ETV Bharat / bharat

ಅಮಿತ್​ ಶಾ ಅಂಬೇಡ್ಕರ್​ ಹೇಳಿಕೆಗೆ ಪ್ರತಿಯಾಗಿ ವಿದ್ಯಾರ್ಥಿವೇತನ ಘೋಷಿಸಿದ ಕೇಜ್ರಿವಾಲ್​ - AMBEDKAR SCHOLARSHIP

ಆಮ್​ ಆದ್ಮಿ ಪಕ್ಷವು ಮತ್ತೊಂದು ಘೋಷಣೆ ಹೊರಡಿಸಿದೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುವ ದೆಹಲಿಯ ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ನೀಡುವುದಾಗಿ ಹೇಳಿದೆ.

ಅರವಿಂದ್​ ಕೇಜ್ರಿವಾಲ್
ಅರವಿಂದ್​ ಕೇಜ್ರಿವಾಲ್ (ETV Bharat)
author img

By PTI

Published : Dec 21, 2024, 9:02 PM IST

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ರಾಜ್ಯಸಭೆಯಲ್ಲಿ ಡಾ. ಅಂಬೇಡ್ಕರ್​ ಅವರ ಬಗ್ಗೆ ಆಡಿದ ಮಾತಿಗೆ ಪ್ರತಿಯಾಗಿ ದೆಹಲಿ ಮಾಜಿ ಸಿಎಂ, ಆಮ್​ ಆದ್ಮಿ ಪಕ್ಷದ (ಆಪ್​​) ನೇತಾರ ಅರವಿಂದ್​ ಕೇಜ್ರಿವಾಲ್​​ ಅವರು ದಲಿತ ವಿದ್ಯಾರ್ಥಿಗಳು ವಿದೇಶದಲ್ಲಿ ಉಚಿತ ಶಿಕ್ಷಣ ಪಡೆಯಲು 'ಅಂಬೇಡ್ಕರ್​ ವಿದ್ಯಾರ್ಥಿವೇತನ'ವನ್ನು ಘೋಷಿಸಿದ್ದಾರೆ.

ದೆಹಲಿಯ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಹಲವಾರು ಘೋಷಣೆ ಹೊರಡಿಸುತ್ತಿರುವ ಆಪ್​​ ಮುಖ್ಯಸ್ಥರು, ಇಂದು (ಶನಿವಾರ) ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಯೋಜನೆಯನ್ನು ಪ್ರಕಟಿಸಿದರು.

ಅಂಬೇಡ್ಕರ್​ಗೆ ಬಿಜೆಪಿ ಅವಮಾನ: ಸಂವಿಧಾನ ಶಿಲ್ಪಿ ಡಾ. ಬಿ. ಆರ್​. ಅಂಬೇಡ್ಕರ್ ಅವರನ್ನು ಬಿಜೆಪಿ, ಅಮಿತ್​ ಶಾ ಅವರು ಅವಮಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಹೆಸರಿನಲ್ಲೇ ದೆಹಲಿಯ ದಲಿತ ವಿದ್ಯಾರ್ಥಿಗಳಿಗೆ ವೇತನ ನೀಡುವ 'ಅಂಬೇಡ್ಕರ್​ ಸಮ್ಮಾನ್​ ಸ್ಕಾಲರ್​ಶಿಪ್​' ಅನ್ನು ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರ ಮಾತುಗಳು ಅಂಬೇಡ್ಕರ್ ಅವರನ್ನು ಪ್ರೀತಿಸುವ ದೇಶದ ಕೋಟಿಗಟ್ಟಲೆ ಜನರಿಗೆ ತೀವ್ರ ನೋವುಂಟು ಮಾಡಿದೆ. ಶಿಕ್ಷಣವೇ ಭವಿಷ್ಯದ ದಾರಿ ಎಂದು ಅಂಬೇಡ್ಕರ್ ಅವರ ಮಾತಾಗಿತ್ತು. ಅವರೂ ಎಲ್ಲ ವಿಘ್ನಗಳನ್ನು ಮೆಟ್ಟಿನಿಂತು ಅಮೆರಿಕದಲ್ಲಿ ಪಿಹೆಚ್‌ಡಿ ಪಡೆದವರು ಎಂದರು.

ದಲಿತ ವಿದ್ಯಾರ್ಥಿಗಳಿಗೆ ನೆರವು: "ಈ ಯೋಜನೆಯಡಿ ದೆಹಲಿಯ ದಲಿತ ವಿದ್ಯಾರ್ಥಿಗಳು ವಿದೇಶದ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರೆ, ಅವರ ಶಿಕ್ಷಣ, ಪ್ರಯಾಣ ಮತ್ತು ವಸತಿ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ. ಸರ್ಕಾರಿ ನೌಕರರ ಮಕ್ಕಳೂ ಈ ಯೋಜನೆಗೆ ಅರ್ಹರಾಗುತ್ತಾರೆ" ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.

ವಿದ್ಯಾರ್ಥಿವೇತನವನ್ನು ಹೇಗೆ ಮತ್ತು ಯಾವಾಗ ನೀಡಲಾಗುತ್ತದೆ ಎಂಬುದನ್ನು ಅವರು ವಿವರಿಸಿಲ್ಲ. 2025 ರ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಭರಪೂರ ಭರವಸೆಗಳನ್ನು ಪ್ರಕಟಿಸಿರುವ ಆಪ್​ ಪಕ್ಷವು, ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ವಯಸ್ಕ ಮಹಿಳೆಯರಿಗೆ ಮಾಸಿಕ 2,100 ರೂಪಾಯಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದೆ.

ಇದನ್ನೂ ಓದಿ: ಕೇಜ್ರಿವಾಲ್​ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ; ಸುಳ್ಳು ವರದಿ ಎಂದ ಸಿಸೋಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.