ನವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ಎಲ್ಲಾ ವಿಫಲ ಮಾತುಕತೆಗಳ ಹೊರತಾಗಿ ಸದ್ಯ ಅರವಿಂದ್ ಕೇಜ್ರಿವಾಲ್ ಅವರ ಏಕಾಂಗಿ ಸ್ಪರ್ಧೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಈ ಚುನಾವಣೆ ಕೇಜ್ರಿವಾಲ್ ನಾಯಕತ್ವ ಮತ್ತು ರಾಜಕೀಯ ಪ್ರಸ್ತುತಿಯಲ್ಲಿ ನಿರ್ಣಾಯಕವಾಗಿದ್ದು, ಅಗ್ನಿ ಪರೀಕ್ಷೆಯೇ ಆಗಿದೆ.
ಇತ್ತೀಚಿನ ಬಂಧನದ ಬಳಿಕ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದು ಹೊರ ಬಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೆಹಲಿಗೆ ಅತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಈ ನಡೆಯು ಕೇವಲ ಎಎಪಿಗೆ ಮಾತ್ರವಲ್ಲದೇ, ಮುಂದಿನ ಚುನಾವಣೆಯಲ್ಲಿ ದೆಹಲಿ ಮತದಾರರಿಗೂ ಕೂಡ ಗೊಂದಲ ಮೂಡಿಸಿದೆ.
ಮತ್ತೊಂದೆಡೆ ಕಾಂಗ್ರೆಸ್ ಕೂಡ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಲ್ಪ ಹಿಡಿತವನ್ನು ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಮತ ಪ್ರಮಾಣವೂ ಶೇ 10ಕ್ಕಿಂತ ಕಡಿಮೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಕೂಟವನ್ನು ಸೇರಿದ ಬಳಿಕ ದೆಹಲಿಯ ಏಳು ಸಂಸದೀಯ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲುವು ಕಾಣುವಲ್ಲಿ ವಿಫಲವಾಗಿದೆ.
ದೆಹಲಿಯಲ್ಲಿ ಮೂರು ಪಕ್ಷಗಳ ತ್ರಿಕೋನಸ್ಪರ್ಧೆ ಮತಗಳ ಹಂಚಿಕೆಗೆ ಕಾರಣವಾಗಲಿದೆ. ಅದರಲ್ಲೂ ಮುಸ್ಲಿಂ ಮತ್ತು ದಲಿತ ಸಮುದಾಯಗಳ ಮತವು ಎಎಪಿಗೆ ಸವಾಲಾಗಬಹುದು. ಈ ಮತಹಂಚಿಕೆಯು ಕಾಂಗ್ರೆಸ್ಗೆ ಲಾಭವಾಗುವ ಸಾಧ್ಯತೆ ಇದೆ. ಎಎಪಿ ದುರ್ಬಲ ಹೊಂದಿದಂತೆ ಅದು ಬಿಜೆಪಿಗೆ ಲಾಭವನ್ನು ತರುತ್ತದೆ.
ಪಕ್ಷಗಳು ಮೈತ್ರಿ ಹೊರತಾಗಿಯೂ ಏಕಾಂಗಿ ಸ್ಪರ್ಧೆಯು ಎಎಪಿಗೆ ಹಾನಿ ಮಾಡುವ ಜೊತೆಗೆ ಕಾಂಗ್ರೆಸ್ಗೆ ಲಾಭವೂ ಆಗಬಹುದು. ಕೇಜ್ರಿವಾಲ್ ಅವರಿಗೆ ಮತಗಳ ಪಾಲು ಕಡಿಮೆಯಾಗಬಹುದು. ದೆಹಲಿಯನ್ನು ಎಎಪಿಯ ಭದ್ರಕೋಟೆಯಾಗಿಸುವಲ್ಲಿ ಅವರ ರಾಜಕೀಯ ಬ್ರಾಂಡ್ ಮತ್ತಷ್ಟು ಕಡಿಮೆಯಾಗುತ್ತದೆಯಾ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ.
ದೆಹಲಿ ಚುನಾವಣೆಯಲ್ಲಿ ಬದಲಾವಣೆ:ದೆಹಲಿ ಚುನಾವಣಾ ಟ್ರೆಂಡ್ ಗಮನಿಸಿದಾಗ ವಿಧಾನಸಭೆಯಿಂದ ಲೋಕಸಭೆವರೆಗೆ ಸಾಕಷ್ಟು ವ್ಯತ್ಯಾಸ ಕಾಣಬಹುದಾಗಿದ್ದು, ಮತದಾರರಲ್ಲಿ ದ್ವಂದ್ವ ನಿಲುವು ಕಾಣಬಹುದಾಗಿದೆ. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 53ರಷ್ಟು ಮತ ಹಂಚಿಕೆ ಪಡೆದರೆ, ಬಿಜೆಪಿ ಶೇ 38 ಮತ್ತು ಕಾಂಗ್ರೆಸ್ ಕೇವಲ ಶೇ 4ರಷ್ಟು ಮತ ಹಂಚಿಕೆ ಪಡೆದಿತ್ತು.
ಅದೇ 2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಶೇ 54ರಷ್ಟು, ಬಿಜೆಪಿ ಶೇ 32 ಮತ್ತು ಕಾಂಗ್ರೆಸ್ ಶೇ. 9ರಷ್ಟು ಮತ ಗಳಿಸಿತ್ತು. ಇದಕ್ಕಿಂತ ಮುಂದಿನ ಚುನಾವಣೆ ಅಂದರೆ ಎಎಪಿ ಮೊದಲ ಚುನಾವಣೆಯಲ್ಲಿ 2013ರಲ್ಲಿ ಕಾಂಗ್ರೆಸ್ ಶೇ 24ರಷ್ಟು, ಬಿಜೆಪಿ ಶೇ. 33ರಷ್ಟು ಹಾಗೂ ಎಎಪಿ ಶೇ. 29ರಷ್ಟು ಮತ ಗಳಿಸಿತ್ತು. ಈ ವೇಳೆ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿತ್ತು.
ಈ ಮತಹಂಚಿಕೆ ಬದಲಾವಣೆಯನ್ನು ಗಮನಿಸಿದಾಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 54ರಷ್ಟು ಮತಹಂಚಿಕೆ ಪಡೆದರೆ, ಎಎಪಿ ಶೇ 24 ಹಾಗೂ ಕಾಂಗ್ರೆಸ್ ಶೇ. 18ರಷ್ಟು ಮತ ಗಳಿಸಿತು. 2019ರ ಚುನಾವಣೆಯಲ್ಲೂ ಇದೇ ಟ್ರೆಂಡ್ ಕಾಣಬಹುದಾಗಿದೆ. ಇಲ್ಲಿ ಬಿಜೆಪಿ ಶೇ 56, ಎಎಪಿ ಶೇ 22 ಮತ್ತು ಕಾಂಗ್ರೆಸ್ ಶೇ 18ರಷ್ಟು ಮತಗಳಿಸಿತ್ತು. ಇನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 46, ಎಎಪಿ ಶೇ 32 ಹಾಗೂ ಕಾಂಗ್ರೆಸ್ ಶೇ 15ರಷ್ಟು ಮತ ಹಂಚಿಕೆಯಾಗಿತ್ತು.
ದೆಹಲಿಯ ಮತದಾನದ ನಡವಳಿಕೆಯು ವಿಶಿಷ್ಟ ಬೆಂಬಲದ ಆಧಾರವಾಗಿದೆ. ಬಿಜೆಪಿ ಸಿದ್ಧಾಂತಬೆಂಬಲಿಸುವ ಮತದಾರರು ನಿರಂತರವಾಗಿ ಶೇ. 32ರಷ್ಟಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಎಎಪಿಗೆ ಶೇ 18ರಷ್ಟು ಬೆಂಬವಿದೆ. ರಾಷ್ಟ್ರೀಯ ಚುನಾವಣೆಗಿಂತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ ಶೇ. 18ರಷ್ಟು ಮತಗಳನ್ನು ಲೋಕಸಭೆಯಲ್ಲಿ ಗಳಿಸಿದರೂ, ರಾಜ್ಯ ಚುನಾವಣೆಯಲ್ಲಿ ಈ ಬೆಂಬಲ ಎಎಪಿಗೆ ಬದಲಾಗುತ್ತಿದೆ.