ಸರಕುಗಳನ್ನು ತಯಾರಿಸುವ ಯಾವುದೇ ಪ್ರಮುಖ ಉದ್ಯಮವು ಆರಂಭದಲ್ಲಿ ಒಂದು ಕಾರ್ಖಾನೆಯೊಂದಿಗೆ ಪ್ರಾರಂಭವಾಗುತ್ತದೆ. ಅದರ ಉತ್ಪನ್ನಗಳನ್ನು ಗ್ರಾಹಕರು ಎಷ್ಟು ಪ್ರಮಾಣದಲ್ಲಿ ಖರೀದಿಸುತ್ತಾರೆ ಎಂಬುದನ್ನು ಆಧರಿಸಿ ಕಾರ್ಖಾನೆಗಳನ್ನು ಮತ್ತಷ್ಟು ಸ್ಥಳಗಳಿಗೆ ವಿಸ್ತರಿಸಲಾಗುತ್ತದೆ. ಹೀಗೆ ಕ್ರಮೇಣ ಕಂಪನಿಗಳು ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಮಾರುಕಟ್ಟೆಗಳಿಗೆ ಪ್ರವೇಶಿಸುತ್ತವೆ. ಈ ವಿಭಾಗಗಳಲ್ಲಿ, ಗ್ರಾಹಕರು ತಮ್ಮ ವೈಯಕ್ತಿಕ ಗ್ರಹಿಕೆಯ ಆಧಾರದ ಮೇಲೆ ಬ್ರಾಂಡ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವ್ಯವಹಾರಗಳ ಕ್ಯಾಪೆಕ್ಸ್ ಮಾರಾಟದ ವೆಚ್ಚದೊಂದಿಗೆ ಸಮನ್ವಯದಲ್ಲಿರುತ್ತದೆ, ಇದು ಅವರ ಲಾಭಾಂಶವನ್ನು ಅನುಸರಣಾ ಬಂಡವಾಳಕ್ಕಾಗಿ ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ಆರಂಭಿಕ ವೆಚ್ಚವು ಕನಿಷ್ಠವಾಗಿರಬಹುದು.
ಆದರೆ, ಸೇವಾ ಉದ್ಯಮವಾಗಿರುವ ಟೆಲಿಕಾಂ ಕ್ಷೇತ್ರದ ಕಥೆ ಹಾಗಿರುವುದಿಲ್ಲ. ರಾಷ್ಟ್ರಮಟ್ಟದಲ್ಲಿ ತಡೆರಹಿತ ಮೊಬೈಲ್ ಸಂಪರ್ಕವನ್ನು ಒದಗಿಸಲು ಪರವಾನಗಿ ಪಡೆದ ಸೇವಾ ಪ್ರದೇಶ ಅಥವಾ ರಾಷ್ಟ್ರಾದ್ಯಂತ ಈ ಸೇವೆಯನ್ನು ಒಂದೇ ಬಾರಿಗೆ ಆರಂಭಿಸಬೇಕಾಗುತ್ತದೆ. ಚಾಲ್ತಿಯಲ್ಲಿರುವ ಸರ್ಕಾರದ ನೀತಿ, ಸ್ಪೆಕ್ಟ್ರಮ್ ಲಭ್ಯತೆ, ನಿಯಂತ್ರಕ ಬಿಕ್ಕಟ್ಟುಗಳು, ಹಾರ್ಡ್ವೇರ್ ದೀರ್ಘಾಯುಷ್ಯ ಮತ್ತು ಹೊಂದಾಣಿಕೆ, ಭವಿಷ್ಯದ ತಾಂತ್ರಿಕ ಬದಲಾವಣೆಗಳು, ಸೇವಾ ಪ್ರದೇಶದ ವೈವಿಧ್ಯಮಯ ಭೌಗೋಳಿಕ ಪರಿಸ್ಥಿತಿಗಳಂತಹ ಎಲ್ಲ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡರೆ ಈ ವಲಯದಲ್ಲಿ ಹೂಡಬೇಕಾದ ಬಂಡವಾಳದ ಮೊತ್ತ ಬಹಳ ದೊಡ್ಡದಾಗಿದೆ.
ಈ ತೊಂದರೆಯನ್ನು ನಿವಾರಿಸಲು ಟಿಎಸ್ಪಿಗಳು ವಿವಿಧ ರೀತಿಯ ಉಚಿತ ಕೊಡುಗೆಗಳ ಆಫರ್ಗಳನ್ನು ನೀಡುತ್ತಾರೆ. ಕಂಪನಿಯನ್ನು ಲಾಭದಾಯಕವಾಗಿಸಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಟಿಎಸ್ಪಿಗಳಿಂದ, ವಿಶೇಷವಾಗಿ ಬಿಎಸ್ಎನ್ಎಲ್ / ಎಂಟಿಎನ್ಎಲ್ನಿಂದ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳಲು ವಿವಿಧ ಉತ್ಪನ್ನಗಳ ಬೆಲೆಗಳನ್ನು ಉದ್ದೇಶ ಪೂರ್ವಕವಾಗಿ ವಾಸ್ತವ ಬೆಲೆಗಿಂತ ಕಡಿಮೆ ಇರಿಸಲಾಗಿದೆ. ಜನವರಿ 2011 ರಿಂದ ಟ್ರಾಯ್ ಎಂಎನ್ಪಿಗೆ ಅವಕಾಶ ನೀಡಿದ್ದಕ್ಕೆ ಅದಕ್ಕೆ ಧನ್ಯವಾದ ಹೇಳಬೇಕು. 1990 ರ ಉದಾರೀಕರಣದ ನಂತರ, ಡಜನ್ಗಟ್ಟಲೆ ಟಿಎಸ್ಪಿಗಳು ಸ್ಪರ್ಧಾತ್ಮಕ ವಾತಾವರಣದಲ್ಲಿ ಮೊಬೈಲ್ ಸೇವೆಗಳನ್ನು ಹೊರತರಲು ಮುಂದಾದವು ಮತ್ತು 2004 ರಲ್ಲಿ ಆರ್ ಕಾಮ್ ಪ್ರವೇಶದೊಂದಿಗೆ ತರ್ಕಬದ್ಧವಲ್ಲದ ಬೆಲೆ ನಿಗದಿಯ ದರಸಮರ ವೇಗ ಪಡೆಯಿತು. ಅದರ ಮುಂದಿನ ದಶಕದಲ್ಲಿ ಅನೇಕ ಸಣ್ಣ ಟಿಎಸ್ಪಿಗಳು ನಷ್ಟಕ್ಕೀಡಾಗಿ ನಾಶವಾದವು. ಅಂಥ ಪ್ರಮುಖ ಟಿಎಸ್ಪಿಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಟೆಲಿಕಾಂ ಸೇವಾ ಪೂರೈಕೆದಾರರ ಪಟ್ಟಿ:
ಆಪರೇಟರ್ | ಆರಂಭದ ವರ್ಷ | ಮುಚ್ಚಿದ ವರ್ಷ | ಸ್ಥಗಿತಕ್ಕೆ ಕಾರಣ |
---|---|---|---|
ಮೋದಿ ಟೆಲ್ ಸ್ಟ್ರಾ | 1990 | 2001 | ಸ್ಪೈಸ್ ಕಮ್ಯುನಿಕೇಶನ್ ಜೊತೆಗೆ ವಿಲೀನ |
ಸ್ಪೈಸ್ ಕಮ್ಯುನಿಕೇಶನ್ | 1992 | 2010 | ಐಡಿಯಾ ಸೆಲ್ಯುಲರ್ ಜೊತೆಗೆ ವಿಲೀನ |
ಬಿಪಿಎಲ್ ಮೊಬೈಲ್ | 1995 | 2014 | ಲೈಸೆನ್ಸ್ ಅವಧಿ ಮುಕ್ತಾಯ |
ಎಸ್ಕೊಟೆಲ್ | 1996 | 2004 | ಐಡಿಯಾ ಸೆಲ್ಯುಲರ್ ಜೊತೆಗೆ ವಿಲೀನ |
ಹಚ್ ಎಸ್ಸಾರ್ | 1999 | 2007 | ವೊಡಾಫೋನ್ ಐಡಿಯಾದಿಂದ ಸ್ವಾಧೀನ |
ಏರ್ ಸೆಲ್ | 1999 | 2019 | 12 ಸಾವಿರ ಕೋಟಿ ರೂ. ನಷ್ಟ- ದಿವಾಳಿ |
ಐಡಿಯಾ ಸೆಲ್ಯುಲರ್ | 2002 | 2018 | ವೊಡಾಫೋನ್ ಐಡಿಯಾ ಜೊತೆಗೆ ವಿಲೀನ |
ಆರ್ ಕಾಮ್ | 2004 | 2019 | ಆರ್ ಜಿಯೊ ದಿಂದ ಸ್ವಾಧೀನ |
ಟೆಲೆನಾರ್ ಇಂಡಿಯಾ | 2008 | 2018 | ಭಾರ್ತಿ ಏರ್ ಟೆಲ್ನಿಂದ ಸ್ವಾಧೀನ |
ವರ್ಜಿನ್ ಮೊಬೈಲ್ | 2008 | 2015 | ಟಾಟಾ ಡೊಕೊಮೊ ಜೊತೆ ವಿಲೀನ |
ಟಾಟಾ ಡೊಕೊಮೊ | 2009 | 2019 | ಭಾರ್ತಿ ಏರ್ಟೆಲ್ನಿಂದ ಸ್ವಾಧೀನ |
ಎಂಟಿಎಸ್ ಇಂಡಿಯಾ | 2009 | 2017 | ಆರ್ ಕಾಮ್ನಿಂದ ಸ್ವಾಧೀನ |
ವಿಡಿಯೊಕಾನ್ ಟೆಲಿಕಾಮ್ | 2010 | 2016 | ತರಂಗಾಂತರ ಏರ್ ಟೆಲ್ಗೆ ಮಾರಾಟ |
ವೋಡಾಫೋನ್ ಇಂಡಿಯಾ | 2007 | 2018 | ವೋಡಾಫೋನ್ ಐಡಿಯಾ ಜೊತೆ ವಿಲೀನ |
1995ರ ಜುಲೈ 31ರಂದು ಕಲ್ಕತ್ತಾದಿಂದ ನವದೆಹಲಿಯಲ್ಲಿ ಆಗಿನ ಕೇಂದ್ರ ದೂರಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ ಮೋದಿ ಟೆಲ್ ಸ್ಟ್ರಾ ಮೊಬೈಲ್ ನೆಟ್ವರ್ಕ್ನಿಂದ ಪ್ರಥಮ ಮೊಬೈಲ್ ಕರೆ ಮಾಡುವ ಮೂಲಕ ಅಂದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಟೆಲ್ ಸ್ಟ್ರಾ ಮೊಬೈಲ್ ನೆಟ್ವರ್ಕ್ ಅನ್ನು ಉದ್ಘಾಟಿಸಿದ್ದರು ಎಂಬುದು ಗಮನಾರ್ಹ.