ಹೈದರಾಬಾದ್: ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟರ್ ಮತ್ತು ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಗೇಲ್ ಬಾಲ್ಯದ ಜೀವನ ಹೋರಾಟದಿಂದ ಕೂಡಿತ್ತು. ಹಿಂದೊಮ್ಮೆ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಕಷ್ಟದ ಸಮಯವನ್ನು ಎದುರಿಸಿದ್ದ ಗೇಲ್ ಇಂದು ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದಾರೆ. ಹಾಗಾದರೆ ಗೇಲ್ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಈ ಸುದ್ಧಿಯಲ್ಲಿ ತಿಳಿಯಿರಿ.
ಗೇಲ್ ಹಿನ್ನೆಲೆ:ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟರ್ 21 ಸೆಪ್ಟೆಂಬರ್ 1979 ರಂದು ಜಮೈಕಾದ ಕಿಂಗ್ಸ್ಟನ್ನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಆರಂಭಿಕ ದಿನಗಳಲ್ಲಿ ಗೇಲ್ ಸಾಕಷ್ಟು ಆರ್ಥಿಕ ಸಮಸ್ಯಗಳನ್ನು ಎದುರಿಸಿದ್ದರು. ಕುಟುಂಬದ ನಿರ್ವಾಹಣೆಗಾಗಿ ಪ್ಲಾಸ್ಟಿಕ್ ಬಾಟಲ್ ಮತ್ತು ಕಸವನ್ನು ಸಂಗ್ರಹಿಸುತ್ತಿದ್ದರು. ಅಲ್ಲದೇ ವಾಸಿಸಲು ಸರಿಯಾದ ಮನೆಯಿಲ್ಲದೇ ಪುಟ್ಟ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಮತ್ತೊಂದೆಡೆ ತಾಯಿ ಚೀಪ್ಸ್ ಮಾರಾಟ ಮಾಡುತ್ತಿದ್ದರು ಎಂದು ಸ್ವತಃ ಗೇಲ್ ಅವರೇ ಸಂದರ್ಶನವೊಂದರಲ್ಲೇ ಈ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಅದೇಷ್ಟೋ ರಾತ್ರಿಗಳು ಉಪವಾಸದಿಂದ ಕಳೆದಿದ್ದರು. ಆದರೆ ಇಂದು ಖ್ಯಾತ ಕ್ರಿಕೆಟರ್ ಆಗಿ ಬೆಳೆದಿರುವ ಗೇಲ್ 337 ಕೋಟಿ ಆಸ್ತಿಯ ಒಡೆಯನಾಗಿದ್ದಾರೆ.