ಕೀವ್ (ಉಕ್ರೇನ್) : ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸಾವಿರಾರು ಜನರನ್ನು ಬಲಿಪಡೆದಿದೆ. ಇದೀಗ ಅದು ಮತ್ತೊಂದು ಮಜಲು ಪಡೆದಿದೆ. ರಷ್ಯಾದ ಪ್ರಮುಖ ನಗರವಾದ ಕಜಾನ್ ಮೇಲೆ ಉಕ್ರೇನ್ ಡ್ರೋನ್ ದಾಳಿಯನ್ನು ಶನಿವಾರ ನಡೆಸಿದೆ.
ಉಕ್ರೇನ್ನಿಂದ ಹಾರಿಬಂದ ಡ್ರೋನ್ಗಳು ದೊಡ್ಡ ದೊಡ್ಡ ವಾಣಿಜ್ಯ ಮತ್ತು ವಸತಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಭಾರೀ ಹಾನಿ ಉಂಟು ಮಾಡಿವೆ. ಇದು 2001 ರಲ್ಲಿ ಅಮೆರಿಕದಲ್ಲಿನ ಡಬ್ಲ್ಯೂಟಿಒ ವಾಣಿಜ್ಯ ಕಟ್ಟಡದ ಮೇಲಿನ 9/11 ದಾಳಿ ಮಾದರಿಯಲ್ಲಿದೆ.
⚡️ Drones attack Kazan high-rise building, residents evacuated pic.twitter.com/p6ZBHoRjqj
— RT (@RT_com) December 21, 2024
ಪ್ರಾಣ ಹಾನಿ ಇಲ್ಲ: ಉಕ್ರೇನ್ನಿಂದ ಸಾವಿರ ಕಿಲೋ ಮೀಟರ್ ದೂರವಿರುವ ಕಜಾನ್ ನಗರದ ಮೇಲೆ ಎಂಟು ಡ್ರೋನ್ಗಳು ದಾಳಿ ಮಾಡಿವೆ. ಆರು ವಸತಿ, ಒಂದು ವಾಣಿಜ್ಯ ಕಟ್ಟಡಗಳಿಗೆ ಇವುಗಳು ಅಪ್ಪಳಿಸಿವೆ. ಒಂದನ್ನು ನದಿ ದಡದಲ್ಲಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಡ್ರೋನ್ಗಳ ಆಕ್ರಮಣದಿಂದಾಗಿ ಕಜಾನ್‌ನ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಶನಿವಾರ ಮತ್ತು ಭಾನುವಾರ ಎಲ್ಲಾ ಬೃಹತ್ ಸಭೆಗಳನ್ನು ರದ್ದು ಮಾಡಲು ಸರ್ಕಾರ ಸೂಚಿಸಿದೆ.
The moment when drones hit high-rise buildings in Kazan after the deployment of the russian electronic surveillance system.
— Jürgen Nauditt 🇩🇪🇺🇦 (@jurgen_nauditt) December 21, 2024
The russians started the war - hence - no pity for the orcs. pic.twitter.com/JbXLTbFslm
ಶುಕ್ರವಾರವಷ್ಟೇ ಉಕ್ರೇನ್ ಅಮೆರಿಕ ನಿರ್ಮಿತ ಕ್ಷಿಪಣಿಗಳನ್ನು ರಷ್ಯಾದ ಕುರ್ಸ್ಕ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಒಂದು ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ, ವಿಮಾನ ಆಕಾರದ ಡ್ರೋನ್ ದಾಳಿಗಳನ್ನು ನಡೆಸಿದೆ.
ದಾಳಿ ವಿಡಿಯೋ ವೈರಲ್: ಇನ್ನೂ, ಉಕ್ರೇನ್ ನಡೆಸಿದ ವಿಮಾನಗಳ ಮಾದರಿಯಲ್ಲಿ ಡ್ರೋನ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಡ್ರೋನ್ಗಳು ದೊಡ್ಡದಾದ ಬಹುಮಹಡಿ ಕಟ್ಟಡಗಳಿಗೆ ರಭಸವಾಗಿ ಬಂದು ಡಿಕ್ಕಿ ಹೊಡೆದು ಸ್ಫೋಟಗೊಂಡದ್ದನ್ನು ಕಾಣಬಹುದು. ದಾಳಿಯಲ್ಲಿ ಕಟ್ಟಡಗಳು ತೀವ್ರ ಹಾನಿಗೊಂಡಿವೆ. ತಕ್ಷಣವೇ ಅಧಿಕಾರಿಗಳು ಕಟ್ಟಡಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಇತ್ತ, ಉಕ್ರೇನ್ ಮೇಲೂ ರಷ್ಯಾ ಡ್ರೋನ್ ದಾಳಿ ನಡೆಸಿದೆ. 113 ಡ್ರೋನ್ಗಳು ಹಾರಿಬಂದಿವೆ. ಇದರಲ್ಲಿ 57 ಹೊಡೆದುರುಳಿಸಲಾಗಿದೆ. ಉಳಿದ 56 ತಾವಾಗಿಯೇ ನಾಪತ್ತೆಯಾಗಿವೆ ಅಥವಾ ಎಲ್ಲಾದರೂ ಸ್ಫೋಟಗೊಂಡಿವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾರ್ಕಿವ್ ಪ್ರದೇಶದ ಗವರ್ನರ್ ಒಲೆಹ್ ಸಿನಿಹುಬೊವ್ ನೀಡಿದ ಮಾಹಿತಿಯಂತೆ, ಖಾರ್ಕಿವ್ ಮೇಲೆ ಶುಕ್ರವಾರ ರಾತ್ರಿ ನಡೆದ ಡ್ರೋನ್ ದಾಳಿಯಲ್ಲಿ 8 ಜನರು ಗಾಯಗೊಂಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಭಾರತ ವಿರೋಧಿ ಕೆನಡಾ ಪ್ರಧಾನಿ ಟ್ರುಡೊಗೆ ಶಾಕ್: ಮಿತ್ರ ಪಕ್ಷದಿಂದಲೇ ಅವಿಶ್ವಾಸ ನಿರ್ಣಯಕ್ಕೆ ಕರೆ