ಹೈದರಾಬಾದ್:ಮಿಲಿಯನ್ ಡಾಲರ್ ಕ್ರಿಕೆಟ್ ಎಂದೇ ಪ್ರಸಿದ್ದಿ ಪಡೆದಿರುವ ಐಪಿಎಲ್ ದೇಶ ಮಾತ್ರವಲ್ಲದೇ ವಿಶ್ವಮಟ್ಟದಲ್ಲೂ ಖ್ಯಾತಿ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಆಟಗಾರರ ಆಸೆಯೂ ಆಗಿರುತ್ತದೆ. ಒಂದೊಮ್ಮೆ ಆಟಗಾರರು ಈ ಟೂರ್ನಿಯಲ್ಲಿ ಕ್ಲಿಕ್ ಆದರೇ ಅವರಿಗೆ ನೇಮ್ ಮತ್ತು ಫೇಮ್ ಜತೆಗೆ ಕೈತುಂಬ ಹಣ ಕೂಡ ಬರುತ್ತದೆ. ಹಾಗಾಗಿ ಈ ಟೂರ್ನಿಯನ್ನು ಆಡಲು ದೇಶಿಯರು ಮಾತ್ರವಲ್ಲದೇ ವಿದೇಶಿ ಆಟಗಾರರು ಆಸಕ್ತಿ ತೋರಿಸುತ್ತಾರೆ.
2008ರಲ್ಲಿ ಪ್ರಾರಂಭವಾದ ಈ ಮಹಾ ಟೂರ್ನಿ ಇದೂವರೆಗೆ ಶಯಸ್ವಿಯಾಗಿ 17 ಋತುಗಳನ್ನು ಪೂರ್ಣಗೊಳಿಸಿದೆ. ಮತ್ತೊಂದೆಡೆ ವರ್ಷಗಳು ಉರುಳಿದಂತೆ ಫ್ರಾಂಚೈಸಿಗಳ ಪರ್ಸ್ ಮಿತಿಯೂ ಕೂಡ ಹೆಚ್ಚಳವಾಗುತ್ತಿದೆ. ಈ ಹಿಂದೆ ಐಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಪ್ರತಿ ಫ್ರಾಂಚೈಸಿ 22.5 ಕೋಟಿಗಳ ಪರ್ಸ್ ಮಿತಿಯನ್ನು ಹೊಂದಿತ್ತು. ಇದೀಗ ಇದರ ಮಿತಿ 120 ಕೋಟಿ ರೂ.ಗೆ ಬಂದು ನಿಂತಿದೆ. ಅಂದರೆ 17 ವರ್ಷಗಳಲ್ಲಿ ಸುಮಾರು 600 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಗಾದ್ರೆ ಬನ್ನಿ ಯಾವ ವರ್ಷದಲ್ಲಿ ಪರ್ಸ್ ಮಿತಿ ಹೆಚ್ಚಾಗುತ್ತ ಬಂದಿದೆ ಎಂದು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಪರ್ಸ್ ಮಿತಿ ಹೆಚ್ಚಳ:2008ರಲ್ಲಿ ಆಟಗಾರರನ್ನು ಖರೀದಿಸಲು ಐಪಿಎಲ್ ಫ್ರಾಂಚೈಸಿಗಳು 22.5 ಕೋಟಿ ರೂ ಪರ್ಸ್ ಮಿತಿಯನ್ನು ಹೊಂದಿದ್ದವು. ಆ ನಂತರ 2011ರ ವೇಳೆಗೆ ಇದು ರೂ.43.2 ಕೋಟಿಗೆ ಏರಿಕೆಯಾಗಿದೆ. ಅಂದರೆ ದ್ವಿಗುಣಗೊಂಡಿದೆ. ಅಲ್ಲದೆ, 2014ರ ವೇಳೆಗೆ ಆ ಮಿತಿ 60 ಕೋಟಿ ರೂಗೆ ತಲುಪಿದ್ದು 2018ಕ್ಕೆ 80 ಕೋಟಿ ಮತ್ತು 2022ಕ್ಕೆ ರೂ.90 ಕೋಟಿಗೆ ಬಂದು ನಿಂತಿದೆ. ಇನ್ನು ಮುಂದಿನ ವರ್ಷ ನಡೆಲಿರುವ 18ನೇ ಆವೃತ್ತಿಯ ಐಪಿಎಲ್ ಸೀಸನ್ಗೆ ತಲಾ ಫ್ರಾಂಚೈಸಿಗಳ ಮಿತಿ 120 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಆರಂಭಿಕ ಋತುವಿನಿಂದ ಇದು ಸುಮಾರು 600 ಪಟ್ಟು ಹೆಚ್ಚಳಗೊಂಡಿದೆ.