ಮಾವೋವಾದಿಗಳನ್ನು ನಿಗ್ರಹಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿಗೆ ನೀಡಿದ್ದ ಹೇಳಿಕೆ ದೇಶದ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಸರ್ಕಾರ 2026ರ ಮಾರ್ಚ್ ವೇಳೆಗೆ ಮಾವೋವಾದಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತದೆ ಎಂದು ಅವರು ತಿಳಿಸಿದ್ದರು. ಈ ಹೇಳಿಕೆ ಮಾವೋ ಬಂಡುಕೋರರ ಉಪಟಳವನ್ನು ಮಟ್ಟ ಹಾಕಲು ಸರ್ಕಾರ ನಡೆಸುತ್ತಿರುವ ಪ್ರಸ್ತುತ ಮತ್ತು ಭವಿಷ್ಯದ ಕಾರ್ಯತಂತ್ರದ ಪರಿಣಾಮವನ್ನು ಹೇಳಿದೆ.
ಕಳೆದೊಂದು ದಶಕಗಳಿಂದ ಮಾವೋಗಳನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನದ ಫಲಶ್ರುತಿಯನ್ನು ಯುಎಂಎಚ್ಎ ಒತ್ತಿ ಹೇಳಿದೆ. ಕಳೆದ ವರ್ಷದಿಂದ ಮಾವೋಗಳ ಹಿಂಸಾಚಾರದಿಂದ ನಾಗರಿಕರು ಮತ್ತು ಭದ್ರತಾ ಪಡೆಯ ಸಾವಿನ ಸಂಖ್ಯೆ ನೂರಕ್ಕಿಂತ ಕಡಿಮೆ. ಅಲ್ಲದೇ ಕಳೆದ ವರ್ಷ ಮಾವೋ ಚಟುವಟಿಕೆಗಳ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಅಪಾಯವನ್ನು ನಾವು ಕಾಣಬಹುದಾಗಿದೆ.
ದೇಶದ ಹಲವು ಮಾವೋಪೀಡಿತ ಜಿಲ್ಲೆಗಳಿಂದ 30ಕ್ಕೂ ಹೆಚ್ಚು ಮಾವೋಗಳು ಶರಣಾಗಿದ್ದಾರೆ. ಹೀಗಾಗಿ, ಅವರು ಶಸ್ತ್ರಾಸ್ತ್ರ ತ್ಯಜಿಸಿದ ಗಡಿಭಾಗಗಳ ಅಭಿವೃದ್ಧಿಗೆ ಜೊತೆಯಾಗುವಂತೆ ಯುಎಂಎಚ್ಎ ಒತ್ತಾಯಿಸಿದೆ. ಇದೇ ವೇಳೆ, ಶರಣಾಗದ ಮಾವೋಗಳ ವಿರುದ್ಧ ಸೇನೆ ಮತ್ತು ಭದ್ರತಾ ಪಡೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.
ಸರ್ಕಾರದ ಕ್ರಮಗಳು: ಮಾವೋಗಳ ಬಂಡಾಯ ಭಾರತದ ಶಸ್ತ್ರಾಸ್ತ್ರ ಚಳುವಳಿಯಲ್ಲಿ ದೀರ್ಘಾವಧಿಯದ್ದಾಗಿದೆ. ಕಳೆದ ದಶಕದಿಂದ ಮಾವೋವಾದಿಗಳ ಚಳುವಳಿ ವಿರುದ್ಧ ಸರ್ಕಾರ ನಡೆಸಿದ ಕ್ರಮಗಳು ಮಾವೋ ಹೋರಾಟದ ನಾಯಕತ್ವ ಮತ್ತು ಚಟುವಟಿಕೆಯಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಹಿಂದಿನ ನೀತಿಗಳ ಮತ್ತು ಹೊಸ ಕ್ರಮಗಳ ಮೂಲಕ ಸರ್ಕಾರ ಕೂಡ ಮಾವೋಗಳ ವಿರುದ್ಧ ಕಾರ್ಯಚರಣೆ ನಡೆಸಿದ್ದು, ಮೂರು ಹಂತದ ಕಾರ್ಯಾಚರಣೆಗೆ ಬದ್ಧವಾಗಿದೆ. ಮಿಲಿಟರಿ ವಿಧಾನ, ಅಭಿವೃದ್ಧಿ ಕಾರ್ಯತಂತ್ರ, ಮಾವೋಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಮಾವೋವಾದಿ ಪ್ರಭಾವದಿಂದ ಅವರನ್ನು ಹೊರಗುಳಿಸುವುದು ಇದರ ಭಾಗವಾಗಿದೆ. ಶರಣಾಗತಿ ಮತ್ತು ಪುನರ್ವಸತಿ ನೀತಿ, ಮಾವೋವಾದಿ ಉಗ್ರಗಾಮಿಗಳಿಗೆ ಮುಖ್ಯವಾಹಿನಿಯ ಸಮಾಜಕ್ಕೆ ಮರಳಲು ಸರ್ಕಾರ ಅವಕಾಶ ನೀಡುತ್ತದೆ.
ಎನ್ಡಿಎ ಸರ್ಕಾರ ಹೊಸ ಕಾರ್ಯಾಚರಣೆಯ ತಂತ್ರವೇ 'ಸಮಾಧಾನ್'. ಇದು ಪ್ರಮುಖವಾಗಿ ಎಂಟು ಪ್ರದೇಶದ ಗುರಿಗಳನ್ನು ಹೊಂದಿದೆ. ಬುದ್ದಿವಂತಿಕೆಯ ನಾಯಕತ್ವ, ಆಕ್ರಮಣಕಾರಿ ಸೇನಾ ತಂತ್ರ, ಪ್ರೇರಣೆ ಮತ್ತು ತರಬೇತಿ, ಡ್ಯಾಶ್ಬೋರ್ಡ್ ಆಧರಿತ ಪ್ರಮುಖ ಪ್ರದರ್ಶನಾ ಸೂಚಕಗಳು ಮತ್ತು ಪ್ರಮುಖ ಫಲಿತಾಂಶದ ಪ್ರದೇಶ, ತಂತ್ರಜ್ಞಾನದ ಬಳಕೆ, ಪ್ರತೀ ಕಾರ್ಯಾಚರಣೆ ಕ್ರಮದ ಯೋಜನೆ ಮತ್ತು ಮಾವೋಗಳ ಆರ್ಥಿಕ ಸಹಾಯವನ್ನು ಅಲಭ್ಯಗೊಳಿಸುವುದಾಗಿದೆ.
ಸೌತ್ ಏಷ್ಯಾನ್ ಟೆರರಿಸಂ ಪೋರ್ಟಲ್ (ಎಸ್ಎಟಿಪಿ) ಪ್ರಕಾರ, 2014ರಿಂದ 1,700 ಮಾವೋಗಳನ್ನು ಕೊಲ್ಲಲಾಗಿದ್ದು, 6,487 ಮಂದಿ ಬಂಧನವಾಗಿದೆ. ಹಾಗೆಯೇ 11,413 ಮಂದಿ ಶರಣಾಗಿದ್ದಾರೆ. ಇನ್ನು ಛತ್ತೀಸ್ಗಡದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ಕಾಣಬಹುದಾದ ಪ್ರಮುಖ ಅಭಿವೃದ್ಧಿ ಎಂದರೆ, ಮಾವೋ ಪ್ರದೇಶದಲ್ಲಿ ನಡೆಸಿದ ಎನ್ಕೌಂಟರ್ಗಳು ಅವರನ್ನು ಹತ್ತಿಕ್ಕುವಲ್ಲಿ ಪ್ರಮುಖವಾಗಿದೆ. ಈ ಎನ್ಕೌಂಟರ್ಗಳು ಕೊಂಚ ಸಮಾಧಾನಕಾರವಾಗಿದೆ. ಅದರಲ್ಲೂ ವಿಶೇವಾಗಿ ಛತ್ತೀಸ್ಗಢದಲ್ಲಿ ಎಂದು ಒತ್ತಿ ಹೇಳಬಹುದು.
ಮಾವೋ ಮಾಯಕತ್ವ ಮತ್ತು ಚಟುವಟಿಕೆ: ಕಳೆದೊಂದು ದಶಕದಿಂದ ಮಾವೋಗಳ ಚಳುವಳಿ ಸಂಘಟನಾತ್ಮಕ ನಾಯಕತ್ವ ಮತ್ತು ಚಟುವಟಿಕೆಯ ಕಾರ್ಯಾಚರಣೆಯಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. ಈ ಕಾರ್ಯಾಚರಣೆಯಲ್ಲಿ ಅನೇಕ ನಾಯಕರನ್ನು ಸಂಘಟನೆ ಕಳೆದುಕೊಂಡಿದೆ. ಎಸ್ಎಟಿಪಿ ದತ್ತಾಂಶದ ಪ್ರಕಾರ, ಭದ್ರತಾ ಪಡೆ ಕಳೆದ 10 ವರ್ಷದಲ್ಲಿ 9 ರಾಷ್ಟ್ರೀಯ ನಾಯಕರು, 51 ರಾಜ್ಯ ನಾಯಕರು ಮತ್ತು 283 ಸ್ಥಳೀಯ ನಾಯಕರು ಸೇರಿದಂತೆ 343 ಮಾವೋ ನಾಯಕರನ್ನು ಹತ್ಯೆ ಮಾಡಿದೆ.
ಇದು ಕೇವಲ ನಾಯಕತ್ವದ ಕೊರತೆಯನ್ನು ಮೂಡಿಸಿಲ್ಲ. ಇದರಿಂದ ಮಾವೋಗಳಲ್ಲಿ ಹೊಸ ನೇಮಕಾತಿಯನ್ನು ಮತ್ತಷ್ಟು ಕಷ್ಟಗೊಳಿಸಿದೆ. ಮಾವೋವಾದಿಗಳ ಕ್ಷೀಣಿಸುತ್ತಿರುವ ಬೆಂಬಲ ನೆಲೆ ಅವರನ್ನು ಮತ್ತಷ್ಟು ಪ್ರತ್ಯೇಕಿಸಿದೆ. ಹಾಗೆಯೇ ಸುರಕ್ಷತೆಯನ್ನು ಕಾಪಾಡುವ ಸಾಮರ್ಥ್ಯ ಅಥವಾ ಸ್ಥಳೀಯ ಸಮುದಾಯದಿಂದ ಸಹಾಯವೂ ಕುಸಿದಿದೆ. 2018ರಿಂದ ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿ ಸದಸ್ಯರಾಗಿದ್ದ ನಂಬಲ ಕೇಶವ ರಾವ್ ಅಡಿಯ ಹೊಸ ನಾಯಕತ್ವವೂ ಸ್ಥಳೀಯ ಜನರಲ್ಲಿ ರಹಸ್ಯ ಕಾಪಾಡುವಲ್ಲಿ ವಿಫಲವಾಗಿದೆ.
ಶರಣಾದವರು ಹೇಳುವ ಪ್ರಕಾರ, ಮಾವೋ ನಾಯಕತ್ವ ತಮ್ಮ ತತ್ವದ ಬೇರುಗಳಿಂದ ಹೊರಹೋಗಿದೆ. ಇದಕ್ಕಿಂತ ಹೆಚ್ಚಾಗಿ ಸರ್ಕಾರದ ಅಭಿವೃದ್ಧಿ ಉಪಕ್ರಮಗಳು ಮತ್ತು ಆಡಳಿತದ ಸುಧಾರಾಣೆಗಳು ಮಾವೋಗಳ ಹೆಜ್ಜೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಐತಿಹಾಸಿಕವಾಗಿ, ಮಾವೋಗಳು ಅಂಚಿನಲ್ಲಿರುವ ಸಮುದಾಯದ ವಿರುದ್ಧ ನ್ಯಾಯಕ್ಕಾಗಿ ಹಿಂಸಾಚಾರ ನಡೆಯುತ್ತಿತ್ತು. ಈ ವಿಷಯಗಳನ್ನು ಸರ್ಕಾರವೇ ಗಮನ ಹರಿಸುತ್ತಿದ್ದು, ಮಾವೋಗಳು ಪರ್ಯಾಯ ಕಾಣಲು ಹೋರಾಡುತ್ತಿದ್ದಾರೆ. ಬೆಂಬಲ ಕೊರತೆ, ಹೋರಾಟದ ಯಶಸ್ಸನ್ನು ಕಾಣಲು ಸಾಧ್ಯವಾಗಿಲ್ಲ. 2026ರ ಹೊತ್ತಿಗೆ ಮಾವೋ ಚಟುವಳಿಯನ್ನು ವಿರಾಮಗೊಳಿಸುವ ಎಲ್ಲಾ ಸಾಧ್ಯತೆ ಇದೆ.
ದಶಕಗಳ ಹಿಂಸಾಚಾರಕ್ಕೆ ಅಡೆತಡೆಯ ಬಳಿಕ ಮಾವೋ ಹಿಂಸಾಚಾರಗಳ ಅಂತ್ಯ ನಿಸ್ಸಂಶಯವಾಗಿ ಸಕಾರಾತ್ಮಕ ಅಭಿವೃದ್ಧಿ ಕಾಣುತ್ತಿದೆ. ಆದಾಗ್ಯೂ ಮಾವೋಗಳ ಶಸ್ತ್ರಾಸ್ತ್ರ ಹೋರಾಟದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಹೋರಾಡಿದೆ ಎಂಬುದನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ಆರು ದಶಕಗಳಿಗೂ ಹೆಚ್ಚು ಕಾಲದ ಈ ಚಳುವಳಿಯ ಪೀಡಿತ ಪ್ರದೇಶಗಳ ಸಾಮಾಜಿಕ ರಾಜಕೀಯ ರಚನೆಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ.
ಸದ್ಯ ನಡೆಯುತ್ತಿರುವ ಘರ್ಷಣೆಯು ಸಾವಿರಾರು ಜನರನ್ನು ಸ್ಥಳಾಂತರ ಮಾಡಿದ್ದು, ಕೆಲವು ಸಾಮಾಜಿಕ ಬದಲಾವಣೆ ನಡೆಸಿದೆ. ಸರ್ಕಾರ 2026ರ ಮಾರ್ಚ್ ಹೊತ್ತಿಗೆ ಮಾವೋಗಳನ್ನು ಹತ್ತಿಕ್ಕುವ ಬದ್ಧತೆ ಮೂಲಕ ಎಲ್ಲಾ ಅಗತ್ಯ ಕ್ರಮ ಮತ್ತು ಗುರಿಗಳು ನಿರ್ಣಾಯಕವಾಗಿದೆ. ಆಳವಾದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನಗಳು ನಡೆಯಬೇಕು. ಇದೇ ವೇಳೆ ಅವರ ಹೋರಾಟವು ರಾಜ್ಯದ ವಿರುದ್ದ ನಿರರ್ಥಕ ಎಂಬುದನ್ನು ತಿಳಿಸಿ, ಮಾತುಕತೆ ಮತ್ತು ಶಾಂತಿಯುತ ನಿರ್ಣಯದ ಮೂಲಕ ಹಿಂಸಚಾರ ಮಾರ್ಗ ತ್ಯಜಿಸುವ ಸಮಯವಾಗಿದೆ.
ದೀರ್ಘ ಹೋರಾಟಗಳು ಸಾಮಾಜಿಕ ಒಗ್ಗಟ್ಟಿನ ಮೇಲೂ ಪರಿಣಾಮ ಬೀರಿದ್ದು, ಇದು ಸಮುದಾಯಗಳನ್ನು ಮರು ನಿರ್ಮಾಣದ ಮೇಲೆ ಕೂಡ ಪರಿಣಾಮ ಹೊಂದಿದೆ. ಮಾವೋವಾದಿಗಳನ್ನು ಸೋಲಿಸಬೇಕಾದರೆ, ಸರ್ಕಾರವು ಪೀಡಿತ ಜನಸಂಖ್ಯೆಯ ಪುನರ್ವಸತಿ ಮತ್ತು ಅವರ ಕುಂದುಕೊರತೆಗಳ ಮೂಲ ಕಾರಣಗಳನ್ನು ಪರಿಹರಿಸುವತ್ತ ಗಮನಹರಿಸಬೇಕು. ಮಾವೋವಾದಿ ಹೋರಾಟದ ಅಂತ್ಯವನ್ನು ಹೊಸ ಅಧ್ಯಯನವಾಗಿ ಗುರಿತಿಸಬೇಕಿದೆ.
ಸೂಚನೆ: ಈ ಲೇಖನದ ಸಂಪೂರ್ಣ ಅಭಿಪ್ರಾಯಗಳು ಲೇಖಕರದ್ದಾಗಿದೆ.
ಇದನ್ನೂ ಓದಿ: Explained: ಏನಿದು ಒಂದು ದೇಶ, ಒಂದು ಚುನಾವಣೆ? ಇಲ್ಲಿದೆ ವಿಧೇಯಕದ ಒಳಹೊರಗು