ಕರ್ನಾಟಕ

karnataka

ಬಾಂಗ್ಲಾ ಬಿಕ್ಕಟ್ಟು: ಭಾರತದ ಕೊಡುಗೆ ಸ್ಮರಿಸುವ ವಿಮೋಚನಾ ಯುದ್ಧ ಸ್ಮಾರಕಗಳಿಗೆ ಅಪಾಯ - Bangladesh Crisis

By ETV Bharat Karnataka Team

Published : Aug 19, 2024, 10:33 PM IST

ಬಾಂಗ್ಲಾದೇಶದ ಸದ್ಯದ ಪರಿಸ್ಥಿತಿಯಲ್ಲಿ ವಿಮೋಚನಾ ಯುದ್ಧ ಸ್ಮಾರಕಗಳು ಗೌರವ ಪಡೆಯುತ್ತವೆಯೇ ಎಂಬ ಪ್ರಶ್ನೆ ಮೂಡಿದೆ. ಈ ಕುರಿತು 'ಈಟಿವಿ ಭಾರತ್' ನೆಟ್​ವರ್ಕ್​ ಎಡಿಟರ್​ ಬಿಲಾಲ್​ ಭಟ್​ ಅವರ ಲೇಖನ ಇಲ್ಲಿದೆ.

war memorials will be honored in the current situation in Bangladesh
ಬಾಂಗ್ಲಾದೇಶ ವಾರ್​ ಮೆಮೋರಿಯಲ್​ ಮ್ಯೂಸಿಯಂ ಚಿತ್ರ (ETV Bharat (ವಾರ್​ ಮೆಮೋರಿಯಲ್​ ಮ್ಯೂಸಿಯಂ))

ಢಾಕಾದಲ್ಲಿ ವಾರ್​ ಮೆಮೋರಿಯಲ್​ ಮ್ಯೂಸಿಯಂ (ವಿಮೋಚನಾ ಯುದ್ಧದ ವಸ್ತು ಸಂಗ್ರಹಾಲಯ)ವು ಬಾಂಗ್ಲಾದೇಶದ ವಿಮೋಚನಾ ಸಂದರ್ಭದಲ್ಲಿ ಹೋರಾಟದ ಚಿತ್ರಣವನ್ನು ಒಳಗೊಂಡಿದೆ. ಇದರಲ್ಲಿ ಶೇಖ್​ ಮುಜಿಬುರ್​ ರೆಹಮಾನ್​ ಮತ್ತು ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಛಾಯಚಿತ್ರಗಳಿವೆ. ಮಹಾನ್​ ಕೆಲಸಗಳು ದೊಡ್ಡ ತ್ಯಾಗದಿಂದಲೇ ಸಾಧ್ಯ ಎಂಬ ಶೇಖ್​ ಮುಜಿಬುರ್​​ ರೆಹಮಾನ್​ ಅವರ ಹೇಳಿಕೆಯನ್ನು ಈ ಮ್ಯೂಸಿಯಂನ ವೆಬ್​ಸೈಟ್‌ನ ಮುಖಪುಟ ಹೊಂದಿದೆ.

ಹೋರಾಟದ ಪ್ರತೀಕವಾಗಿರುವ ಯುದ್ಧ ಸ್ಮಾರಕಗಳು: ವಿಮೋಚನಾ ಯುದ್ಧದ ಸಂದರ್ಭದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಕಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಮುಖ ಮ್ಯೂಸಿಯಂ ಇದಾಗಿದೆ. ಇಲ್ಲಿನ ಮ್ಯೂಸಿಯಂಗೆ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಭೇಟಿ ನೀಡುವ ಮೂಲಕ ಆ ಸಂದರ್ಭದಲ್ಲಿ ಬಂಗಾಳಿ ಮಾತನಾಡುವ ಜನರ ಮೇಲೆ ಪಾಕಿಸ್ತಾನ ಸೇನೆಯ ದೌರ್ಜನ್ಯಗಳನ್ನು ಚಿತ್ರಗಳ ಮೂಲಕ ತೋರಿಸುವ ಪ್ರಯತ್ನ ನಡೆಸಲಾಗಿದೆ. ಪಶ್ಚಿಮ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಒದಗಿಸುವ ನಿಟ್ಟಿನಲ್ಲಿ ಭಾರತದ ಸ್ನೇಹಯುತ ಮುಖವನ್ನು ಇಲ್ಲಿ ಎತ್ತಿ ತೋರಿಸಲಾಗಿದೆ. ಈ ಚಿತ್ರಗಳಲ್ಲಿ ರಾಜ್ಯಗಳ ರಾಷ್ಟ್ರೀಯತೆಯಲ್ಲಿ ಭಾಷೆಗಳ ಪ್ರಾಮುಖ್ಯತೆಯನ್ನು ತೋರಿಸಿದೆ. ಜೊತೆಗೆ, ಪಶ್ಚಿಮ ಪಾಕಿಸ್ತಾನದಿಂದ ಬಾಗ್ಲಾದೇಶದ ಸ್ವಾತಂತ್ರ್ಯದಲ್ಲಿ ಭಾರತದ ಬೆಂಬಲವನ್ನು ಲೋಕಕ್ಕೆ ಸಾರುತ್ತಿದೆ.

ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶೇಖ್ ಮುಜಿಬುರ್ ರೆಹಮಾನ್ ಅವರು ಸ್ನೇಹ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು. (ETV Bharat​​ (ವಾರ್​ ಮೆಮೋರಿಯಲ್​ ಮ್ಯೂಸಿಯಂ))

ಮ್ಯೂಸಿಯಂನ ಸೆಲ್ಯೂಲಾಯ್ಡ್​​ ಡಿಸ್​ಪ್ಲೇಯಿಂದಾಗಿ ಸ್ವಾತಂತ್ರ್ಯ ಹೋರಾಟದಲ್ಲಿನ ಭಾರತದ ಯೋಜನೆ ಮತ್ತು ಒಳಗೊಳ್ಳುವಿಕೆಯ ಕುರಿತು ಭವಿಷ್ಯದ ಪೀಳಿಗೆ ಮಾಹಿತಿ ಸಿಗುತ್ತಿದೆ. ವಿಮೋಚನಾ ಚಳವಳಿಯಲ್ಲಿ ಪಶ್ಚಿಮ ಪಾಕಿಸ್ತಾನದ ಸೇನೆಯಿಂದ ಮುಜಿಬುರ್​ ಮತ್ತು ಅವರ ಸ್ನೇಹಿತರಿಗೆ ಭಾರತ ನೀಡಿದ ಬೆಂಬಲವನ್ನು ಹೇಳುತ್ತಿದೆ. ಇದು ಭಾರತದ ಬಗ್ಗೆ ಬಾಂಗ್ಲಾದೇಶೀಯರ ಆಲೋಚನೆಯನ್ನು ಬಲಗೊಳಿಸುತ್ತಿದೆ.

ಈ ಮ್ಯೂಸಿಯಂ ಸ್ಥಾಪನೆಯ ಹಿಂದಿನ ಉದ್ದೇಶ, ವಿಮೋಚನಾ ಹೋರಾಟದ ಕುರಿತು ಜನರಿಗೆ ತಿಳಿಸುವುದಾಗಿದೆ. ವಿಮೋಚನಾ ಹೋರಾಟದಲ್ಲಿ ಜನರ ಬಲಿದಾನವಿದೆ ಎಂಬುದನ್ನು ಸ್ಮಾರಣಿಯಾಗಿಸುವುದಾಗಿದೆ. ಇದರ ಪ್ರಾಥಮಿಕ ಉದ್ದೇಶದಲ್ಲಿ ಯುದ್ದ ಸಂದರ್ಭದಲ್ಲಿ ಏನಾಯಿತು, ಜನರು ಹೇಗೆ ದೌರ್ಜನ್ಯ ಮತ್ತು ಅಧೀನತೆ ಎದುರಿಸಿದರು ಎಂದು ತೋರಿಸುವುದಾಗಿತ್ತು.

ಪ್ರತಿಭಟನೆ ಮುಳುವಾದಾಗ..: ಇದೀಗ ಹಸೀನಾ ದೇಶ ತೊರೆದಿದ್ದು, ಹೇಗೆ ಏನಾಯಿತು ಎಂದು ಆಕೆ ಚಿಂತಿಸುತ್ತಿದ್ದಾರೆ. ಈ ನಡುವೆ ಅವರು ತಮ್ಮದೇ ಪತನದ ಕಥೆಯನ್ನು ಸಾಹಿತ್ಯ ಮತ್ತು ಚಲನಚಿತ್ರದ ಮೂಲಕ ಜನರಿಗೆ ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಸೇನೆ ಮತ್ತು ಬೇಹುಗಾರಿಕೆಗೆ ಬೆಂಬಲ ನೀಡುವ ಜನರಿಗೆ 'ರಾಜಾಕಾರ್'​ ಎಂದು ಅವರು ಉಲ್ಲೇಖಿಸಿದ್ದಾರೆ. ರಾಜಾಕಾರ್​ ಎಂಬ ಪದವನ್ನು ರಾಷ್ಟ್ರೀಯವಾದಿಗಳಿಗೆ ಹೆಚ್ಚಾಗಿ ಬಳಕೆ ಮಾಡಿದ ಕಾರಣ ಹಸೀನಾ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆಚ್ಚಾಗಲು ಕಾರಣವಾಯಿತು. ವಿಮೋಚನಾ ಯುದ್ಧವನ್ನು ನೋಡಿ ಬೆಳೆದ ಹೋರಾಟದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಈ ಪದ ಬಳಸಿದ್ದರು.

ಬಾಂಗ್ಲಾ ಸ್ವಾತಂತ್ರ್ಯಕ್ಕೆ ಪಾಕಿಸ್ತಾನಿ ಸೇನಾ ಕಮಾಂಡರ್​ ಲೆ.ಎ.ಎ.ಕೆ.ನಜೀಜ್, ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್​ ಜಗಜಿತ್​ ಸಿಂಗ್​​ ಆರೋರಾ ಸಹಿ ಹಾಕುತ್ತಿರುವುದು. (ETV Bharat​​ (ವಾರ್​ ಮೆಮೋರಿಯಲ್​ ಮ್ಯೂಸಿಯಂ))

ಪ್ರತಿಮೆಗಳ ನಾಶ: ಇತ್ತೀಚಿನ ಹೋರಾಟ ಮತ್ತು ನಾಯಕತ್ವದ ಬದಲಾವಣೆಯಲ್ಲಿ ಮುಜಿಬರ್​​ ಅವರ ಹೋರಾಟ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ಸ್ಮಾರಕಗಳನ್ನು ನಾಶ ಮಾಡಲಾಗುತ್ತಿದೆ. ಇದು ಹಸೀನಾ ಪಕ್ಷವಾದ ಅವಾಮಿ ಲೀಗ್​ನ ಉದಯದಲ್ಲಿ ಭಾರತದ ಕೊಡುಗೆ, ಸಂಬಂಧವನ್ನು ಹೇಳುತ್ತಿದೆ. ಇದು ಕೂಡ ಪ್ರಸ್ತುತ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ. ಇದೇ ಕಾರಣಕ್ಕೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಸಹಭಾಗಿತ್ವದ ಸೂಚನೆಗಳು ಕೂಡ ಅಪಾಯದಲ್ಲಿದೆ. ಉದ್ಯೋಗ ಮೀಸಲಾತಿ ಪ್ರತಿಭಟನೆಯಿಂದ ಉದಯವಾಗಿರುವ ಯವ ನಾಯಕತ್ವಗಳು ಹಳೆಯ ನಿರೂಪಣೆಗಳನ್ನು ಬರೆಯುತ್ತಿದ್ದು, ಪ್ರತಿಭಟನಾಕಾರರು ದೇಶದ ಸಂಸ್ಥಾಪಕರ ಪ್ರತಿಮೆಗಳನ್ನು ನಾಶ ಮಾಡುತ್ತಿದ್ದಾರೆ. ಇದು ಶೇಖ್​ ಕುಟುಂಬದ ಭಾಗವಾಗಿರುವ ಎಲ್ಲ ವಿಷಯಗಳ ಬಗ್ಗೆ ದ್ವೇಷವನ್ನು ಹೊಂದಿರುವುದು ತೋರಿಸುತ್ತಿದೆ.

ಇತಿಹಾಸವನ್ನು ಪುನಃ ಬರೆಯಬೇಕಾಗಿದ್ದು, ಹಳೆಯದನ್ನು ಮರುಸ್ಥಾಪಿಸಬೇಕಿದೆ. ಈ ಬಾರಿ ಬದಲಾವಣೆಯು ತ್ಯಾಗ- ಬಲಿದಾನದ ಕಥೆಯನ್ನು ಅಳಿಸುತ್ತಿದೆ. ಬಾಂಗ್ಲಾದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಬಾಂಗ್ಲಾದಲ್ಲಿ ಕೋಮುಗಲಭೆಗಳನ್ನು ಪ್ರಚೋದಿಸಲಾಗುತ್ತಿದೆ ಎಂದು ಬಿಂಬಿತವಾದ ಕೆಲವು ಭಾರತದ ಚಾನಲ್​ಗಳ ವರದಿಗಳು ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಹಿಂದೆ ಬಾಂಗ್ಲಾಗೆ ಸಂರಕ್ಷಕನ ಸ್ಥಾನದಲ್ಲಿದ್ದ ಭಾರತ ಸವಾಲುಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಭಾರತದ ವಿದೇಶಿ ನೀತಿಯಲ್ಲಿ ಬದಲಾವಣೆ ಅಗತ್ಯ. ಅದರಲ್ಲಿ ಹಸೀನಾಗೆ ಅಮೆರಿಕ ಮತ್ತು ಬ್ರಿಟನ್​ಗಳು ಆಶ್ರಯದ ಬಾಗಿಲು ಬಂದ್​ ಮಾಡಿದ ಬಳಿಕ, ಹಸೀನಾಗೆ ಬೆಂಬಲ ನೀಡುವಲ್ಲಿ ಭಾರತ ಸರಿಯಾದ ಆಯ್ಕೆ ಮಾಡಿದೆಯೇ? ದಶಕಗಳ ಕಾಲ ಸ್ನೇಹ ಸಂವಹವನ್ನು ಹೊಂದಿದ್ದ ಭಾರತ ಇದೀಗ ಬಾಂಗ್ಲಾದ ಹೊಸ ಮಧ್ಯಂತರ ಸರ್ಕಾರದೊಂದಿಗೆ, ಅದೇ ರೀತಿಯ ಮುಕ್ತತೆ ಹೊಂದಲಿದೆಯೇ ಎಂಬುದನ್ನು ನೋಡಬೇಕಿದೆ.

ಬಾಂಗ್ಲಾ ಸ್ವಾತಂತ್ರ್ಯಕ್ಕೆ ಪಾಕಿಸ್ತಾನಿ ಸೇನಾ ಕಮಾಂಡರ್​ ಲೆ.ಎಎಕೆ ನಜೀಜ್, ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್​ ಜಗಜಿತ್​ ಸಿಂಗ್​​ ಆರೋರಾ ಸಹಿ ಹಾಕುತ್ತಿರುವುದು. (ETV Bharat​​ (ವಾರ್​ ಮೆಮೋರಿಯಲ್​ ಮ್ಯೂಸಿಯಂ))

ಹೊಸ ಇತಿಹಾಸ ಸೃಷ್ಟಿಗೆ ಯತ್ನ: ಢಾಕಾ ವಿಭಿನ್ನ ದಾರಿಯಲ್ಲಿ ತೆರೆದುಕೊಳ್ಳುವ ಭಾರೀ ಸಾಧ್ಯತೆ ಇದೆ. ಅದು ಭಾರತಕ್ಕೆ ಸೂಕ್ತವಾಗುವುದಿಲ್ಲ. ಚೀನಾದ ಪ್ರಭಾವ ದೇಶದ ಮೇಲೆ ಹೆಚ್ಚಿರಲಿದೆ. ಹೊಸ ಪೀಳಿಗೆಯು 1971ರ ಯುದ್ಧದ ನಂತರ ಹೋರಾಟ, ಗೋಡೆ ಮೇಲೆ ಬರೆದಿದ್ದಕ್ಕಿಂತ ಹೆಚ್ಚಿನದು ನೆನಪಿನಲ್ಲಿಡಲು ಸಾಧ್ಯವಿಲ್ಲ. ಇತ್ತೀಚಿನ ಹೊಸ ಬೆಳವಣಿಗೆಯ ಈ ಇತಿಹಾದ ಬದಲಾವಣೆ ಆಗಲಿದೆ. ಹೊಸ ನಾಯಕತ್ವದಲ್ಲಿ ಈ ಹಿಂದಿನ ಹೋರಾಟಗಳು ನಾಶ ಮಾಡಲಿದೆ. ಇದು ಉದ್ಯೋಗ ಮೀಸಲಾತಿ ಕುಟುಂಬದ ವಿರುದ್ಧ ಮುಕ್ತಿ ಬಾಹಿನಿ ವಿರುದ್ಧ ಹೋರಾಟಕ್ಕೂ ಕಾರಣವಾಗುತ್ತದೆ. ಮುಕ್ತಿ ಬಾಹಿನಿ​ ಪಶ್ಚಿಮ ಪಾಕಿಸ್ತಾನದ ಸೇನೆ ವಿರುದ್ಧ ಹೋರಾಟಕ್ಕೆ ಭಾರತ ನೀಡಿದ ಬೆಂಬಲ ಇದಾಗಿದೆ. ಭಾರತದ ನಿಲುವನ್ನು ಅಲ್ಲಗಳೆಯುವ ಮತ್ತು ವಿಮೋಚನಾ ಯುದ್ಧದ ಸಂಕೇತವನ್ನು ತಿರಸ್ಕರಿಸುವ ಮೂಲಕ ವಿರೋಧಿಸಲಾಗುವುದು. ಮುಕ್ತಿ ಬಾಹಿನಿ ಮತ್ತು ರಾಜಾಕರ್​ ಅವರನ್ನು ಸ್ನೇಹಿತರು ಮತ್ತು ಶತ್ರುಗಳು, ದೇಶಭಕ್ತರು ಮತ್ತು ವಿರೋಧಿಗಳು ಎಂಬ ಮಾತಿದೆ. ಹಸೀನಾ ಅವರ ರಾಜಾಕಾರ್​ ಎಂಬ ಶಬ್ಧವೂ ದೇಶದ ಸಂಪೂರ್ಣ ಪರಿಸ್ಥಿತಿಯನ್ನು ಬದಲಾಯಿಸಿದೆ.

ವಾರ್​ ಮೆಮೋರಿಯಲ್​ ಮ್ಯೂಸಿಯಂ ಮುಂದಿನ ಭಾಗ (ETV Bharat​ (ವಾರ್​ ಮೆಮೋರಿಯಲ್​ ಮ್ಯೂಸಿಯಂ))

ರಾಜಾಕಾರ್​ ಪದದಿಂದಾಗಿ ಸರ್ಕಾರ ಮತ್ತು ಪಕ್ಷವೆರಡು ಹೆಚ್ಚಿನ ಬೆಲೆ ತೆತ್ತಿದೆ. ಏಷ್ಯಾದಲ್ಲಿ ಆಡಳಿತ ಪಕ್ಷದ ಕುಟುಂಬದ ವಿರುದ್ಧ ಜನರು ಹೋರಾಟಕ್ಕೆ ಇಳಿದ ಎರಡನೇ ದೇಶ ಬಾಂಗ್ಲಾದೇಶವಾಗಿದೆ. ಮೊದಲಿಗೆ ಚೀನಾವಾಗಿದೆ. ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದು, ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿಗೆ ನಾವು ಕಾರಣರಲ್ಲ': ಅಮೆರಿಕದ ಸ್ಪಷ್ಟನೆ

ABOUT THE AUTHOR

...view details