ಚೆನ್ನೈ:ಐಪಿಎಲ್ನ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಎಂ.ಎ.ಚಿದಾಂಬರಂ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್ಗಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (98) ಮತ್ತು ಡ್ಯಾರೆಲ್ ಮಿಚೆಲ್ (52) ಅವರ ಅತ್ಯುತ್ತಮ ಇನ್ನಿಂಗ್ಸ್ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 212 ರನ್ಗಳನ್ನು ಪೇರಿಸಿದೆ. ಉಳಿದಂತೆ ಅಜಿಂಕ್ಯಾ ರಹಾನೆ (9), ಶಿವಂ ದುಬೆ (39*), ಧೋನಿ (5*) ರನ್ ಕೊಡುಗೆ ನೀಡಿದ್ದಾರೆ.
ಗಾಯಕ್ವಾಡ್ ಶತಕ ವಂಚಿತ:ಸಿಎಸ್ಕೆ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟ್ ಬೀಸಿದ್ದಾರೆ. 54 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸ್ರ ಸಮೇತ 98 ರನ್ ಸಿಡಿಸಿದ್ದಾರೆ. ಶತಕಕ್ಕೆ 2 ರನ್ಗಳು ಬೇಕಿದ್ದಾಗ ಬೌಂಡರಿ ಸಿಡಿಸಲು ಹೋಗಿ ನಿತೀಶ್ ರೆಡ್ಡಿಗೆ ಕ್ಯಾಚ್ ನೀಡಿ ಶತಕ ವಂಚಿತರಾದರು.