖಲೆಯನ್ನು ಬರೆದಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಉಳಿದಂತೆ ಜೋ ರೂಟ್ 15 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
10 ವಿಕೆಟ್ ಪಡೆದ ಬೌಲರ್: ಈ ಪಂದ್ಯದಲ್ಲಿ ಇಂಗ್ಲೆಂಡ್ನ ಬೌಲರ್ ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದರು. ಬ್ರೈಡನ್ ಕಾರ್ಸೆ ಎರಡು ಇನ್ನಿಂಗ್ಸ್ಗಳಿಂದ 10 ವಿಕೆಟ್ ಉರುಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಬ್ರೈಡನ್ ಕಾರ್ಸೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೇನ್ ವಿಲಯಮ್ಸನ್ ದಾಖಲೆ: ಮೊದಲ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ (Kane Williamson) ದಾಖಲೆ ಬರೆದಿದ್ದಾರೆ. ಮೊದಲು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿಯಮ್ಸನ್ ತಂಡದ ಪರ ಹೈಸ್ಕೋರರ್ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 93 ರನ್, ಎರಡನೇ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದ ಇವರು ಟೆಸ್ಟ್ನಲ್ಲಿ 9000 ರನ್ ಪೂರೈಸಿದ ಬ್ಯಾಟರ್ ಆಗಿ ತಂಡದ ಪರ ದಾಖಲೆ ಬರೆದರು. ನ್ಯೂಜಿಲೆಂಡ್ ಪರ ಟೆಸ್ಟ್ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ವಿಲಿಯಮ್ಸ್ನ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: WTC ಫೈನಲ್ ರೇಸ್ಗೆ ಮತ್ತೊಂದು ತಂಡ ಎಂಟ್ರಿ: 2ನೇ ಸ್ಥಾನದಿಂದ ಕುಸಿದ ಆಸ್ಟ್ರೇಲಿಯಾ; ಭಾರತಕ್ಕೂ ಸಂಕಷ್ಟ!