ಉದಯೋನ್ಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ವಿದೇಶಿ ಬಂಡವಾಳದ ಲಭ್ಯತೆಗಾಗಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ನ್ಯಾಯಸಮ್ಮತ ಮತ್ತು ನಿಖರ ರೇಟಿಂಗ್ ನೀಡಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಾಯಿಸಿದ್ದಾರೆ.
ಮೂಡಿಸ್, ಫಿಚ್ ಮತ್ತು ಸ್ಟ್ಯಾಂಡರ್ಡ್ ಮತ್ತು ಪೂವರ್ಸ್‌ನಂಥ ಸಂಸ್ಥೆಗಳ ನೀತಿ, ನಿರೂಪಕರು ಭಾರತೀಯ ಆರ್ಥಿಕತೆಯ ಗಾತ್ರ ಮತ್ತು ಬೆಳವಣಿಗೆಯ ಕುರಿತು ರೇಟಿಂಗ್ ನೀಡುತ್ತಿದ್ದಾರೆ. ಆದರೆ, ಈ ಏಜೆನ್ಸಿಗಳು ನೀಡುವ ರೇಟಿಂಗ್ಗಿಂತ ಭಾರತದ ಆರ್ಥಿಕತೆ ಇನ್ನಷ್ಟು ಮೇಲ್ಮಟ್ಟದಲ್ಲಿದೆ. ರೇಟಿಂಗ್ ಏಜೆನ್ಸಿಗಳು ಸುಧಾರಣೆ ದರದ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಸಚಿವೆ ನಿರ್ಮಲಾ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ವಾರ್ಷಿಕ ಸಭೆಯಲ್ಲಿ 'ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಆರ್ಥಿಕತೆ' ಕುರಿತು ಮಾತನಾಡುವಾಗ ಸೀತಾರಾಮನ್, ಸಾರ್ವಭೌಮದ ರೇಟಿಂಗ್ನಲ್ಲಿ ನಿಖರತೆ ಮತ್ತು ನ್ಯಾಯಸಮ್ಮತೆಯ ಕುರಿತು ಅವರು ಧ್ವನಿ ಎತ್ತಿದರು. ಸಾರ್ವಭೌಮ ರೇಟಿಂಗ್‌ಗಳು ಬಂಡವಾಳಕ್ಕೆ ನ್ಯಾಯಯುತ ಪ್ರವೇಶ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಸುಧಾರಿತ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಆರ್ಥಿಕ ಮೂಲಭೂತ ಅಂಶಗಳನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸಬೇಕು ಎಂದು ಅವರು ತಿಳಿಸಿದರು.
ಬಂಡವಾಳ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಇಎಮ್‌ಡಿಇಗಳ ಆರ್ಥಿಕ ಮೂಲಭೂತ ಅಂಶಗಳನ್ನು ಸಮರ್ಪಕವಾಗಿ ಲೆಕ್ಕಹಾಕಲು ಸಾರ್ವಭೌಮ ರೇಟಿಂಗ್‌ಗಳ ಅವಶ್ಯಕತೆ ಇದೆ. ಇವು ಖಾಸಗಿ ಬಂಡವಾಳವನ್ನು ಆಕರ್ಷಿಸುವ ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದಿದ್ದಾರೆ.
ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಎಂಗೇಜ್ಮೆಂಟ್ ಹೆಚ್ಚಿಸಿಕೊಳ್ಳಲು ರೇಟಿಂಗ್ನ ವಿಧಾನಗಳಲ್ಲಿ ಸುಧಾರಣೆ ಮಾಡಬೇಕಿದ್ದು, ದೊಡ್ಡ ಏಜೆನ್ಸಿಗಳು ದೇಶದ ಮರುಪಾವತಿ ಸಾಮರ್ಥ್ಯ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚು ನಿಖರವಾಗಿ ಸೆರೆಹಿಡಿಯುತ್ತವೆ. ಹಣಕಾಸು ಸಚಿವಾಲಯದ ಪ್ರಕಾರ, ಅವರು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಮರುಪಾವತಿ ಮಾಡುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಪ್ರತಿಬಿಂಬಿಸುವ ಮೂಲಭೂತ ಅಂಶಗಳನ್ನು ಅವರು ಸಂಗ್ರಹಿಸುವುದನ್ನು ಖಚಿತಪಡಿಸಿಕೊಳ್ಳುವ ವಿಧಾನದಲ್ಲಿ ಸುಧಾರಣೆಗಳಿಗೆ ಸಚಿವೆ ಕರೆ ನೀಡಿದರು.
ಭಾರತದ ಸಾರ್ವಭೌಮ ಸಾಲದ ರೇಟಿಂಗ್ ಹೇಗಿದೆ?: ಭಾರತದಲ್ಲಿ ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್, ಫಿಟೆಕ್ ರೇಟಿಂಗ್ ಮತ್ತು ಮೂಡಿಸ್ ಇನ್ವೆಸ್ಟರ್ ಸರ್ವೀಸ್ ಎಂಬ ಮೂರು ದೊಡ್ಡ ರೇಟಿಂಗ್ ಏಜೆನ್ಸಿಗಳಿವೆ. ಈ ಏಜೆನ್ಸಿಗಳ ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ದೇಶದ ಆರ್ಥಿಕ ಬೆಳವಣಿಗೆ ದರ, ಸರ್ಕಾರದ ವೆಚ್ಚದ ಸಂಯೋಜನೆ, ಸಾಲದ ಸ್ಥಿತಿ, ಮೂಲಭೂತ ಶಕ್ತಿ ಮತ್ತು ಆರ್ಥಿಕತೆಯ ದೌರ್ಬಲ್ಯ ಮುಂತಾದ ವಿವಿಧ ಅಂಶಗಳನ್ನು ಅಧ್ಯಯನ ಮತ್ತು ವಿಶ್ಲೇಷಿಸುತ್ತಾರೆ.
ರೇಟಿಂಗ್‌ನಿಂದ ಪ್ರಯೋಜನವೇನು?: ವಿದೇಶಿ ಹೂಡಿಕೆದಾರರು ದೇಶದಲ್ಲಿ ಹೂಡಿಕೆ ಮಾಡಲು ಈ ಸಾರ್ವಭೌಮ ರೇಟಿಂಗ್‌ಗಳನ್ನು ಅವಲಂಬಿಸಿದ್ದಾರೆ. ರೇಟಿಂಗ್ ಹೆಚ್ಚಿದ್ದರೆ ಅದು ಸಾಲ ಪಡೆಯಲು ಸಹಾಯವಾಗುತ್ತದೆ. ಇದು ದೇಶದ ಚಾಲ್ತಿಯಲ್ಲಿರುವ ಬಡ್ಡಿದರ ಮೇಲೆ ಪರಿಣಾಮ ಬೀರುತ್ತದೆ.
ಒಂದು ದೇಶದ ಸಾರ್ವಭೌಮ ರೇಟಿಂಗ್ ಅತ್ಯಧಿಕವಾಗಿದ್ದರೆ, ಅದು ಕಡಿಮೆ ವೆಚ್ಚದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ, ಸಾರ್ವಭೌಮ ರೇಟಿಂಗ್ ಕಡಿಮೆಯಿದ್ದರೆ ಅದರ ಎರವಲು ವೆಚ್ಚ ಹೆಚ್ಚಾಗುತ್ತದೆ. ಇದು ದೇಶದಲ್ಲಿ ಚಾಲ್ತಿಯಲ್ಲಿರುವ ಬಡ್ಡಿದರಗಳ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮ ಬೀರುತ್ತದೆ.
ಈ ರೇಟಿಂಗ್ನಲ್ಲಿ ಉನ್ನತೀಕರಿಸುವಂತೆ ಕಳೆದೊಂದು ದಶಕದಿಂದ ಭಾರತ ಕೇಳುತ್ತಿದೆ. 2013ರ ಮೇಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಎರಡನೇ ಅವಧಿಯಲ್ಲಿ, ಬಳಿಕ 2013ರಲ್ಲಿ ಪಿ.ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಸಾರ್ವಜನಿಕವಾಗಿ ದೇಶದ ರೇಟಿಂಗ್ ಉನ್ನತೀಕರಿಸುವಂತೆ ಕರೆ ನೀಡಿದ್ದರು.