ETV Bharat / sports

ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದು ನಾಲ್ವರು ಮಾತ್ರ: ಇದರಲ್ಲಿಬ್ಬರು ಭಾರತೀಯರು! - DOUBLE CENTURY IN T20 CRICKET

ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಕೇವಲ ನಾಲ್ವರು ಮಾತ್ರ ದಿಶ್ವತಕ ಸಿಡಿಸಿ ದಾಖಲೆ ಬರೆದಿದ್ದಾರೆ.

T20 DOUBLE CENTURY  WHO SCORED DOUBLE CENTURY IN T20  ಟಿ20 ದ್ವಿಶತಕ  T20 CRICKET RECORDS
ಸಾಂದರ್ಭಿಕ ಚಿತ್ರ (Getty Images)
author img

By ETV Bharat Sports Team

Published : Dec 23, 2024, 4:08 PM IST

Double Century In T20: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವುದು ಸುಲಭವಲ್ಲ. ಏಕೆಂದರೆ, ಗುರಿ ನೀಡಲು ಅಥವಾ ಬೆನ್ನಟ್ಟಲು ಎರಡೂ ತಂಡಗಳಿಗೂ ತಲಾ 120 ಎಸೆತಗಳಷ್ಟೇ ಇರುತ್ತವೆ. ಇಂಥ ಚುಟುಕು ಸ್ವರೂಪದಲ್ಲಿ ವೈಯಕ್ತಿಕವಾಗಿ ದ್ವಿಶತಕ ಸಿಡಿಸುವುದೆಂದರೆ ಅದು ಕಷ್ಟವೇ ಸರಿ. ಹೀಗಿದ್ದರೂ, ನಾಲ್ವರು ಈ ಸಾಧನೆ ಮಾಡಿದ್ದಾರೆ.

ಟಿ20 ಇತಿಹಾಸದಲ್ಲಿ ಈವರೆಗೆ 4 ಮಂದಿ ಬ್ಯಾಟರ್​ಗಳು ಮಾತ್ರ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಈ ಸ್ವರೂಪದಲ್ಲಿ ಮೊಟ್ಟ ಮೊದಲ ದ್ವಿಶತಕ ಮೂಡಿಬಂದಿದ್ದು 2008ರಲ್ಲಿ. ಬಳಿಕ 2021, 2022 ಮತ್ತು 2024ರಲ್ಲಿ ವೈಯಕ್ತಿಕ ದ್ವಿಶತಕ ದಾಖಲಾಗಿತ್ತು.

ರಹಕೀಮ್ ಕಾರ್ನ್‌ವಾಲ್ (ವೆಸ್ಟ್​ ಇಂಡೀಸ್​): ದೈತ್ಯ ವಿಂಡೀಸ್ ಬ್ಯಾಟರ್ ಕಾರ್ನ್​ವಾಲ್ ಅವರು​ ಯುಎಸ್ ಮೂಲದ ಅಟ್ಲಾಂಟಾ ಓಪನ್ ಟಿ20 ಲೀಗ್ 2022ರಲ್ಲಿ ಇಂಥದ್ದೊಂದು ಅದ್ಭುತ ಸಾಧನೆ ಮಾಡಿದ್ದರು. ಅಟ್ಲಾಂಟಾ ಫೈರ್ ತಂಡಕ್ಕಾಗಿ ಆಡಿದ ಇವರು ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು.

T20 DOUBLE CENTURY  WHO SCORED DOUBLE CENTURY IN T20  ಟಿ20 ದ್ವಿಶತಕ  T20 CRICKET RECORDS
ರಹಕೀಮ್ ಕಾರ್ನ್‌ವಾಲ್ (IANS)

ಟೂರ್ನಿಯಲ್ಲಿ ಸೈಡ್ ಸ್ಕ್ವೇರ್ ಡ್ರೈವ್ ವಿರುದ್ಧ ನಡೆದ ಪಂದ್ಯದಲ್ಲಿ ಕಾರ್ನ್​ವಾಲ್​ ಕೇವಲ 77 ಎಸೆತಗಳಲ್ಲಿ 205 ರನ್ ಪೇರಿಸಿದ್ದರು. ಇವರ ಇನ್ನಿಂಗ್ಸ್​ನಲ್ಲಿ 17 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳಿದ್ದವು. 266.23 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದರು.

ಸಾಗರ್ ಕುಲಕರ್ಣಿ: ಟಿ20 ಕ್ರಿಕೆಟ್‌ನಲ್ಲಿ 200 ರನ್ ಬಾರಿಸಿದ ಮೊದಲ ಬ್ಯಾಟರ್ ಸಿಂಗಾಪುರದ ಸಾಗರ್ ಕುಲಕರ್ಣಿ. ಇವರು ಮರೀನಾ ಕ್ಲಬ್‌ಗೆ ಆಡಿ ಈ ಮೈಲಿಗಲ್ಲು ಸಾಧಿಸಿದ್ದರು. ಈ ಇನ್ನಿಂಗ್ಸ್​ನಲ್ಲಿ 56 ಎಸೆತಗಳನ್ನೆದುರಿಸಿ 219 ರನ್ ಕಲೆಹಾಕಿದ್ದರು. ಸಾಗರ್ ಅದ್ಭುತ ಬ್ಯಾಟಿಂಗ್​ ನೆರವಿನಿಂದ ತಂಡ 20 ಓವರ್‌ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 368 ರನ್​ಗಳ ಬೃಹತ್​ ಮೊತ್ತ ದಾಖಲಿಸಿತ್ತು.

ಸುಬೋಧ್ ಭಾರ್ತಿ: ಟಿ20ಯಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್​ ಎಂಬ ದಾಖಲೆ ದೆಹಲಿಯ ಸುಬೋಧ್ ಭಾರ್ತಿ ಹೆಸರಲ್ಲಿದೆ. 2021ರಲ್ಲಿ ನಡೆದಿದ್ದ ಇಂಟರ್-ಕ್ಲಬ್ ಟಿ20 ಪಂದ್ಯದಲ್ಲಿ ಸಿಂಬಾ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡದ ಸುಭೋಧ್​ 79 ಎಸೆತಗಳಲ್ಲಿ 205 ರನ್ ಗಳಿಸಿ ಅಜೇಯರಾಗುಳಿದಿದ್ದರು. ಆಲ್‌ರೌಂಡರ್‌ನ ಅದ್ಭುತ ದ್ವಿಶತಕದಿಂದ ಅವರ ತಂಡ 20 ಓವರ್‌ಗಳಲ್ಲಿ 256/1 ರನ್​ ಕಲೆಹಾಕಿತ್ತು. ಇದಕ್ಕುತ್ತರವಾಗಿ ಸಿಂಬಾ 18 ಓವರ್‌ನಲ್ಲಿ 199 ರನ್‌ಗಳಿಗೆ ಆಲೌಟ್ ಆಗಿ ಸೋಲನುಭವಿಸಿತ್ತು.

ಫ್ರಿನ್ಸ್​ ಆಲಪಟ್​: ತ್ರಿಶೂರ್ ಫ್ರಿನ್ಸ್ ಅಲಪಟ್ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟರ್​. 35 ವರ್ಷ ವಯಸ್ಸಿನ ಕ್ರಿಕೆಟಿಗ, ಈ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ, ಆಕ್ಟೋಪಲ್ಸ್ ಕ್ರಿಕೆಟ್ ಕ್ಲಬ್ ಮತ್ತು ಉದ್ಭವ್ ಸ್ಪೋರ್ಟ್ಸ್ ಕ್ಲಬ್ ನಡುವಿನ ತ್ರಿಶೂರ್ ಜಿಲ್ಲಾ 'ಬಿ' ಡಿವಿಷನ್ ಲೀಗ್ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ್ದರು.

ಪ್ರಿನ್ಸ್ ಕೇವಲ 73 ಎಸೆತಗಳಲ್ಲಿ ಬಿರುಸಿನ 200 ರನ್‌ಗಳನ್ನು ಕಲೆಹಾಕಿದ್ದರು. ಇದರಲ್ಲಿ 23 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳಿದ್ದವು. ಇವರ ತಂಡ ಅಂತಿಮವಾಗಿ, 122 ರನ್‌ಗಳಿಂದ ಜಯಗಳಿಸಿತ್ತು. ಪ್ರಿನ್ಸ್ ಕೇರಳದ ಸ್ಥಳೀಯ ಟಿ20 ಸ್ವರೂಪದಲ್ಲಿ ಸಾಕಷ್ಟು ಜನಪ್ರಿಯರು ಮತ್ತು ವೃತ್ತಿಪರ ಕ್ರಿಕೆಟ್ ಆಡುವುದರ ಹೊರತಾಗಿ ತ್ರಿಶೂರ್‌ನ ದೇವಮಾತಾ ಪಬ್ಲಿಕ್ ಸ್ಕೂಲ್‌ನಲ್ಲಿ ಕ್ರಿಕೆಟ್ ತರಬೇತುದಾರರಾಗಿದ್ದಾರೆ.

ಇದನ್ನೂ ಓದಿ: ಪಿವಿ ಸಿಂಧು ವೆಡ್ಸ್ ದತ್ತಾ ಸಾಯಿ: ರಾಜಸ್ಥಾನದಲ್ಲಿ ಗ್ರ್ಯಾಂಡ್ ಸೆಲೆಬ್ರೇಷನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.