ETV Bharat / sports

ಪಂತ್​-ಬುಮ್ರಾ ಅಲ್ಲ! 23 ವರ್ಷದ ಆಟಗಾರಗೆ ಟೀಂ ಇಂಡಿಯಾದ ನಾಯಕ ​ಮಾಡಲು ಬಯಸಿದ ಗಂಭೀರ್​!​ - TEAM INDIA NEXT CAPATIAN

Team India Next Capatian: ಮುಖ್ಯ ಕೋಚ್​ ಗೌತಮ್​ ಗಂಭೀರ್, ರೋಹಿತ್​ ಶರ್ಮಾ ಬಳಿಕ 23 ವರ್ಷದ ಯುವ ಆಟಗಾರನನ್ನು ಟೀಂ ಇಂಡಿಯಾದ ನಾಯಕ ಮಾಡಲು ಬಯಸಿದ್ದಾರೆ. ​

YESHASVI JAISWAL  ROHIT SHARMA  WHO IS TEAM INDIA NEXT CAPATIAN  Gautam Gambhir
ಗೌತಮ್​ ಗಂಭೀರ್​ (IANS)
author img

By ETV Bharat Sports Team

Published : Jan 14, 2025, 2:18 PM IST

Team India Next Capatian: ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು? ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಚರ್ಚೆಗಳು ನಡೆದಿದೆ. ಈಗಾಗಲೇ ಟಿ20ಗೆ ವಿದಾಯ ಹೇಳಿರುವ ಹಿಟ್​ಮ್ಯಾನ್​ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಹಿನ್ನಲೆ ಟೆಸ್ಟ್‌ನಿಂದಲೂ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳು ಕೇಳಿ ಬಂದಿದ್ದವು. ಆದರೆ ಇದನ್ನು ತಳ್ಳಿಹಾಕಿರುವ ರೋಹಿತ್​ ಇನ್ನು ಕೆಲ ಸಮಯ ದೀರ್ಘ ಸ್ವರೂಪದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

ಅಲ್ಲದೇ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡುವವರೆಗೆ ರೋಹಿತ್ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರೋಹಿತ್ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪ್ರಸ್ತುತ ಟೀಂ ಇಂಡಿಯಾದ ಉಪನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ಅವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ರೋಹಿತ್ ಲಭ್ಯವಾಗಿದ್ದಾಗ, ಬುಮ್ರಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆದರೆ ಬುಮ್ರಾ ಅವರ ಫಿಟ್ನೆಸ್ ಮತ್ತು ಟೆಸ್ಟ್ ವೃತ್ತಿಜೀವನವನ್ನು ಎಷ್ಟು ಕಾಲ ವಿಸ್ತರಿಸಬಹುದು ಎಂಬುದರ ಬಗ್ಗೆ ಅನುಮಾನಗಳಿವೆ. ಈ ಕಾರಣದಿಂದಾಗಿ, ಆಯ್ಕೆದಾರರು ಮತ್ತು ಕೋಚ್ ಬುಮ್ರಾಗೆ ನಾಯಕನ ಜವಾಬ್ದಾರಿಯನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳತ್ತ ಗಮನಹರಿಸಲಾಗುತ್ತಿದೆ.

ಏತನ್ಮಧ್ಯೆ, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಹೆಸರು ಕೂಡ ನಾಯಕನ ರೇಸ್​​ನಲ್ಲಿ ಕೇಳಿ ಬಂದಿವೆ. ಜೈಶ್ವಾಲ್ ಸ್ಥಿರ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದಲ್ಲಿ ಉತ್ತಮ ಆರಂಭಿಕ ಬ್ಯಾಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಅವರನ್ನೇ ನಾಯಕರನ್ನಾಗಿ ನೇಮಿಸಿದರೆ ಒಳ್ಳೆಯದು ಎಂದು ಕೋಚ್ ಗಂಭೀರ್ ಬಯಸಿರುವುದಾಗಿ ವರದಿ ಆಗಿದೆ.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಟೀಂ ಇಂಡಿಯಾದ ಮುಂದಿನ ನಾಯಕನಾಗಿ ರಿಷಬ್ ಪಂತ್‌ ಮೇಲೆ ಒಲವು ತೋರುತ್ತಿದ್ದಾರೆ. ಆದರೆ ತುಂಬಾ ಆಕ್ರಮಣಕಾರಿಯಾಗಿ ಮತ್ತು ಕೆಲವೊಮ್ಮೆ ಬೇಜವಾಬ್ದಾರಿಯಿಂದ ಆಡುತ್ತಾರೆ ಎಂಬ ಟೀಕೆಗೆ ಗುರಿಯಾಗಿರುವ ಪಂತ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸುವುದು ಸರಿಯಾದ ವಿಚಾರವೇ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ಮತ್ತೊಂದೆಡೆ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಮತ್ತು ತುಂಬಾ ಚಿಕ್ಕ ವಯಸ್ಸಿನ ಜೈಸ್ವಾಲ್​ ಅವರನ್ನು ನಾಯಕನಾಗಿ ಆಯ್ಕೆ ಮಾಡಲು ಅನುಭವಿ ಆಟಗಾರರಿಂದ ಆಕ್ಷೇಪಗಳು ಎದುರಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಬಿಸಿಸಿಐ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಕೇವಲ 42 ನಿಮಿಷ ಪಂದ್ಯ ಆಡಲು ₹895 ಕೋಟಿ ಪಡೆದ ಅಥ್ಲೀಟ್​​​​: ನಿಮಿಷಕ್ಕೆ ಪಡೆದ ಹಣ ಎಷ್ಟು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.