ಕರ್ನಾಟಕ

karnataka

ETV Bharat / photos

ಸ್ಕೈಡೈವ್ ಮೂಲಕ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ನಟ ಕಿರಣ್ ರಾಜ್ - ಸ್ಕೈ ಡ್ರೈವ್

ಯುವ ನಟ ಕಿರಣ್ ರಾಜ್ ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದು (ಸ್ಕೈ ಡ್ರೈವ್) 'ರಾನಿ' ಚಿತ್ರದ ಟೈಟಲ್ ಅನಾವರಣಗೊಳಿಸಿ ಗಮನ ಸೆಳೆದಿದ್ದಾರೆ‌. ಆ್ಯಕ್ಟಿಂಗ್ ಜೊತೆಗೆ ಅಡ್ವೆಂಚರ್ಸ್ ಮಾಡೋದು ಅಂದ್ರೆ ಅವರಿಗೆ ಪಂಚಪ್ರಾಣ.‌ ಹಾಗಾಗಿ ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದು ಚಿತ್ರದ ಟೈಟಲ್ ಅನಾವರಣಗೊಳಿಸಿದ್ದಾರೆ‌. ಈ ಹಿಂದೆ ಬಾಲಿವುಡ್​​ನ ಚಿತ್ರವೊಂದನ್ನು ಇದೇ ರೀತಿ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಪಟ್ಟಿಗೆ ಕಿರಣ್ ರಾಜ್ ಕೂಡ ಸೇರಿಕೊಂಡಿದ್ದಾರೆ.

By ETV Bharat Karnataka Team

Published : Feb 19, 2024, 1:14 PM IST

ಧಾರಾವಾಹಿ, ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳಿಂದ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಕಿರಣ್ ರಾಜ್.
‘ಕನ್ನಡತಿ’ ಧಾರಾವಾಹಿ ನಂತರ ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ನೂತನ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿರುವ ಯುವ ನಟ.
ಆ್ಯಕ್ಟಿಂಗ್ ಜೊತೆಗೆ ಅಡ್ವೆಂಚರ್ಸ್ ಮತ್ತು ಸಾಹಸಮಯ ಆಟೋಟಗಳ ಮೂಲಕ ಗಮನ ಸೆಳೆಯುತ್ತಿರುವ ಯೆಂಗ್​ ಸ್ಟಾರ್​.​
ದುಬೈನಲ್ಲಿ 13 ಸಾವಿರ ಅಡಿ ಎತ್ತರದಿಂದ ಜಿಗಿದು (ಸ್ಕೈ ಡ್ರೈವ್) ತಮ್ಮ 'ರಾನಿ' ಚಿತ್ರದ ಟೈಟಲ್ ಅನಾವರಣಗೊಳಿಸಿದ ನಟ.
ಚಿತ್ರದ ಶೀರ್ಷಿಕೆ ಬಿಡುಗಡೆಗೆ ಭಾರಿ ಸಾಹಸ ಮಾಡುವ ಮೂಲಕ ಸಾಹಸಿಗರ ಪಟ್ಟಿಗೆ ಸೇರ್ಪಡೆಯಾದ ಸ್ಯಾಂಡಲ್​ವುಡ್​ ಯುವ ನಟ.
ನಾನು ಸ್ವಲ್ಪ ಭಿನ್ನ. ಹಾಗಾಗಿ ಸ್ಕೈಡ್ರೈವ್ ಮೂಲಕ 'ರಾನಿ' ಚಿತ್ರದ ಶೀರ್ಷಿಕೆ ಅನಾವರಣ ಮಾಡಿದೆ ಎನ್ನುತ್ತಾರೆ ನಾಯಕ ಕಿರಣ್ ರಾಜ್.
ಈ ಹಿಂದೆ ಬಾಲಿವುಡ್​​ನ YODHA ಚಿತ್ರದ ಟೈಟಲ್ ಅನ್ನು ಸಹ ಸ್ಕೈಡೈವ್ ಮಾಡಿ ಬಿಡುಗಡೆ ಮಾಡಲಾಗಿತ್ತು. ಈಗ ನಮ್ಮ 'ರಾನಿ' ಸಿನಿಮಾ ಅಂತಾರೆ ಕಿರಣ್ ರಾಜ್.
ಕಿರಣ್‌ ರಾಜ್ ಜತೆಗೆ ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ ಸುರೇಶ್‌, ಉಗ್ರಂ ಮಂಜು ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ಪ್ರಮೋದ್‌ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದು ಮಣಿಕಾಂತ್‌ ಕದ್ರಿ ಟ್ಯೂನ್‌ ಹಾಕಿದ್ದಾರೆ.
ಇದು ಆ್ಯಕ್ಷನ್ ಚಿತ್ರವಾಗಿರುವುದರಿಂದ ಚಿತ್ರದಲ್ಲೂ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತವೆ ಅನ್ನೋದು ತಂಡದ ಮಾತು.

ABOUT THE AUTHOR

...view details