ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯವು (ಎಂಎಚ್ಐ) ದೇಶದ ಕೈಗಾರಿಕಾ ಬೆಳವಣಿಗೆಯ ನಾಯಕನ ಸ್ಥಾನದಲ್ಲಿದೆ. ಮೂರು ಪ್ರಮುಖ ಕೈಗಾರಿಕಾ ಕ್ಷೇತ್ರಗಳಾದ ಬಂಡವಾಳ ಸರಕುಗಳು, ಆಟೋಮೊಬೈಲ್ ಮತ್ತು ಹೆವಿ ಎಲೆಕ್ಟ್ರಿಕಲ್ ಉಪಕರಣಗಳ ವಲಯಗಳ ಬೆಳವಣಿಗೆಗೆ ಈ ಸಚಿವಾಲಯದ ಪಾತ್ರ ಮುಖ್ಯವಾಗಿದೆ.
ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆ (ಫೇಮ್ -2) ಯೋಜನೆಯಂತಹ ದೂರದೃಷ್ಟಿಯ ಉಪಕ್ರಮಗಳ ಮೂಲಕ, ಎಂಎಚ್ಐ ಸ್ವಚ್ಛ ಮತ್ತು ಹಸಿರು ಸಾರ್ವಜನಿಕ ಸಾರಿಗೆಯ ಹೊಸ ಯುಗವನ್ನು ಪ್ರಾರಂಭಿಸಲು ಕಟಿಬದ್ಧವಾಗಿದೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಮತ್ತು ವಾಹನಗಳ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕಿಳಿಸುವ ಗುರಿಯೊಂದಿಗೆ, ಫೇಮ್ -2 ಸುಸ್ಥಿರ ಚಲನಶೀಲತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳುತ್ತದೆ.
ಹೆಚ್ಚುವರಿಯಾಗಿ, ಎಂಎಚ್ಐ ನೇತೃತ್ವದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಆಟೋ ಮತ್ತು ಆಟೋ ಕಾಂಪೊನೆಂಟ್ಸ್ ಸ್ಕೀಮ್, ತನ್ನ ಉತ್ಪಾದನಾ ಮಟ್ಟವನ್ನು ಹೆಚ್ಚಿಸುವ ಮತ್ತು ಆಟೋಮೋಟಿವ್ ವಲಯದಲ್ಲಿ ರಫ್ತುಗಳನ್ನು ಹೆಚ್ಚಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ಸುಧಾರಿತ ಆಟೋಮೋಟಿವ್ ಟೆಕ್ನಾಲಜಿ (ಎಎಟಿ) ಉತ್ಪನ್ನಗಳಲ್ಲಿ ಸ್ಥಳೀಕರಣ, ಆರ್ಥಿಕತೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಯನ್ನು ಬೆಳೆಸುವ ಮೂಲಕ ಎಂಎಚ್ಐ ಭಾರತವನ್ನು ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಎತ್ತರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ (ಸ್ವಾವಲಂಬಿ) ಮತ್ತು ವಿಕಸಿತ (ಅಭಿವೃದ್ಧಿ ಹೊಂದಿದ) ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಎಂಎಚ್ಐ ಭಾರತವನ್ನು ನಾವೀನ್ಯತೆ ಮತ್ತು ದೃಢವಾದ ಭವಿಷ್ಯದತ್ತ ಕೊಂಡೊಯ್ಯುತ್ತದೆ. ಪ್ರಧಾನಿ ಮೋದಿ ಹೇಳಿದಂತೆ 2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಅನಿವಾರ್ಯತೆ ಅಳವಡಿಸಿಕೊಂಡ ಎಂಎಚ್ಐ, ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಭಾರತದ ಸುಸ್ಥಿರ ಕಾರ್ಯಸೂಚಿಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ.
ಕೋಶಗಳು ಅಥವಾ ಸೆಲ್ಗಳು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಭಾಗಗಳಾಗಿದ್ದು, ಸುಧಾರಿತ ರಾಸಾಯನಿಕ ಕೋಶಗಳು ಎಲೆಕ್ಟ್ರಿಕ್ ವಾಹನಗಳ (ಇವಿ) ಪ್ರಗತಿಯಲ್ಲಿ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತವೆ ಹಾಗೂ ಕಾರ್ಯಕ್ಷಮತೆ, ದಕ್ಷತೆ ಮತ್ತು ಶ್ರೇಣಿಯನ್ನು ಆಯೋಜಿಸುತ್ತವೆ. ಲಿಥಿಯಂ-ಐಯಾನ್ ಮತ್ತು ಘನ-ಸ್ಥಿತಿ ಬ್ಯಾಟರಿಗಳು ಹೊಸತನದ ಕೇಂದ್ರ ಬಿಂದುವಾಗಿವೆ ಮತ್ತು ಉತ್ತಮ ಶಕ್ತಿ ಸಾಂದ್ರತೆ, ತ್ವರಿತ ಚಾರ್ಜಿಂಗ್ ಸಮಯ ಮತ್ತು ಅವುಗಳ ಸಾಂಪ್ರದಾಯಿಕ ಪ್ರತಿರೂಪಗಳಿಗೆ ಹೋಲಿಸಿದರೆ ಬಲವರ್ಧಿತ ಸುರಕ್ಷತಾ ಪ್ರೋಟೋಕಾಲ್ಗಳನ್ನು ನೀಡುತ್ತವೆ.
ವಾಹನಗಳು ಎಷ್ಟು ದೂರ ಸಾಗುತ್ತವೆ ಮತ್ತು ದೀರ್ಘಕಾಲದ ಚಾರ್ಜಿಂಗ್ ಮಧ್ಯಂತರಗಳಂತಹ ಇವಿ ನಿರ್ಬಂಧಗಳನ್ನು ನಿವಾರಿಸಲು ಈ ಸುಧಾರಿತ ಕೋಶಗಳ ಅಭಿವೃದ್ಧಿ ಅನಿವಾರ್ಯವಾಗಿದೆ. ಇದರಿಂದಾಗಿ ವ್ಯಾಪಕವಾದ ಗ್ರಾಹಕರ ಅಪ್ಪುಗೆ ಮತ್ತು ಅಳವಡಿಕೆಯನ್ನು ಉತ್ತೇಜಿಸುತ್ತದೆ. ಇದಲ್ಲದೇ, ರಸಾಯನಶಾಸ್ತ್ರದಲ್ಲಿನ ಪ್ರಗತಿಗಳು ಹೆಚ್ಚು ಸುವ್ಯವಸ್ಥಿತ ಬ್ಯಾಟರಿ ಪ್ಯಾಕ್ಗಳ ಸೃಷ್ಟಿಗೆ ಕಾರಣವಾಗುತ್ತವೆ. ಇದು ವಾಹನದ ಭಾರವನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ವಾಸ್ತವವಾಗಿ ಸುಧಾರಿತ ರಸಾಯನಶಾಸ್ತ್ರ ಕೋಶಗಳು ಸುಸ್ಥಿರ ವಿದ್ಯುತ್ ಸಾರಿಗೆ ಪರಿಸರ ವ್ಯವಸ್ಥೆಯ ಮೂಲಾಧಾರವಾಗಿ ಹೊರಹೊಮ್ಮುತ್ತವೆ. ಮಧ್ಯಂತರ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲೆಕ್ಟ್ರಿಕ್ ವಾಹನ (ಇವಿ) ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಮಗ್ರ ಕಾರ್ಯತಂತ್ರವನ್ನು ಅನಾವರಣಗೊಳಿಸಿದರು. ಇದು ಸುಸ್ಥಿರ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಉತ್ಪಾದನಾ ಸಾಮರ್ಥ್ಯ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಎರಡನ್ನೂ ಹೆಚ್ಚಿಸುವತ್ತ ಗಮನ ಹರಿಸಿದ ಯೋಜನೆಗಳನ್ನು ಅವರು ಪ್ರಕಟಿಸಿದರು.