ಕರ್ನಾಟಕ

karnataka

ETV Bharat / opinion

ಆರ್ಥಿಕ ಬೆಳವಣಿಗೆಗೆ ಎಂಎಸ್​ಎಂಇಗಳನ್ನು ಬೆಂಬಲಿಸುವ ನೀತಿಗಳು ಬೇಕಿದೆ - Policies need to support MSMEs - POLICIES NEED TO SUPPORT MSMES

ಆರ್ಥಿಕತೆಯ ಬೆಳವಣಿಗೆಯಲ್ಲಿ ಎಂಎಸ್​ಎಂಇ ಹೆಚ್ಚಿನ ಕೊಡುಗೆ ನೀಡಿದರೂ, ಈ ಉದ್ಯಮಗಳು ಹಲವು ತೊಂದರೆಗಳಿಂದ ಬಳಲುತ್ತಿದೆ. ಈ ಸಂಬಂಧ ಪೆನ್ನಾರ್​​ ಇಂಡಸ್ಟ್ರಿಯ ನಿರ್ದೇಶಕ ಪಿವಿ ರಾವ್​ ಬರಹ ಇಲ್ಲಿದೆ.

msme-enterprises-are-vital-constituents-of-the-indian-industrial-sector
msme-enterprises-are-vital-constituents-of-the-indian-industrial-sector

By ETV Bharat Karnataka Team

Published : Mar 22, 2024, 8:08 PM IST

ಹೈದರಾಬಾದ್​: ಭಾರತದ ಕೈಗಾರಿಕಾ ವಲಯದಲ್ಲಿ ಎಂಎಸ್​ಎಂಇ ಅಂದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಪ್ರಮುಖವಾಗಿದೆ. ಇದು ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮತ್ತು ದೇಶದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶ ಸೃಷ್ಟಿ ಜೊತೆಗೆ ಜಿಡಿಜಿ ಮತ್ತು ರಫ್ತಿನ ಗಳಿಕೆಯಲ್ಲಿ ಗಮನಾರ್ಹ ಕೊಡುಗೆ ಹೊಂದಿದೆ.

ಇದರ ಹೊರತಾಗಿ ಭಾರತದಲ್ಲಿ ಎಂಎಸ್​ಎಂಇ ಆರ್ಥಿಕ ನೆರವು, ಉದ್ಯಮದ ಪರಿಣತೆಯ ಕೊರತೆ ಮತ್ತು ತಂತ್ರಜ್ಞಾನದ ಬಳಕೆಯ ಸಮಸ್ಯೆಗಳಿಂದ ಬಳಲುತ್ತಿದೆ. ಉದಾರೀಕರಣ, ಅನಗತ್ಯ ಉತ್ಪಾದನಾ ತಂತ್ರ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯ ಸಮಸ್ಯೆಯಿಂದಲೂ ಭಾರತದ ಎಸ್​ಎಂಇ ಕೂಡ ಕಠಿಣ ಸ್ಪರ್ಧೆ ಎದುರಿಸುತ್ತಿದೆ.

ಭಾರತದ ಜಿಡಿಪಿಗೆ ಎಂಎಂಎಸ್​ಇ ಶೇ 30ರಷ್ಟು ಕೊಡಗೆಯನ್ನು ನೀಡುವುದರ ಜೊತೆಗೆ ಕೌಶಲ್ಯ ಮತ್ತು ಅರೆ ಕೌಶಲ್ಯಾಧರಿತ ನೌಕರರಿಗೆ 111 ಮಿಲಿಯನ್ ಉದ್ಯೋಗಾವಕಾಶಗಳನ್ನು ನೀಡಿದೆ. ​37 ಟ್ರಿಲಿಯನ್ ರೂ.ಗಳ ಸಾಲದ ಬೇಡಿಕೆ ಮತ್ತು ಅಸ್ತಿತ್ವದಲ್ಲಿರುವ ರೂ. 14.5 ಟ್ರಿಲಿಯನ್ ಮುಖ್ಯವಾಹಿನಿ ಪೂರೈಕೆಯೊಂದಿಗೆ, 20-25 ಟ್ರಿಲಿಯನ್‌ಗಳ ಸಾಲದ ಅಂತರವನ್ನು ಎದುರಿಸುತ್ತಿದೆ.

ಸಣ್ಣ ಉದ್ದಿಮೆಗಳ ಸವಾಲು: ಎಲ್ಲಾ ಸಣ್ಣ ಗಾತ್ರದ ಉದ್ಯಮಗಳು ಸಾಮಾನ್ಯ ತೊಂದರೆ ಎಂದರೆ ಅದು ಸಾಲದ್ದಾಗಿದೆ. ದೀರ್ಘಾವಧಿಯ ಪೇಪರ್​ ವರ್ಕ್​​, ಸಾಲ ಮರುಪಾವತಿಯ ಸಾಮರ್ಥ್ಯದ ಕುರಿತು ನಂಬಿಕೆ ಕೊರತೆ ಮತ್ತು ಮೇಲಾಧಾರತದ ಅನುಪಸ್ಥಿತಿಗಳು ಎಂಎಸ್​ಎಂಇಗಳು ಆರ್ಥಿಕ ಸಹಾಯಕ್ಕೆ ಹೊಂದಿರುವ ಪ್ರಮುಖ ತೊಡಕಾಗಿದೆ. ಎಂಎಎಸ್​ಎಂಇಗೆ ಸುಲಭ ಸಾಲ ನೀಡುವಿಕೆಗೆ ಸರ್ಕಾರದ ನಿರಂತರ ಪ್ರಯತ್ನದ ಹೊರತಾಗಿ ಈ ತೊಂದರೆಗಳು ಹಾಗೇ ಉಳಿದುಕೊಂಡಿವೆ.

ಭಾರತದ ಆರ್ಥಿಕ ರಚನೆಯ ಬೆನ್ನೆಲುಬಾಗಿರುವ ಎಂಎಸ್​ಎಂಇಗಳು ಪ್ರಾಥಮಿಕವಾಗಿ ದೇಶದ ಕೈಗಾರಿಕಾವಲಯದಿಂದ ನಡೆಸಲ್ಪಡುತ್ತವೆ. ಒಟ್ಟಾರೆ ಕೈಗಾರಿಕ ಉತ್ಪಾದನೆಯಲ್ಲಿ ಶೇ 45ರಷ್ಟು ಮೌಲ್ಯ ಹೊಂದಿದ್ದು, ಶೇ 40ರಷ್ಟು ಒಟ್ಟಾರೆ ರಫ್ತು , ಶೇ 30ರಷ್ಟು ದೇಶದ ಜಿಡಿಪಿಗೆ ಕೊಡುಗೆ ನೀಡುತ್ತದೆ. ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಎಂಎಸ್​ಎಂಇ ಬಲವಾಗಿ ನೆಲೆಯೂರಿ ಬೆಳೆಯುತ್ತಿದೆ. ಉದ್ಯೋಗ, ಅವಿಷ್ಕಾರ ಮತ್ತು ಆರ್ಥಿಕತೆ ಅಭಿವೃದ್ಧಿಯಲ್ಲಿ ಇದು ಪ್ರಮುಖವಾಗಿದೆ. ಎಂಎಸ್​ಎಂಇ ದೇಶದ ಸಂಪತ್ತಿನ ಸಮಾನ ಹಂಚಿಕೆಯನ್ನು ಪ್ರಾದೇಶಿಕ ಮತ್ತು ಆರ್ಥಿಕ ಅಸಮತೋಲನ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ಎಂಎಸ್​ಎಂಇಗಳು ಹೊಂದಿದ್ದರೂ ಅವುಗಳಲ್ಲಿ ಹೆಚ್ಚಿನ ಸಂಖ್ಯೆಯವು ಇನ್ನೂ ಕೂಡ ದೇಶದ ಔಪಚಾರಿಕ ಆರ್ಥಿಕ ಪರಿಸರ ವ್ಯವಸ್ಥೆಯಲ್ಲಿ ಒಂದಾಗಬೇಕಿದೆ. ಭಾರತದಲ್ಲಿ 63 ಮಿಲಿಯನ್​ ಎಂಎಸ್​ಎಂಇಗಳಿದ್ದು, ಇದರಲ್ಲಿ ಕೇವಲ ಶೇ 14 ರಷ್ಟಕ್ಕೆ ಸಾಲ ಲಭ್ಯವಾಗುತ್ತದೆ. ಡೇಟಾಗಳು ತಿಳಿಸುವಂತೆ ಎಂಎಸ್​ಎಂಇಯಲ್ಲಿ ಒಟ್ಟಾರೆ ಆರ್ಥಿಕ ಬೇಡಿಕೆಯಲ್ಲಿ 69.3 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಜೊತೆಗೆ ಶೇ 70ರಷ್ಟು ಸಾಲದ ಅಗತ್ಯವು ಕಾರ್ಯನಿರತ ಬಂಡವಾಳದ ಅಂತರವನ್ನು ತುಂಬಲು ಕಾರಣವಾಗಿದೆ.

ಸಾಲದ ಸೌಲಭ್ಯದ ಕೊರತೆ: ಎಂಎಸ್​ಎಂಇಗಳು, ಸ್ಟಾರ್ಟ್​​ಅಪ್​ಗಳು ಹೆಚ್ಚಿನ ವೈಫಲ್ಯ ದರವನ್ನು ಹೊಂದಿರಬಹುದು. ಅಪಾಯದ ಹೊರತಾಗಿ, ಈ ಉದ್ಯಮಗಳ ಹಣಕಾಸು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ. ಇಲ್ಲಿ ಕ್ರೆಡಿಟ್ ಗ್ಯಾರಂಟಿ ಯೋಜನೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಲದ ಗ್ಯಾರಂಟಿ ಎಂಬುದು ಎಂಎಸ್​ಎಂಇ ಸಾಲವನ್ನು ಸುಗಮ ಮಾಡುವ ಒಂದೇ ಮಾನದಂಡವಲ್ಲ. ಆದರೆ, ಶ್ಯೂರಿಟಿ ಕೊರತೆಯು ಕೂಡ ಬ್ಯಾಂಕ್​ಗಳಲ್ಲಿ ಸಾಲಕ್ಕೆ ತಿರಸ್ಕರಿಸಲು ಪ್ರಮುಖ ಕಾರಣವಾಗಿದೆ. ಕ್ರೆಡಿಟ್ ಗ್ಯಾರಂಟಿ ಯೋಜನೆಗೆ ಸಾಲ ನೀಡಲು ಆರ್ಥಿಕ ಸಂಸ್ಥೆಗಳು ಸುರಕ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಕುರಿತು ಬ್ಯಾಂಕ್​ ಮತ್ತು ಉದ್ಯಮಗಳಲ್ಲಿ ಪ್ರಖ್ಯಾತಿ ಆಗಬೇಕು. ಈ ವಿಚಾರ ಕುರಿತು ಮೇಲಾಧಾರ-ಮುಕ್ತ ಸಾಲಗಳು ಮತ್ತು ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳಂತಹ ಕ್ರೆಡಿಟ್‌ಗೆ ಸುಲಭ ಪ್ರವೇಶವನ್ನು ಒದಗಿಸುವ ನೀತಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ. ಹಣದ ಹರಿವು ಆಧಾರಿತ ಸಾಲವನ್ನು ಬಲಪಡಿಸುವ ನೀತಿಗಳು, ಕಾರ್ಪೊರೇಟ್ ಖರೀದಿದಾರರನ್ನು ಅವರ ಎಂಎಸ್​ಎಂ ಪಾಲುದಾರರನ್ನು ಬೆಂಬಲಿಸಲು ಪ್ರೋತ್ಸಾಹಿಸುವುದು ಮತ್ತು ಜಿಎಸ್​ಟಿ ಇ - ಇನ್‌ವಾಯ್ಸ್ ಪೋರ್ಟಲ್‌ನೊಂದಿಗೆ ಟ್ರೆಡ್ಸ್​​​ ಪೋರ್ಟಲ್‌ಗಳನ್ನು ಸಂಯೋಜಿಸುವುದು ಅಗತ್ಯವಾಗಿದೆ.

ಎಂಎಸ್​ಎಂಇ ವಲಯದಲ್ಲಿ ಎಫ್​ಡಿಐ ಅನ್ನು ಪ್ರೋತ್ಸಾಹಿಸುವುದು ಸದ್ಯದ ಅಗತ್ಯವಾಗಿದೆ. ಇದು ಉತ್ಪಾದಕತೆ, ಸ್ಪರ್ಧೆ, ಉದ್ಯೋಗ ಸೃಷ್ಟಿ ಮತ್ತು ತೆರಿಗೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಭಾರತದ ಆಟೋಮೋಟಿವ್​ ವಲಯವು ಎಫ್​ಡಿಐ ಫಲಿತಾಂಶದಲ್ಲಿ ಜಾಗತಿಕ ಸ್ಪರ್ಧೆ ಜೊತೆಗೆ ಭಾರತದ ಆಟೋ ನಿರ್ಮಾಣದಲ್ಲಿನ ಅಭಿವೃದ್ಧಿ ತಂತ್ರಜ್ಞಾನದಲ್ಲಿ ಶೇ 5ರಷ್ಟು ಏರಿಕೆ ಕಾಣುತ್ತಿದೆ. ಉದಾರೀಕರಣಗೊಂಡ ಎಫ್‌ಡಿಐ ಜಾಗತಿಕ ಪ್ರವೃತ್ತಿ, ಭಾರತದ ಬಹುರಾಷ್ಟ್ರೀಯ ಉದ್ಯಮದಲ್ಲಿನ ಸುಸ್ಧಿರ ಭಾರತದ ಮನವಿ ಮತ್ತು ಶೀಘ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹಳೆಯ ತಂತ್ರಜ್ಞಾನದ ಬಳಕೆ: ಭಾರತದಲ್ಲಿನ ಬಹುತೇಕ ಎಂಎಸ್​ಎಂಇಗಳು ಹೊಸ ಕಾಲಮಾನದಲ್ಲಿ ಕೂಡ ಹಳೆಯ ತಂತ್ರಜ್ಞಾನ ಬಳಕೆ ಮಾಡುತ್ತಿರುವುದು ದೊಡ್ಡ ತೊಡಕಾಗಿದೆ. ಇದರ ಹೊರತಾಗಿ ಭಾರತವೂ ತಾಂತ್ರಿಕ ತರಬೇತಿ ಪಡೆದ ಮಾನವಶಕ್ತಿ ಹೊಂದಿದೆ. ಹೊಸ ತಂತ್ರಜ್ಞಾನ ಮತ್ತು ತರಬೇತಿ ಉದ್ಯೋಗಿಗಳೊಂದಿಗೆ ಈ ತಾಂತ್ರಿಕ ಉನ್ನತೀಕರಣ ಕಷ್ಟಕರ ಜೊತೆಗೆ ವೆಚ್ಚದಾಯಕವಾಗಿದೆ. ಅದರಲ್ಲೂ ವಿಶೇಷವಾಗಿ ಉತ್ಪಾದನಾ ವ್ಯವಹಾರಗಳಿಗೆ ವ್ಯಾಪ್ತಿ ಕೇವಲ ಸಾಫ್ಟ್‌ವೇರ್ ಪರಿಭಾಷೆಯಲ್ಲಿ ಮಾತ್ರವಲ್ಲದೇ ಉತ್ಪಾದನಾ ಘಟಕಗಳ ಪರಿಭಾಷೆಯಲ್ಲಿಯೂ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಶಿಕ್ಷಣವೂ ತಂತ್ರಜ್ಞಾನದ ಈ ಅಂತರಕ್ಕೆ ಭಾಗಶಃ ಕಾರಣವಾಗಿದೆ. ಈ ಕುರಿತು ಅರಿವಿನ ಕೊರತೆಯೂ ಸುಧಾರಿತ ತಂತ್ರಜ್ಞಾನ ಪರಿಹಾರಗಳಲ್ಲಿ ಹೂಡಿಕೆಗೆ ಇಚ್ಛೆ ಕಡಿಮೆ ಮಾಡುತ್ತದೆ.

ಉದ್ಯಮದ ಯಶಸ್ಸಿಗೆ ಕೌಶಲ್ಯಯುತ ಉದ್ಯೋಗಿಗಳ ಅಗತ್ಯತೆ ಇದೆ. ಎಂಎನ್​ಸಿಗಳು ಇದನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಜೊತೆಗೆ ಅವರ ಕಾರ್ಯಾಚರಣೆ ಕೇಂದ್ರದಲ್ಲಿ ಈ ಸಂಬಂಧ ನಿರಂತರ ತರಬೇತಿ ನೀಡುತ್ತವೆ. ದುರದೃಷ್ಟವಶಾತ್​​, ಸಣ್ಣ ಪ್ರಮಾಣದ ಉದ್ದಿಮೆಗಳು ತಮ್ಮ ನೌಕರರಿಗೆ ಕೌಶಲ್ಯ ತರಬೇತಿ ನೀಡುವಲ್ಲಿ ವಿಫಲವಾಗಿವೆ. ಹೀಗಾಗಿ ನಿರಂತರವಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ.

ಉದ್ಯಮದ ಚಾಣಾಕ್ಷತೆ: ವಾಣಿಜ್ಯೋದ್ಯಮಿಗಳು ತಮ್ಮ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ವಿಷಯದ ಪರಿಣತಿ ಹೊಂದಿದ್ದರೂ ಕೆಲವು ವೇಳೆ ಉದ್ಯಮ ನಡೆಸಲು ಬೇಕಾದ ವ್ಯಾಪಾರದ ಚಾಣಾಕ್ಷತೆ ಹೊಂದಿರುವುದಿಲ್ಲ. ಇವುಗಳಲ್ಲಿ ಹಣಕಾಸು, ಟ್ರ್ಯಾಕಿಂಗ್ ಮಾರಾಟಗಳು, ಇನ್‌ಪುಟ್ ಮತ್ತು ಔಟ್‌ಪುಟ್ ವೆಚ್ಚಗಳು ಸುಗಮ ನಿರ್ವಹಣೆ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ಕಚ್ಚಾ ವಸ್ತುಗಳ ಬೆಲೆ ಬಹುಪಟ್ಟು ಹೆಚ್ಚುತ್ತಿದೆ. ಅದರಲ್ಲೂ ಕೋವಿಡ್​ 19 ಬಳಿಕ ಇದರ ಹೆಚ್ಚಳ ಅಧಿಕಗೊಂಡಿದೆ. ಎಂಎಸ್​ಎಂಗಳಲ್ಲಿನ ಉತ್ಪಾದನಾ ವಲಯಗಳು ಕಾರ್ಯಾಚರಣೆಯನ್ನು ಮುಂದುವರಿಸಲು ಕಚ್ಚಾ ವಸ್ತುಗಳ ಸಂಗ್ರಹವು ಅತ್ಯಂತ ಮುಖ್ಯವಾಗಿದೆ. ಆದಾಗ್ಯೂ ಬಲ್ಕ ಆರ್ಡರ್​​, ಸಾಲ ಸೌಲಭ್ಯ ಮತ್ತು ಕಚ್ಚಾವಸ್ತುಗಳ ಸಾರಿಗೆಯು ಹೊರೆ ಹೆಚ್ಚಿಸುತ್ತದೆ. ಈ ಮಿತಿಗಳನ್ನು ಹೊಡೆದೂಡಿಸಲು ಎನ್​ಎಸ್​ಐಸಿ ರಾ ಮೆಟಿರಿಯಲ್​ ಅಸಿಸ್ಟಂಟ್​ ಸ್ಕೀಮ್​ ಅನ್ನು ಹೊಂದಿದ್ದು, ಇದು ಸ್ಥಳೀಯ ಮತ್ತು ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಖರೀದಿಗೆ ಹಣಕಾಸು ಒದಗಿಸುತ್ತದೆ

ಪ್ರತಿಭಾವಂತರ ಅಲಭ್ಯತೆ: ಎಂಎಸ್​ಎಂಇಯು ಕೌಶಲ್ಯಭರಿತ ಮತ್ತು ಸ್ಪರ್ಧಾತ್ಮಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಕಷ್ಟಪಡುತ್ತಿದೆ. ಸಂಸ್ಥೆಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲದಿರುವಿಕೆಯೂ ಪ್ರತಿಭಾವಂತರನ್ನು ಕರೆತರಲು ಆಗುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಸಣ್ಣ ಆಯ್ಕೆಯಲ್ಲೇ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರೂ ದೊಡ್ಡ ಸಂಸ್ಥೆಗಳಂತೆಯೇ ಸ್ಪರ್ಧಾತ್ಮಕ ಸಂಬಳ, ಉದ್ಯೋಗ ಭದ್ರತೆ ಮತ್ತು ವೃತ್ತಿ ಅಭಿವೃದ್ಧಿ ಅವಕಾಶಗಳನ್ನು ನೀಡಲು ಸಾಧ್ಯವಾಗದೇ ಅಭ್ಯರ್ಥಿಗಳನ್ನು ಕಳೆದುಕೊಳ್ಳುತ್ತದೆ.

ಬದಲಾವಣೆ ದರಗಳು ವೇಗವಾಗಿ ಅಭಿವೃದ್ಧಿ ಆಗುತ್ತಿದೆ. ಕ್ರಿಯಾತ್ಮಕತೆ ಮತ್ತು ಅವಿಷ್ಕಾರವೂ ಉಳಿಯುವಿಕೆಯ ಪ್ರಕ್ರಿಯೆಯನ್ನು ಹೆಚ್ಚಿಸಲಿದೆ. ಉದ್ಯಮಗಳು ಜ್ಞಾನದ ಅಧಾರಿತವಾಗಿದ್ದು, ಯಶಸ್ಸು ಮತ್ತು ಉಳಿಯುವಿಕೆಯೂ ಸೃಜನಶೀಲತೆ, ನಾವೀನ್ಯತೆ, ಆವಿಷ್ಕಾರ ಮತ್ತು ಸೃಜನಶೀಲತೆಗೆ ನೇರವಾಗಿ ಸಂಬಂಧಿಸಿದೆ.

ಹೆಚ್ಚುತ್ತಿರುವ ಸ್ಪರ್ಧೆ: ಭಾರತೀಯ ಎಂಎಸ್‌ಎಂಇಗಳು ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಕಷ್ಟವಾಗುತ್ತಿದೆ. ಸಣ್ಣ ಪ್ರಮಾಣದ ಉದ್ದಿಮೆಗಳು ಉದಾರೀಕರಣದ ಕಾರಣದಿಂದಾಗಿ ಜಾಗತಿಕ ಪ್ರತಿಸ್ಪರ್ಧಿ ಮತ್ತು ದೇಶೀಯ ದೊಡ್ಡ ಸಂಸ್ಥೆಗಳಿಂದ ಕಠಿಣ ಸ್ಪರ್ಧೆ ಎದುರಿಸುತ್ತಿವೆ. ಸರ್ಕಾರವು ಅಂತಹ ಸಣ್ಣ ಪ್ರಮಾಣದ ಉದ್ಯಮಗಳಿಗೆ ರಕ್ಷಣಾತ್ಮಕ ಯೋಜನೆಗಳನ್ನು ನಡೆಸುತ್ತದೆಯಾದರೂ ಸ್ಪರ್ಧೆಯು ಏಕಪಕ್ಷೀಯವಾಗಿ ಮತ್ತು ದೊಡ್ಡದಾಗಿದೆ.

ಅಸಮರ್ಪಕ ನಿರ್ವಹಣಾ ಕೌಶಲ್ಯಗಳು ವ್ಯಾಪಾರ ವಿಸ್ತರಣೆಗೆ ಅಡ್ಡಿಯಾಗಿದೆ. ಸಣ್ಣ ಉದ್ಯಮಗಳ ಸ್ಪರ್ಧೆ ಹೆಚ್ಚಿಸಿದೆ. ಕಾರ್ಮಿಕ ಬಲ, ವೈವಿಧ್ಯಮಯ ಗ್ರಾಹಕರ ಅಗತ್ಯ ಪೂರೈಕೆ, ದಾಸ್ತಾನುಗಳನ್ನು ನಿರ್ವಹಣೆ, ಹೊಸ ಸ್ಪರ್ಧಿಗಳೊಂದಿಗೆ ವ್ಯವಹಾರ ಉದ್ಯಮದ ಯಶಸ್ಸಿಗೆ ಪ್ರಮುಖವಾಗಿದೆ.

ಇದನ್ನೂ ಓದಿ: ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್​ಎಂಇ ಉದ್ದಿಮೆಗಳ ಕೊಡುಗೆ ಅಪಾರ

ABOUT THE AUTHOR

...view details