ಹೈದರಾಬಾದ್: ಏಕದಿನ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಶತಕ ಬಾರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಅಪರೂಪಕ್ಕೆ ಒಮ್ಮೆ ಎಂಬಂತೆ ಕೆಲವೊಮ್ಮೆ ದ್ವಿಶತಕಗಳು ಕಂಡು ಬರುತ್ತವೆ. ಆದರೆ ಇದೂ ಕೂಡ ತೀರಾ ಅಪರೂಪ. ಈ ಸ್ವರೂಪದಲ್ಲಿ ದ್ವಿಶತಕ ಬಾರಿಸುವುದು ಎಂದರೇ ಸುಲಭದ ಮಾತಲ್ಲ. ಕೆಲವೇ ಕೆಲ ಬ್ಯಾಟರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ.
ಆದರೇ ಇಲ್ಲೊಬ್ಬ ಮಹಿಳಾ ಕ್ರಿಕೆಟರ್ ಏಕದಿನ ಸ್ವರೂಪದಲ್ಲಿ ಒಂದಲ್ಲ, ಎರಡಲ್ಲೂ, ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಹೌದು, ಬೆಂಗಳೂರಿನಲ್ಲಿ ನಡೆದಿದ್ದ ಅಂಡರ್ - 19 ಮಹಿಳಾ ಏಕದಿನ ಪಂದ್ಯಾವಳಿಯಲ್ಲಿ ಮುಂಬೈ - ಮೇಘಾಲಯ ತಂಡಗಳ ಮುಖಾಮುಖಿಯಾಗಿದ್ದವು. ಈ ವೇಳೆ ಮುಂಬೈ ಪರ ಕಣಕ್ಕಿಳಿದಿದ್ದ 14 ವರ್ಷದ ಇರಾ ಜಾಧವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ ತ್ರಿಶತಕ ಬಾರಿಸಿದ್ದಾರೆ. ಮೈದಾನಲ್ಲಿ ಬೌಂಡರಿಗಳ ಸುರಿಮಳೆಯನ್ನೇ ಹರಿಸಿದ್ದಾರೆ.
Record Alert 🚨
— BCCI Domestic (@BCCIdomestic) January 12, 2025
Ira Jadhav of Mumbai has smashed the highest individual score in Women's Under 19 One Day Trophy history 🔥
She scored 346* (157) against Meghalaya in Bangalore, powering Mumbai to a massive 563/3 👌👌@IDFCFIRSTBank
Scorecard ▶️ https://t.co/Jl8p278OuG pic.twitter.com/0dMN6RKeHD
ಈ ಪಂದ್ಯದಲ್ಲಿ 157 ಎಸೆತಗಳನ್ನು ಎದುರಿಸಿದ ಇರಾ ಅಜೇಯವಾಗಿ 346 ರನ್ ಚಚ್ಚಿದರು. ಇದರಲ್ಲಿ 42 ಬೌಂಡರಿ ಮತ್ತು 16 ಸಿಕ್ಸರ್‌ಗಳನ್ನು ಬಾರಿಸಿದರು. ಈ ಯುವ ಪ್ಲೇಯರ್ 220 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಅಲ್ಲದೇ ಕೇವಲ 138 ಎಸೆತಗಳಲ್ಲಿ ತಮ್ಮ ತ್ರಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ, ಇರಾ ಜಾಧವ್ ಅಂಡರ್-19 ಏಕದಿನ ಟ್ರೋಫಿಯಲ್ಲಿ ತ್ರಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿ ವಿಶ್ವದಾಖಲೆ ಬರೆದರು.
ಇರಾ ಜಾಧವ್ ಅಜೇಯ ಇನ್ನಿಂಗ್ಸ್ ನೆರವಿನಿಂದ ಮುಂಬೈ ಮೂರು ವಿಕೆಟ್ ನಷ್ಟಕ್ಕೆ 563 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮೇಘಾಲಯ ಕನಿಷ್ಠ 50ರ ಗಡಿ ತಲುಪಲು ಸಾಧ್ಯವಾಗದೇ ಕೇವಲ 19 ರನ್ ಗಳಿಗೆ ಸರ್ವಪತನ ಕಂಡಿತು. ಮೇಘಾಲಯ ಪರ ಯಾರೊಬ್ಬರು ಎರಡಂಕಿ ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಮುಂಬೈ ತಂಡ 544 ರನ್ ಗಳ ಬೃಹತ್ ಜಯ ಸಾಧಿಸಿತು.
ಮಂಧಾನ ದಾಖಲೆ ಬ್ರೇಕ್: ಅಂಡರ್-19 ಏಕದಿನ ಟ್ರೋಫಿಯಲ್ಲಿ ಭಾರತ ಪರ ಅತ್ಯಧಿಕ ಇನ್ನಿಂಗ್ಸ್ ಆಡಿದ ದಾಖಲೆ ಸ್ಮೃತಿ ಮಂಧಾನ ಅವರ ಹೆಸರಲ್ಲಿತ್ತು. ಸ್ಮೃತಿ ಮಂಧಾನ ಅಜೇಯವಾಗಿ 224 ರನ್ ಗಳಿಸಿದ್ದರು. ಆದರೆ ಇರಾ ಜಾಧವ್ ಅವರ ದಾಖಲೆ ಮುರಿದು ಹಾಕಿದ್ದಾರೆ.
ಇದಲ್ಲದೇ, ರಾಘವಿ ಬಿಶ್ಟ್, ಜೆಮಿಮಾ ರೊಡ್ರಿಗಸ್ ಮತ್ತು ಸನಿಕಾ ಚಾಲ್ಕೆ ಕೂಡ 19 ವರ್ಷದೊಳಗಿನವರ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ್ದಾರೆ. ಜನವರಿ 18 ರಿಂದ ಪ್ರಾರಂಭವಾಗುವ ಅಂಡರ್-19 ಮಹಿಳಾ ಟಿ 20 ವಿಶ್ವಕಪ್‌ಗಾಗಿ ಇರಾ ಜಾಧವ್ ಅವರನ್ನು ಭಾರತೀಯ ತಂಡದಲ್ಲಿ ಆಯ್ಕೆ ಮಾಡಲಾಗಿದೆ, ಆದರೆ ಅವರು ಸ್ಟ್ಯಾಂಡ್‌ಬೈ ಆಟಗಾರ್ತಿಯಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: 6 ಪಂದ್ಯ, 664 ರನ್, 5 ಶತಕ!: ದೇಶಿ ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡಿಗ; ಭಾರತ ತಂಡಕ್ಕೆ ಕಮ್ಬ್ಯಾಕ್ ಸಾಧ್ಯತೆ!