ಕರ್ನಾಟಕ

karnataka

ETV Bharat / sports

4 ಎಸೆತಗಳಲ್ಲಿ 92ರನ್​ ಬಿಟ್ಟುಕೊಟ್ಟ ಬೌಲರ್​: ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ! - 92 RUNS IN 4 BALLS

ಬೌಲರ್​ವೊಬ್ಬ ಕೇವಲ 4 ಎಸೆತಗಳಲ್ಲಿ 92 ರನ್​ ಬಿಟ್ಟುಕೊಟ್ಟು ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ.

HIGHEST RUNS IN ONE OVER  BANGLADESH SECOND DIVISION CRICKET  4 ಎಸೆತ 92ರನ್  WHICH BOWLER CONCEDED MOST RUNS
ಸಾಂದರ್ಭಿಕ ಚಿತ್ರ (Getty Images)

By ETV Bharat Sports Team

Published : 4 hours ago

92 Runs in 4 Ball:ಕ್ರಿಕೆಟ್​ನಲ್ಲಿ ಒಬ್ಬ ಬೌಲರ್​ ಒಂದು ಓವರ್​ನಲ್ಲಿ ಎಷ್ಟು ರನ್​ ಬಿಟ್ಟುಕೊಡಬಹುದು ಎಂದು ಕೇಳಿದರೇ​ 36 ರನ್​ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಬೌಲರ್​ ಕೇವಲ 4 ಎಸೆತಗಳಲ್ಲಿ ಬರೋಬ್ಬರಿ 92 ರನ್​ ಬಿಟ್ಟುಕೊಟ್ಟು ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ. ಇದು ನಂಬಲಸಾಧ್ಯವಾದರೂ ನಿಜವಾದ ಸಂಗತಿ.

2017ರಲ್ಲಿ ಢಾಕಾ ಎರಡನೇ ಡಿವಿಷನ್​ ಕ್ರಿಕೆಟ್​ ಲೀಗ್​ ಪಂದ್ಯಾವಳಿಗಳು ನಡೆದಿದ್ದವು. ಇದರಲ್ಲಿ ಆಕ್ಸಿಯೊಮ್​​ ಮತ್ತು ಲಾಲ್ಮಾಟಿಯಾ ತಂಡಗಳ ನಡುವೆ 50 ಓವರ್​ಗಳ ಪಂದ್ಯವನ್ನು ಆಯೋಜಿಸಲಾಗಿತ್ತು. ಪಂದ್ಯ ಆರಂಭದಿಂದಲೇ ವಿವಾದಗಳಿಂದ ಶುರುವಾಗಿತ್ತು. ಇದರಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಲಾಲ್ಮಾಟಿಯಾ 14 ಓವರ್​ಗಳಲ್ಲಿ 88 ರನ್​ ಗಳಿಸಿ ಆಲೌಟ್​ ಆಗಿತ್ತು. ಇದಕ್ಕುತ್ತರಾಗಿ ಆಕ್ಸಿಯೊಮ್​ ತಂಡವೂ ಕೇವಲ 4 ಎಸೆತಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 92 ರನ್​ ಕಲೆಹಾಕಿ ಗೆಲುವು ಸಾಧಿಸಿತ್ತು. ಆದರೆ ಈ ಎಲ್ಲ ರನ್​ ಬ್ಯಾಟರ್​ನಿಂದ ಹರಿದು ಬಂದಿರಲಿಲ್ಲ. ಬದಲಿಗೆ ಅಂಪೈರ್​ ವಿರುದ್ಧ ಸಿಟ್ಟಿನಿಂದ ಉದ್ದೇಶ ಪೂರ್ವಕವಾಗಿಯೇ ಬೌಲರ್​ ರನ್​ ಬಿಟ್ಟುಕೊಟ್ಟಿದ್ದರು.

ಬೌಲರ್​ ಹೀಗೆ ಮಾಡಲು ಕಾರಣವೇನು?ವಾಸ್ತವಾಗಿ, ಉಭಯ ತಂಡಗಳ ನಡುವಿನ ಈ ಪಂದ್ಯವು ಟಾಸ್​ನಿಂದಲೇ ವಿವಾದಕ್ಕೆ ಗುರಿಯಾಗಿತ್ತು. ಲಾಲ್ಮಾಟಿಯಾದ ನಾಯಕನಿಗೆ ಟಾಸ್​ ಬಳಿಕ ನಾಣ್ಯವನ್ನು ನೋಡಲು ಅಂಪೈರ್​ ಅವಕಾಶ ನೀಡದೇ ನೇರವಾಗಿ ಬ್ಯಾಟಿಂಗ್​​ ಮಾಡಲು ಕಳುಹಿಸಲಾಗಿತ್ತು. ನಂತರ ಪಂದ್ಯದಲ್ಲೂ ಅಂಪೈರ್‌ಗಳ ನಿರ್ಧಾರಗಳು ಲಾಲ್ಮಾಟಿಯ ವಿರುದ್ಧವಾಗಿ ಬಂದ ಕಾರಣ ಅಲ್ಪಮೊತ್ತಕ್ಕೆ ಕುಸಿದಿತ್ತು. ಇದರಿಂದಾಗಿ ಬೌಲರ್ ಸುಜೋನ್ ಮಹಮೂದ್ ಸೇರಿದಂತೆ ಇಡೀ ತಂಡ ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿತ್ತು. ನಂತರ ಅಂಪೈರ್​ ವರ್ತನೆ ಖಂಡಿಸಿ ಸುಜೋನ್​ ಬೌಲಿಂಗ್​ ಮೂಲಕ ಪ್ರತಿಭಟಿಸಿದ್ದರು.

4 ಎಸೆತಗಳಲ್ಲಿ 92 ರನ್​ ಬಿಟ್ಟುಕೊಟ್ಟಿದ್ದು ಹೇಗೆ?

ಲಾಲ್ಮಾಟಿಯಾ ಪರ ಮೊದಲ ಓವರ್ ಬೌಲಿಂಗ್ ಮಾಡಿದ್ದ ಬೌಲರ್ ಸುಜೋನ್ ಮಹಮೂದ್ ತಮ್ಮ ಓವರ್​ನಲ್ಲಿ ವೈಡ್​ ಮತ್ತು ನೋಬಾಲ್​ ಮೂಲಕವೇ 80 ರನ್​ ಬಿಟ್ಟುಕೊಟ್ಟಿದ್ದರು. ಅವರ ಓವರ್​ನಲ್ಲಿ 65 ವೈಡ್​ ಬಾಲ್​ಗಳನ್ನು ಎಸೆದಿದ್ದರು. ನಂತರ 15 ನೋ ಬಾಲ್​ಗಳನ್ನು ಎಸೆದಿದ್ದರು. ಇದರಿಂದಾಗಿ ತಂಡಕ್ಕೆ ಹೆಚ್ಚುವರಿಯಾಗಿ 80 ರನ್​ಗಳು ಹರಿದಬಂದವು. ನಂತರ 4 ಕಾನೂನುಬದ್ಧ ಬೌಲಿಂಗ್​ ಮಾಡಿದರು. ಈ ವೇಳೆ ಮುಸ್ತಫಿಜುರ್ ರೆಹಮಾನ್ 4 ಬೌಂಡರಿ ಬಾರಿಸಿ 16 ರನ್ ಗಳಿಸಿದರು. ಇದರಿಂದಾಗಿ ಆಕ್ಸಿಯೊಮ್​ ಕೇವಲ 4 ಎಸೆತಗಳಲ್ಲಿ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ:ಒಂದೇ ಓವರ್​ನಲ್ಲಿ 36 ಅಲ್ಲ 77ರನ್​ ಬಿಟ್ಟುಕೊಟ್ಟ ಬೌಲರ್​: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!

ABOUT THE AUTHOR

...view details