ETV Bharat / opinion

ಲಡಾಖ್​​ನ ಗಾಲ್ವಾನ್​ ಕಣಿವೆ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತ; ಭರದ ಕಾರ್ಯಾಚರಣೆ - GALWAN VALLEY IN LEH LADAKH

ಗಾಲ್ವಾನ್​ ಕಣಿವೆಯನ್ನು ಪ್ರವಾಸಿ ಆಕರ್ಷಣಾ ತಾಣವಾಗಿಸುವ ನಿಟ್ಟಿನಲ್ಲಿ ಮುಂದಾಗಲಾಗಿದ್ದು, ಈ ಕುರಿತು ರಿಂಚನ್ ಆಂಗ್ಮೋ ಚುಮಿಕ್ಚನ್ ಬರೆದ ಲೇಖನ ಇಲ್ಲಿದೆ.

galwan-valley-in-leh-ladakh-to-open-for-domestic-tourists-date-sites-route
ಬ್ರಿಗೇಡಿಯರ್ ರಿಚರ್ಡ್ ಫೆರ್ನಾಂಡಿಸ್, 81 ಬ್ರಿಗೇಡ್ ಮತ್ತು ಬ್ರಿಗೇಡಿಯರ್ ರಿಂಚೆನ್ ಡೋರ್ಜಯ್, 33 ಬ್ರಿಗೇಡ್ ಡರ್ಬುಕ್, ಡರ್ಬುಕ್ ಪ್ರತಿನಿಧಿಗಳು (Courtesy: Lobzang Vissudha)
author img

By ETV Bharat Karnataka Team

Published : Jan 23, 2025, 1:29 PM IST

ಲೇಹ್ (ಲಡಾಖ್​)​: 2020ರ ಜೂನ್​ನಲ್ಲಿ ಭಾರತೀಯ ಮತ್ತು ಚೀನಿ ಯೋಧರ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಲಡಾಖ್​ನ ಗಾಲ್ವಾನ್​ ಕಣಿವೆಯನ್ನು ಇದೀಗ ಪ್ರವಾಸಿ ಆಕರ್ಷಣ ತಾಣವಾಗಿ ರೂಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಇದೀಗ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸೇರಿದಂತೆ ಇತರೆ ಕಾರ್ಯಾಚರಣೆಗಳು ಭರದಿಂದ ಸಾಗಿವೆ.

galwan-valley-in-leh-ladakh-to-open-for-domestic-tourists-date-sites-route
ಗಾಲ್ವಾನ್​ ಕಣಿವೆ (ANI)

ಲಡಾಖ್​ ಗಡಿ ಪ್ರವಾಸೋದ್ಯಮಕ್ಕೆ ಒತ್ತು : ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಪ್ರಯೋಜನವಾಗಲು ಹಾಗೂ ಈ ಪ್ರದೇಶಗಳಲ್ಲಿನ ಗ್ರಾಮೀಣ ಮತ್ತು ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜನವರಿ 15ರಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇನಾ ದಿನದಂದು ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದರು. ಭಾರತೀಯ ಯೋಧರ ತ್ಯಾಗ ಸ್ಮರಣೆ ಯುದ್ಧ ಸ್ಮಾರಕ ನಿರ್ಮಾಣದಿಂದ ಇಲ್ಲಿನ ವನ್ಯಜೀವಿ ಹಾಗೂ ಸಂಸ್ಕೃತಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯು ಲಡಾಖ್​ ಪ್ರವಾಸೋದ್ಯಮ ಹಾಗೂ ಪ್ರಾದೇಶಿಕ ಅಭಿವೃದ್ಧಿಯನ್ನು ಹೊಂದಿದೆ ಎಂದಿದ್ದರು.

ಲಡಾಖ್​ ಪರಂಪರೆ ಮತ್ತು ಆರ್ಥಿಕ ಬೆಳವಣಿಗೆ ವೇಗ ಹಾಗೂ ಸೇನಾ ಬಲದ ಗೌರವಾರ್ಥದಲ್ಲಿ ಈ ಯೋಜನೆ ಪ್ರಮುಖವಾಗಿದ್ದು, ಈ ಯೋಜನೆ 2025ರ ಜೂನ್​ಗೆ ಸಾರ್ವಜನಿಕ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ.

ಗಾಲ್ವಾನ್​ ಕಣಿವೆ (Courtesy: Lobzang Vissudha)

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಅಖಿಲ ಲಡಾಖ್​ ಪ್ರವಾಸಿ ಕಾರ್ಯಾಚರಣೆ ಅಸೋಸಿಯೇಷನ್​ನ (ಎಎಲ್​ಟಿಇಎ) ಕಾರ್ಯಕಾರಿ ಸದಸ್ಯ ಲೋಬ್ಜಾಂಗ್ ವಿಸುಧಾ, ಭಾರತ್​ ಗಾಲ್ವಾನ್​ ಪ್ರದೇಶದ ರೆಕ್ಕಿ ಪ್ರದೇಶದಲ್ಲಿ ಎಎಲ್​ಟಿಇಒ ಪ್ರತಿನಿಧಿಗಳು, ಟಾಕ್ಸಿ ಯೂನಿಯನ್​, ಟೆಂಪೊ, ಬೈಕ್​ ಯೂನಿಯನ್​ ಮತ್ತು ಅಲ್ಘಾ ಪ್ರವಾಸೋದ್ಯಮದ 10 ಸದಸ್ಯರು ಜನವರಿ 19ರಂದು ಇಲ್ಲಿ ಸ್ಥಳ ವೀಕ್ಷಣೆ ನಡೆಸಿದೆ.

ಗುಲ್ವಾನ್​ ಕಣಿವೆಯಲ್ಲಿ ಹುತಾತ್ಮರಾದವರಿಗೆ ಗೌರವ ನಮನ (ANI)

ಪ್ರವಾಸಿಗರನ್ನು ಆಕರ್ಷಿಸಲಿರುವ ಗುಲ್ವಾನ್​ ಕಣಿವೆ : ದಿ ರೆಕ್ಕಿಯನ್ನು ಆರಂಭದಲ್ಲಿ ಜಿಒಸಿ ಖರು ವಿಭಾಗದಿಂದ ಸಂಘಟಿಸಲಾಗುವುದು. ಇಲ್ಲಿ ಸ್ಥಳೀಯ ಪ್ರವಾಸೋದ್ಯಮ ಪ್ರದೇಶವನ್ನು ತೆರೆಯುವ ಯೋಜನೆ ಹೊಂದಿದ್ದು, ಪ್ಯಾನ್​ಗೊಂಗ್​​ ಕೇರೆ ಇಲ್ಲಿನ ಪ್ರವಾಸಿಗರ ಆಕರ್ಷಣೆಯಾಗಿದ್ದು, ಜೊತೆಗೆ ಗಾಲ್ವಾನ್​​ ಮತ್ತಷ್ಟು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.

2020ರಲ್ಲಿ ಈ ಗಾಲ್ವಾನ್​ ಸಂಘರ್ಷದಲ್ಲಿ ಕರ್ನಲ್​ ಸಂತೋಷ್​ ಬಾಬು ಹುತಾತ್ಮರಾದರು. ಸಾಂಕ್ರಾಮಿಕತೆ ಸಮಯದಲ್ಲೂ ಈ ಪ್ರದೇಶ ಹೆಚ್ಚು ಗಮನ ಸೆಳೆದಿತ್ತು. ಲಡಾಖ್​ಗೆ ದೇಶ ಪ್ರೇಮದ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

ಜೂನ್​ 15ರ ಬಳಿಕ ಪ್ರವಾಸಿಗರಿಗೆ ಮುಕ್ತ : ಅಧಿಕೃತವಾಗಿ ಜೂನ್​ 15ರ ಬಳಿಕ ಈ ಪ್ರದೇಶವು ಪ್ರವಾಸಿಗರಿಗೆ ಮುಕ್ತವಾಗಲಿದ್ದು, ಇದೀಗ ಇಲ್ಲಿ ಪ್ರಮುಖವಾಗಿ ಎರಡು ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅದರಲ್ಲಿ ಒಂದು ಮಿಡ್​ವೇ ಪಾಯಿಂಟ್​. ದುರ್ಬುಕ್​ನಿಂದ 56 ಕಿ.ಮೀ ದೂರದಲ್ಲಿದ್ದು, ಇಲ್ಲಿ ಕೆಫೆಟೇರಿಯಾ, ಸ್ಮರಣಿಕೆ ಶಾಪ್​ ತೆರೆಯುವುದು. ದುರ್ಬುಕ್​ನಿಂದ 120 ಕಿ.ಮೀ ದೂರದಲ್ಲಿ 30 ಜನರಿಗೆ ಉಳಿದುಕೊಳ್ಳಲು ಕಟ್ಟಡ ನಿರ್ಮಾಣ ಮಾಡುವುದು. ಈ ಮಾರ್ಗದಲ್ಲಿನ ಕೊನೆಯ ಗ್ರಾಮ ಶಾಯೊಕ್​ ಆಗಿದೆ ಎಂದು ಯೋಜನೆ ವಿವರವನ್ನು ವಿಸ್ಸುದಾ ನೀಡಿದರು.

ಲೇಹ್​ನ ಎಲ್​ಎಎಚ್​ಡಿಸಿ ಕಾರ್ಯಕಾರಿ ಕೌನ್ಸಿಲರ್​ ತಹಿ ನಮ್ಗ್ಯಾಲ್​ ಯಕ್ಜೀ ಮಾತನಾಡಿ, ಇದೊಂದು ಸಂತಸದ ಸಂದರ್ಭವಾಗಿದ್ದು, ನಮ್ಮ ದೀರ್ಘಕಾಲದ ಬವಣೆ ಕೊನೆಯಾಗುತ್ತಿದೆ. 2020ರ ಗಾಲ್ವಾನ್​ ಘಟನೆ ಬಳಿಕ ಈ ಕಣಿಗೆ ಸಾಕಷ್ಟು ಗಮನವನ್ನು ಸೆಳೆಯುವ ಮೂಲಕ ಹಲವು ಜನರು ಇಲ್ಲಿಗೆ ಭೇಟಿ ನೀಡುವ ಉತ್ಸಾಹ ತೋರಿದರು. ರಕ್ಷಣಾ ಅಧಿಕಾರಿಗಳು ಕೂಡ ಕಳೆದ ಎರಡ್ಮೂರು ವರ್ಷದಿಂದ ಈ ಕುರಿತು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಸ್ಮಾರಕ ನಿರ್ಮಾಣಕ್ಕೆ ನೋಡುತ್ತಿದ್ದಾರೆ.

ಹುತಾತ್ಮರ ಸ್ಮಾರಕ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ : ಇತ್ತೀಚೆಗೆ ದುರ್ಬಕ್​ ನಲ್ಲಿ ಈ ಕುರಿತು ಸಭೆ ನಡೆಸಿದ್ದು, 20220ರ ಸ್ಮರಣಾರ್ಥವಾಗಿ ಗಾಲ್ವಾನ್​ ಮ್ಯೂಸಿಯಂ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರವಾಸಿಗರು ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಇಲ್ಲಿ ತರ್ಸಿಂಗ್​ ಕರ್ಮೊದಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಬೌದ್ಧರ ಹಬ್ಬಕ್ಕೂ ಸಾಕ್ಷಿಯಾಗಬಹುದು ಎಂದಿದ್ದಾರೆ.

ಈ ಯೋಜನೆ ಮೂಲಕ ಇಲ್ಲಿ ಒಟ್ಟಾರೆ ಅಭಿವೃದ್ಧಿಯಾಗಲಿದ್ದು ಪೂರ್ವ ಲಡಾಖ್​ ಜನರಿಗೆ ಪ್ರಯೋಜನವಾಗಲಿದೆ. ಇದು ಐತಿಹಾಸಿಕವಾಗಿಯೂ ಪ್ರಮುಖ ಪ್ರದೇಶವಾಗಿದೆ. ಲೇಹ್​ನ ಹೆಡ್​ಕ್ವಾರ್ಟ್ರಸ್​ ಆಗಿರುವ ಇದು ಇಲ್ಲಿಂದ 240 ಕಿ.ಮೀ ದೂರದಲ್ಲಿದ್ದು, ದುರ್ಬುಕ್​ ತೆಹ್ಸಿಲ್ ಜಿಲ್ಲೆಯಿಂದ 120 ಕಿ.ಮೀ ದೂರದಲ್ಲಿದೆ.

ಸದ್ಯ ಲೇಹ್​ ಪ್ರವಾಸ ನಡೆಸುವ ಪ್ರವಾಸಿಗರು ಪ್ಯಾಗೊಂಗ್​ ಲೇಕ್​ವರೆಗೆ ಸಾಗಿ ಅದೇ ದಿನ ಮರಳಬೇಕಿದೆ. ಒಂದು ವೇಳೆ ಗಾಲ್ವಾನ್​ ಪ್ರವಾಸ ಮುಕ್ತವಾದರೆ, ಪ್ರವಾಸಿಗರು ಮತ್ತು 120 ಕಿ.ಮೀ ಕಾರಿನಲ್ಲಿ ಸಾಗಿ ದುರ್ಬುಕ್​ ಗ್ರಾಮದಲ್ಲಿ ರಾತ್ರಿ ತಂಗಬಹುದಾಗಿದೆ. ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಲಿದ್ದು ಟಾಕ್ಸಿ, ಹೋಟೆಲ್, ಗೆಸ್ಟ್​ ಹೌಸ್​ ಮತ್ತು ರೆಸ್ಟೋರೆಂಟ್​ಗೆ ಸಹಾಯಕವಾಗಲಿದೆ ಎಂದು ಯಕ್ಜೀ ತಿಳಿಸಿದರು.

ಕೊನೆಯ ಗ್ರಾಮಕ್ಕೂ ಭೇಟಿ ಅವಕಾಶ : ಮೇ ಅಥವಾ ಜೂನ್​ 2025ಕ್ಕೆ ಗಾಲ್ವಾನ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ಖಚಿತಪಡಿಸಿದ ಅವರು, 2020ರ ಬಳಿಕ ಈ ಪ್ರದೇಶಕ್ಕೆ ಪ್ರವಾಸಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಸದ್ಯ ದುರ್ಬುಕ್​ ಮತ್ತು ಶಯೊಕ್​ ಸ್ಥಳೀಯರು ಮತ್ತು ಕುರಿಗಾಹಿಗಳು ಮತ್ತು ಕೂಲಿಗಳು ಮಾತ್ರ ವಿಶೇಷ ಅನುಮತಿ ಮೇರೆಗೆ ತಮ್ಮ ಕುದುರೆ, ಯಾಕ್​ ಮೇರೆಗೆ ಈ ಪ್ರದೇಶಕ್ಕೆ ಹೋಗಬಹುದು ಎಂದರು.

ಶಯೋಕ್​ ಸೇತುವೆ ಉದ್ಘಾಟನಾ ಸಂದರ್ಭದಲ್ಲಿ ಭೇಟಿ ನೀಡಿದ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್​ ಅವರಿಗೆ ನಾವು ಮನವಿಯನ್ನು ಸಲ್ಲಿಸಿದ್ದೆವು. ಇದೀಗ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ಛುಶುಲ್​ ಕೌನ್ಸಿಲರ್​, ಕೊಚೊಕ್​ ಸ್ಟನ್ಜಿನ್​ ಕೂಡ, ಗಾಲ್ವಾನ್​ ಪ್ರವಾಸಿಗರಿಗೆ ಪ್ರಮುಖ ಆಕರ್ಷಣ ತಾಣವಾಗಲಿದೆ ಎಂದಿದ್ದು, ಇದಲ್ಲಿ 20 ಯೋಧರ ಸ್ಮಾರಕ ನಿರ್ಮಾಣ ಮಾಡಲು ಸೇನೆ ಯೋಜಿಸಿದೆ. ಗೃಹ ಸಚಿವಾಲಯ ಈಗಾಗಲೇ ಕಣಿವೆವರೆಗೆ ಟ್ರಕ್ಕಿಂಗ್​ಗೆ ಅವಕಾಶವನ್ನು ನೀಡಿದೆ. ಈ ಪ್ರದೇಶವು ವನ್ಯಜೀವಿಗಳ ಪ್ರವಾಸೋದ್ಯಮಕ್ಕೆ ಪ್ರಮುಖವಾಗಿದೆ ಎಂದರು.

ಈ ಪ್ರದೇಶದಲ್ಲಿ ಯಾಕ್​, ಕಡವೆ ನೆಟೆಲೋಪ್, ಪಲ್ಲಾಸ್ ಬೆಕ್ಕು, ಹಿಮ ಚಿರತೆಗಳು, ಲಿಂಕ್ಸ್ ಸೇರಿದಂತೆ ಇತರೆ ವನ್ಯಜೀವಿಗಳ ವಾಸಸ್ಥಾನವಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವನ್ಯಜೀವಿ ಪ್ರಿಯರನ್ನು ಮಾತ್ರವಲ್ಲದೇ ಆಕರ್ಷಿಸದೆ ಈ ಪ್ರದೇಶದನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಶ್ವಾನಗಳು ನಿಜವಾಗಿಯೂ ಆತ್ಮಗಳನ್ನು ನೋಡ್ತಾವಾ? ರಾತ್ರಿ ಅವು ಊಳಿಡುವುದಕ್ಕೆ ವಿಜ್ಞಾನ ಬಿಚ್ಚಿಟ್ಟಿದೆ ಕಾರಣ!

ಇದನ್ನೂ ಓದಿ: ಜಮ್ಮುವಿನಲ್ಲಿ ಒಂದೇ ಗ್ರಾಮದ 17 ಜನರ ನಿಗೂಢ ಸಾವು: ಕಾರಣ ಪತ್ತೆಗೆ ತಜ್ಞರ ತಂಡ ರಚಿಸುವಂತೆ ಅಮಿತ್​ ಶಾ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.