ಪ್ಯಾರಿಸ್(ಫ್ರಾನ್ಸ್): ಭಾರತದ ಕುಸ್ತಿಪಟು ಅಂಶು ಮಲಿಕ್ ಅವರು ಮಹಿಳೆಯರ ಫ್ರೀಸ್ಟೈಲ್ 57 ಕೆ.ಜಿ ಕುಸ್ತಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಈ ಪಂದ್ಯದಲ್ಲಿ ಅಂಶು ಅವರನ್ನು ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ಹೆಲೆನ್ ಲೂಯಿಸ್ ಮಾರೊಲಿಸ್ 2-7 ಅಂತರದಿಂದ ಮಣಿಸಿದರು.
ಮರೊಲಿಸ್ ಮೊದಲ ನಿಮಿಷದಲ್ಲಿ 2 ಪಾಯಿಂಟ್ ಕಲೆ ಹಾಕಿದ್ದರು. ಇನ್ನೂ 2 ನಿಮಿಷ ಬಾಕಿ ಇರುವಂತೆಯೇ ಅವರು ಮುನ್ನಡೆಯಲ್ಲಿದ್ದರು. ಮೊದಲ ಸುತ್ತಿನಲ್ಲೇ ಅಂಶು ಪ್ರಯತ್ನ ವಿಫಲವಾಗಿತ್ತು. ಈ ಸುತ್ತಿನಲ್ಲಿ ಒಂದೇ ಒಂದು ಅಂಕವನ್ನೂ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಎರಡನೇ ಸುತ್ತಿನಲ್ಲೂ ಅಮೆರಿಕದ ಕುಸ್ತಿಪಟು ಅಂಶು ಮೇಲೆ ಪ್ರಾಬಲ್ಯ ಮೆರೆದರು.
ಹೆಲೆನಾ ಅಂಶು ವಿರುದ್ಧ ಮತ್ತೆ 2 ಅಂಕಗಳನ್ನು ದಾಖಲಿಸಿದರು. ಇದಾದ ಬಳಿಕ ಮತ್ತೆ ಎರಡು ಅಂಕ ಕಸಿದರು. ಒಂದು ನಿಮಿಷ ಬಾಕಿ ಇರುವಾಗ ಸ್ಕೋರ್ 6-0 ಆಗಿತ್ತು. ಕೊನೆಯಲ್ಲಿ ಅಂಶು ಅಮೆರಿಕ ಕುಸ್ತಿಪಟು ವಿರುದ್ಧ 2 ಅಂಕ ದಾಖಲಿಸಿದರು. ಇದಾದ ಬಳಿಕ ಹೆಲೆನಾ ಅಂಶುವನ್ನು ರಿಂಗ್ನಿಂದ ಹೊರಹಾಕುವ ಮೂಲಕ ಮತ್ತೊಂದು ಅಂಕ ಪಡೆದರು. ಇದರೊಂದಿಗೆ 7-2 ಅಂತರದಿಂದ ಪಂದ್ಯ ಗೆದ್ದುಕೊಂಡರು.
2016ರ ರಿಯೊ ಒಲಿಂಪಿಕ್ಸ್‌ನಲ್ಲಿ 53 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಚಾಂಪಿಯನ್ ಆಗಿದ್ದ ಅಮೆರಿಕದ ಮಾರೊಲಿಸ್ ಕ್ವಾರ್ಟರ್‌ಫೈನಲ್‌ನಲ್ಲಿ ಪೋಲೆಂಡ್‌ನ ಅನ್ಹೆಲಿನಾ ಲಿಸಾಕ್ ಅವರನ್ನು ಎದುರಿಸಿದರೆ, ಸೆಮಿಫೈನಲ್‌ನಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ಸುಗುಮಿ ಸಕುರೈ ಅವರನ್ನು ಎದುರಿಸುವರು. ಅನ್ಶು ಮಲಿಕ್ ಅವರು ರಿಪೆಚೇಜ್ ಸುತ್ತು ಪ್ರವೇಶಿಸಲು, ಮರೂಲಿಸ್ ತನ್ನ ಮುಂದಿನ ಇಬ್ಬರು ಎದುರಾಳಿಗಳನ್ನು ಸೋಲಿಸಿ ಫೈನಲ್‌ಗೆ ತಲುಪುಬೇಕಾಗಿದೆ.
ಇದನ್ನೂ ಓದಿ:ಅಂತಿಮ್ ಪಂಘಲ್ಗೆ ಕುಸ್ತಿ ಅಖಾಡದಿಂದ 3 ವರ್ಷ ನಿಷೇಧ ಸಾಧ್ಯತೆ - Antim Panghal