ನವದೆಹಲಿ: ಕೇಂದ್ರ ಸರ್ಕಾರವು 2025 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕರ್ನಾಟಕದ ಸಾಧಕರಿಗೆ 1 ಪದ್ಮವಿಭೂಷಣ, 2 ಪದ್ಮಭೂಷಣ, 6 ಪದ್ಮಶ್ರೀ ಗೌರವ ದಕ್ಕಿದೆ. ಶನಿವಾರ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಒಟ್ಟಾರೆ 7 ಪದ್ಮವಿಭೂಷಣ, 19 ಪದ್ಮಭೂಷಣ, 113 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕರ್ನಾಟಕದ ಸಾಧಕರ ಪಟ್ಟಿ: ಕಲೆ ವಿಭಾಗದಲ್ಲಿ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದೆ. ಸಾಹಿತ್ಯ ಮತ್ತು ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೂರ್ಯ ಪ್ರಕಾಶ ಮತ್ತು ಕಲಾ ಕ್ಷೇತ್ರದಲ್ಲಿ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟವಾಗಿದೆ.
ಇನ್ನೂ, ಪದ್ಮಶ್ರೀ ಪ್ರಶಸ್ತಿಗಳ ಪೈಕಿ 6 ಮಂದಿಗೆ ಗೌರವ ಸಂದಿದೆ. ಕಲಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತರ, ಹಾಸನ್ ರಘು, ವೆಂಕಪ್ಪ ಅಂಬಾಜಿ ಸುಗುತೇಕರ್, ರಿಕಿ ಕೇಜ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ವಾಣಿಜ್ಯ ಮತ್ತು ಉದ್ಯಮ ವಿಭಾಗದಲ್ಲಿ ಪ್ರಶಾಂತ್ ಪ್ರಕಾಶ್, ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪ್ರಶಸ್ತಿ ಪ್ರಕಟವಾಗಿದೆ.
ಪ್ರಶಸ್ತಿಗಳ ಪೂರ್ಣ ಪಟ್ಟಿ ಹೀಗಿದೆ
ಪದ್ಮವಿಭೂಷಣ
- ದುವ್ವೂರಿ ನಾಗೇಶ್ವರ ರೆಡ್ಡಿ (ಔಷಧಿ) - ತೆಲಂಗಾಣ
- ನ್ಯಾಯಮೂರ್ತಿ ಜಗದೀಶ್ ಖೇಹರ್ (ನಿವೃತ್ತ) (ಸಾರ್ವಜನಿಕ ಕ್ಷೇತ್ರ) - ಚಂಡೀಗಢ
- ಕುಮುದಿನಿ ರಜನಿಕಾಂತ್ ಲಖಿಯಾ (ಕಲೆ) - ಗುಜರಾತ್
- 1. ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಕಲೆ) - ಕರ್ನಾಟಕ
- ಎಂಟಿವಿ ವಾಸುದೇವನ್ ನಾಯರ್ (ಮರಣೋತ್ತರ) (ಸಾಹಿತ್ಯ, ಶಿಕ್ಷಣ) - ಕೇರಳ
- ಒಸಾಮು ಸುಜುಕಿ (ಮರಣೋತ್ತರ) (ವಾಣಿಜ್ಯ, ಕೈಗಾರಿಕೆಗಳು) - ಜಪಾನ್
- ಶಾರದ ಸಿನ್ಹಾ (ಕಲೆ) - ಬಿಹಾರ
ಪದ್ಮಭೂಷಣ
- ನಂದಮೂರಿ ಬಾಲಕೃಷ್ಣ (ಕಲೆ) - ಆಂಧ್ರಪ್ರದೇಶ
- 2. ಎ. ಸೂರ್ಯ ಪ್ರಕಾಶ್ (ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ) - ಕರ್ನಾಟಕ
- 3. ಅನಂತ್ ನಾಗ್ (ನಟನೆ) - ಕರ್ನಾಟಕ
- ಬಿಬೇಕ್ ದೆಬ್ರಾಯ್ (ಮರಣೋತ್ತರ) (ಸಾಹಿತ್ಯ, ಶಿಕ್ಷಣ) - NCT ದೆಹಲಿ
- ಜತಿನ್ ಗೋಸ್ವಾಮಿ (ಕಲೆ) - ಅಸ್ಸಾಂ
- ಜೋಸ್ ಚಾಕೊ ಪೆರಿಯಪ್ಪುರಂ (ಔಷಧ) - ಕೇರಳ
- ಕೈಲಾಶ್ ನಾಥ್ ದೀಕ್ಷಿತ್ (ಇತರ- ಪುರಾತತ್ವ) - NCT ದೆಹಲಿ
- ಮನೋಹರ್ ಜೋಶಿ (ಮರಣೋತ್ತರ) (ಸಾರ್ವಜನಿಕ ವ್ಯವಹಾರಗಳು) - ಮಹಾರಾಷ್ಟ್ರ
- ನಲಿ ಕುಪ್ಪುಸ್ವಾಮಿ ಚೆಟ್ಟಿ (ವಾಣಿಜ್ಯ, ಕೈಗಾರಿಕೆ) - ತಮಿಳುನಾಡು
- ಪಿಆರ್ ಶ್ರೀಜೇಶ್ (ಕ್ರೀಡೆ) - ಕೇರಳ
- ಪಂಕಜ್ ಪಟೇಲ್ (ವಾಣಿಜ್ಯ, ಕೈಗಾರಿಕೆಗಳು) - ಗುಜರಾತ್
- ಪಂಕಜ್ ಉದಾಸ್ (ಮರಣೋತ್ತರ) (ಕಲೆ) - ಮಹಾರಾಷ್ಟ್ರ
- ರಾಮ್ ಬಹದ್ದೂರ್ ರಾಯ್ (ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ) - ಉತ್ತರ ಪ್ರದೇಶ
- ಸಾಧ್ವಿ ಋತಂಭರಾ (ಸಮಾಜ ಸೇವೆ) - ಉತ್ತರ ಪ್ರದೇಶ
- ಎಸ್. ಅಜಿತ್ ಕುಮಾರ್ (ಕಲೆ) - ತಮಿಳುನಾಡು
- ಶೇಖರ್ ಕಪೂರ್ (ಕಲೆ) - ಮಹಾರಾಷ್ಟ್ರ
- ಶೋಭನಾ ಚಂದ್ರಕುಮಾರ್ (ಕಲೆ) - ತಮಿಳುನಾಡು
- ಸುಶೀಲ್ ಕುಮಾರ್ ಮೋದಿ (ಮರಣೋತ್ತರ) (ಸಾರ್ವಜನಿಕ ವ್ಯವಹಾರಗಳು) - ಬಿಹಾರ
- ವಿನೋದ್ ಧಾಮ್ (ವಿಜ್ಞಾನ ಮತ್ತು ಇಂಜಿನಿಯರಿಂಗ್) - USA
ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಎಲ್ಲಾ ಕನ್ನಡಿಗ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 25, 2025
ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿರುವ ಶ್ರೀ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು (ಕಲೆ)
ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀ ಎ. ಸೂರ್ಯ ಪ್ರಕಾಶ್ ಅವರು (ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ), ಶ್ರೀ ಅನಂತ… pic.twitter.com/0rWDmwnxk6
ಪದ್ಮಶ್ರೀ ಪ್ರಶಸ್ತಿಗಳು
- ಜೋನಾಸ್ ಮಚೆಟ್ಟಿ (ವೇದಾಂತ ಗುರು) - ಬ್ರೆಜಿಲ್
- ಹರ್ವಿಂದರ್ ಸಿಂಗ್ (ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ) - ಹರಿಯಾಣ
- ಭೀಮ್ ಸಿಂಗ್ ಭಾವೇಶ್ (ಸಮಾಜ ಕೆಲಸ) - ಬಿಹಾರ
- ಪಿ.ದಕ್ಷಿಣಾ ಮೂರ್ತಿ (ಡ್ರಮ್ಮರ್)- ಪುದುಚೇರಿ
- L. ಹ್ಯಾಂಗ್‌ಥಿಂಗ್ (ಕೃಷಿ-ಹಣ್ಣುಗಳು)- ನಾಗಾಲ್ಯಾಂಡ್
- ಬೇರು ಸಿಂಗ್ ಚೌಹಾಣ್ (ಜಾನಪದ ಗಾಯಕ) - ಮಧ್ಯಪ್ರದೇಶ
- ಶೇಖಾ ಎ.ಜೆ. ಅಲ್ ಸಬಾಹ್ (ಯೋಗ) - ಕುವೈತ್
- ನರೇನ್ ಗುರುಂಗ್ (ಜಾನಪದ ಗಾಯಕ) - ನೇಪಾಳ
- ಹರಿಮಾನ್ ಶರ್ಮಾ (ಸೇಬು ಬೆಳೆಗಾರ) - ಹಿಮಾಚಲ ಪ್ರದೇಶ
- ಜುಮ್ಡೆ ಯೋಮ್ಗಮ್ ಗಾಮ್ಲಿನ್ (ಸಾಮಾಜಿಕ ಕಾರ್ಯಕರ್ತ) - ಅರುಣಾಚಲ ಪ್ರದೇಶ
- ವಿಲಾಸ್ ಡಾಂಗ್ರೆ (ಹೋಮಿಯೋಪತಿ ವೈದ್ಯ) - ಮಹಾರಾಷ್ಟ್ರ
- 4. ವೆಂಕಪ್ಪ ಅಂಬಾಜಿ ಸುಗುತೇಕರ್ (ಜಾನಪದ ಗಾಯಕ) - ಕರ್ನಾಟಕ
- ನಿರ್ಮಲಾ ದೇವಿ (ಕರಕುಶಲ) - ಬಿಹಾರ
- ಜೋಯ್ನಾಚರಣ್ ಬತಾರಿ (ತಿಮ್ಸ ಕಲಾವಿದ)- ಅಸ್ಸಾಂ
- ಸುರೇಶ್ ಸೋನಿ (ಸಮಾಜ ಕೆಲಸ - ಬಡವರ ವೈದ್ಯ) - ಗುಜರಾತ್
- ರಾಧಾ ಬಹಿನ್ ಭಟ್ (ಸಾಮಾಜಿಕ ಕಾರ್ಯಕರ್ತೆ)- ಉತ್ತರಾಖಂಡ
- ಪಾಂಡಿ ರಾಮ್ ಮಾಂಡವಿ (ಕಲಾವಿದ) - ಛತ್ತೀಸ್‌ಗಢ
- ಲಿಬಿಯಾ ಲೋಬೋ ಸರ್ದೇಸಾಯಿ (ಸ್ವಾತಂತ್ರ್ಯ ಹೋರಾಟಗಾರ) - ಗೋವಾ
- ಗೋಕುಲ್ ಚಂದ್ರ ದಾಸ್ (ಕಲೆ)- ಪಶ್ಚಿಮ ಬಂಗಾಳ
- ಸಾಲಿ ಹೋಳ್ಕರ್ (ನೇಕಾರ)- ಮಧ್ಯಪ್ರದೇಶ
- ಮಾರುತಿ ಭುಜರಂಗರಾವ್ ಚಿಟಂಪಲ್ಲಿ (ಸಂಸ್ಕೃತಿ, ಶಿಕ್ಷಣ)- ಮಹಾರಾಷ್ಟ್ರ
- ಬತುಲ್ ಬೇಗಂ (ಜಾನಪದ ಕಲಾವಿದೆ) - ರಾಜಸ್ಥಾನ
- ವೇಲು ಅಸನ್ (ಡ್ರಮ್ಮರ್) - ತಮಿಳುನಾಡು
- 5.ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ (ಗೊಂಬೆಯಾಟ) - ಕರ್ನಾಟಕ
- ಪರ್ಮಾರ್ ಲವ್ಜಿಭಾಯಿ ನಾಗ್ಜಿಭಾಯ್ (ನೇಕಾರ)- ಗುಜರಾತ್
- 6. ವಿಜಯಲಕ್ಷ್ಮಿ ದೇಶಮಾನೆ (ವೈದ್ಯಕೀಯ)- ಕರ್ನಾಟಕ
- ಚೈತ್ರಂ ದೇವಚಂದ್ ಪವಾರ್ (ಪರಿಸರ ಸಂರಕ್ಷಣೆ)- ಮಹಾರಾಷ್ಟ್ರ
- ಜಗದೀಶ್ ಜೋಶಿಲಾ (ಸಾಹಿತ್ಯ)- ಮಧ್ಯಪ್ರದೇಶ
- ನೀರ್ಜಾ ಭಟ್ಲಾ (ಸ್ತ್ರೀರೋಗ ಶಾಸ್ತ್ರ) - ದೆಹಲಿ
- ಹಗ್, ಕೊಲೀನ್ ಗ್ಯಾಂಟ್ಜರ್ (ಸಾಹಿತ್ಯ, ಶಿಕ್ಷಣ - ಪ್ರಯಾಣ) ಉತ್ತರಾಖಂಡ
- 7. ರಿಕಿ ಕೇಜ್, (ಕಲೆ) ಕರ್ನಾಟಕ
- 8. ಪ್ರಶಾಂತ್ ಪ್ರಕಾಶ್ - ( ವಾಣಿಜ್ಯ ಉದ್ಯಮ) ಕರ್ನಾಟಕ
- 9.ಹಾಸನ್ ರಘು, (ಕಲೆ) ಕರ್ನಾಟಕ
ಇದನ್ನೂ ಓದಿ: ಮಹಿಳೆಯರಿಗೆ 'ನಗದು' ಯೋಜನೆಯಿಂದ ರಾಜ್ಯಗಳ ಆರ್ಥಿಕತೆಗೆ ಪೆಟ್ಟು: ಎಸ್ಬಿಐ ವರದಿ