ಕರ್ನಾಟಕ

karnataka

ETV Bharat / lifestyle

2024ರಲ್ಲಿ ವಿವಾಹವಾಗಬೇಕೆಂಬ ಇಚ್ಛೆ ಹೊಂದಿದ್ದೀರಾ?: ಇಲ್ಲಿವೆ ಅತ್ಯಂತ ಮಂಗಳಕರ ಶುಭ ಮುಹೂರ್ತಗಳು! - VIVAH MUHURAT 2024

2024ರ ಕೊನೆಯಲ್ಲಿ ನೀವು ಮದುವೆಯಾಗುವ ಆಸೆ ಹೊಂದಿದ್ದೀರಾ? ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹಲವು ಮಂಗಳಕರ ದಿನಗಳಿದ್ದು, ಈ ದಿನದಂದು ಮದುವೆಯಾದರೆ ದಂಪತಿಯ ಬಾಳಲ್ಲಿ ಯಾವಾಗಲೂ ಸುಖ ನೆಲೆಸಿರುತ್ತದೆ ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ.

Vivah Muhurat 2024 Auspicious Wedding Dates
ಸಾಂದರ್ಭಿಕ ಚಿತ್ರ (Freepik)

By ETV Bharat Lifestyle Team

Published : Nov 22, 2024, 6:49 PM IST

ಹಿಂದೂ ಧರ್ಮದಲ್ಲಿ ಶುಭ ಕಾರ್ಯಗಳ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಪೂಜೆ, ಉಪನಯನ, ನಿಶ್ಚಿತಾರ್ಥ, ಮದುವೆ ಇತ್ಯಾದಿಗಳು ಶುಭ ಮುಹೂರ್ತವಿಲ್ಲದೇ ನಡೆಯುವುದೇ ಇಲ್ಲ. ವಿಶೇಷವಾಗಿ ಮದುವೆಯಲ್ಲಿ ಶುಭ ಮುಹೂರ್ತ ತಪ್ಪದೇ ನೋಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡಿದ ಮದುವೆ ಎಲ್ಲ ಏಳು ಬೀಳುಗಳ ನಡುವೆಯೂ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಹಿಂದೂ ಕ್ಯಾಲೆಂಡರ್ ಪ್ರಕಾರ, ಒಳ್ಳೆಯ ದಿನವನ್ನು ನೋಡಿಯೇ ಮದುವೆಗೆ ಮುಹೂರ್ತವನ್ನು ಫಿಕ್ಸ್​ ಮಾಡುವುದುಂಟು.

ವಿವಾಹ ಮುಹೂರ್ತ ಲೆಕ್ಕಾಚಾರ: ವರ್ಷದ ಕೊನೆಯ ತಿಂಗಳುಗಳು ಶಾಂತತೆಗೆ ಹೆಚ್ಚು ಪ್ರಶಸ್ತ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳಕರ ಕಾರ್ಯಕ್ಕೆ ಒಳ್ಳೆಯ ಮಾಸಗಳು ಎಂಬ ನಂಬಿಕೆ ಉಂಟು. ಹಿಂದೂ ಸಂಪ್ರದಾಯದ ಪ್ರಕಾರ ಪಂಡಿತರು ಮತ್ತು ಜ್ಯೋತಿಷಿಗಳು ವಿವಾಹವಾಗುವ ಜೋಡಿಗಳ ಜನುಮದಿನದ ಕುಂಡಲಿ ಮತ್ತು ಜಾತಕ ಆಧಾರದ ಮೇಲೆ ಶುಭ ಮುಹೂರ್ತದ ಲೆಕ್ಕಾಚಾರ ಮಾಡುತ್ತಾರೆ. ನಕ್ಷತ್ರ, ತಿಥಿ, ರಾಶಿ, ಶುಭ, ಅಶುಭ ಈ ಎಲ್ಲ ಅಂಶಗಳನ್ನು ಪರಿಗಣಿಸಲಾಗುತ್ತದೆ. ನೀವು ಈ ವರ್ಷ (2024ರಲ್ಲಿ) ವಿವಾಹವಾಗಲು ಬಯಸಿದ್ದಲ್ಲಿ, ಹಿಂದೂ ಪಂಚಾಂಗದ ಪ್ರಕಾರ ನೀಡಲಾದ ಈ ಕೆಳಗಿನ ಯಾವುದಾದರೊಂದು ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತೇಕೆ ತಡ? ನಿಮ್ಮ ಶುಭ-ವಿವಾಹಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ, ಅದಕ್ಕೊಂದು ಶುಭ ದಿನವನ್ನು ಪಕ್ಕಾ ಮಾಡಿಕೊಳ್ಳಿ.

ನವೆಂಬರ್ ತಿಂಗಳ ಶುಭದಿನ:ನವೆಂಬರ್ ತಿಂಗಳು ಮದುವೆಗೆ ಒಳ್ಳೆಯದು. ಈ ದಿನದಂದು ನೀವು ಮದುವೆಗೆ ಪ್ಲಾನ್​ ಮಾಡಿಕೊಳ್ಳಬಹುದು.

1. ನವೆಂಬರ್ 25, 2024 (ಸೋಮವಾರ)

  • ತಿಥಿ: ಪಂಚಮಿ
  • ನಕ್ಷತ್ರ: ಉತ್ತರ ಆಷಾಢ

2. ನವೆಂಬರ್ 30, 2024 (ಶನಿವಾರ)

  • ತಿಥಿ: ದಶಮಿ
  • ನಕ್ಷತ್ರ: ಚಿತ್ರ

ಡಿಸೆಂಬರ್ ತಿಂಗಳ ಶುಭದಿನ: ಡಿಸೆಂಬರ್ ಮಾಸ ಕೂಡ ಮದುವೆಗೆ ಹೇಳಿ ಮಾಡಿಸಿದ ತಿಂಗಳು. ಯಾವ ದಿನ ಮದುವೆಗೆ ಸೂಕ್ತ ಎಂಬುದನ್ನು ಇಲ್ಲಿ ಗಮನಿಸಬಹುದು.

3. ಡಿಸೆಂಬರ್ 1, 2024 (ಭಾನುವಾರ)

  • ತಿಥಿ: ಏಕಾದಶಿ
  • ನಕ್ಷತ್ರ: ಸ್ವಾತಿ

4. ಡಿಸೆಂಬರ್ 4, 2024 (ಬುಧವಾರ)

  • ತಿಥಿ: ಪೂರ್ಣಿಮಾ
  • ನಕ್ಷತ್ರ: ಮೃಗಶಿರ

5. ಡಿಸೆಂಬರ್ 7, 2024 (ಶನಿವಾರ)

  • ತಿಥಿ: ದ್ವಿತೀಯ
  • ನಕ್ಷತ್ರ: ಪುನರ್ವಸು

6. ಡಿಸೆಂಬರ್ 9, 2024 (ಸೋಮವಾರ): ಮದುವೆಗಳಿಗೆ ಅತ್ಯಂತ ಪವಿತ್ರವಾದ ದಿನಗಳಲ್ಲಿ ಒಂದಾಗಿದೆ.

  • ತಿಥಿ: ಚತುರ್ಥಿ
  • ನಕ್ಷತ್ರ: ಪುಷ್ಯ

7.ಡಿಸೆಂಬರ್ 15, 2024 (ಭಾನುವಾರ)

  • ತಿಥಿ: ದಶಮಿ
  • ನಕ್ಷತ್ರ: ಉತ್ತರಾಭಾದ್ರ

ವಿವಾಹ ಮುಹೂರ್ತಕ್ಕೆ ಕೆಲವು ಸಲಹೆಗಳು:

ಬೇಗ ಜ್ಯೋತಿಷಿಯನ್ನು ಸಂಪರ್ಕಿಸಿ:ಮಂಗಳಕರ ದಿನಾಂಕಗಳನ್ನು ಖಚಿತಪಡಿಸಿಕೊಳ್ಳಲು ನಿಮ್ಮ ನಿಮ್ಮ ಸಂಗಾತಿಯ ಜಾತಕ ಹಾಗೂ ಕುಂಡಲಿಯೊಂದಿಗೆ ಕುಟುಂಬದ ಪುರೋಹಿತರು ಅಥವಾ ಜ್ಯೋತಿಷಿಗಳನ್ನು ಬೇಗ ಸಂಪರ್ಕಿಸಿ. ಮತ್ತು ಅವರೊಂದಿಗೆ ಮಾತನಾಡಿ ಯಾವ ದಿನ ಒಳ್ಳೆಯದೆಂದು ಪರಿಶೀಲಿಸಿಕೊಳ್ಳಿ.

ಮದುವೆ ಸ್ಥಳವನ್ನು ಮುಂಚಿತವಾಗಿ ಬುಕ್​ ಮಾಡಿ: ಮದುವೆ ದಿನ ಗೊತ್ತಾಗುತ್ತಿದ್ದಂತೆ, ಎಲ್ಲಿ ಮದುವೆಯಾದರೆ ಸೂಕ್ತ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗಾಗಿ ಚೌಟ್ರಿ, ಕಲ್ಯಾಣ ಮಂಟಪ ಸೇರಿದಂತೆ ಮದುವೆಯ ಸ್ಥಳ, ಅಡುಗೆ ಮಾಡುವವರು ಮತ್ತು ಛಾಯಾಗ್ರಾಹಕರನ್ನು ಮೊದಲು ಬುಕ್ ಮಾಡಿಕೊಳ್ಳಿ. ಅಲ್ಲದೇ ಅವರ ಆಗಮವನ್ನು ಖಚಿತಪಡಿಸಿಕೊಳ್ಳಿ.

ಗಮನಿಸಿ: ಇಲ್ಲಿ ನೀಡಲಾದ ಎಲ್ಲ ಮಾಹಿತಿಗಳು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿರುತ್ತವೆ. ವಿವಾಹದ ದಿನವನ್ನು ನಿರ್ಧರಿಸುವ ಮುನ್ನ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ, ಮುಹೂರ್ತ ಇಟ್ಟುಕೊಳ್ಳಿ. ಯಾಕೆಂದರೆ ಕೆಲವೊಂದು ಬಾರಿ ಪ್ರದೇಶಗಳಿಗೆ ಅನುಗುಣವಾಗಿ ಮುಹೂರ್ತಗಳು ಬದಲಾಗುವ ಸಾಧ್ಯತೆಗಳಿರುತ್ತದೆ. ಇವೆಲ್ಲ ನಿಮ್ಮ ನಂಬಿಕೆಗಳಿಗೆ ಬಿಟ್ಟದ್ದು.

ಇದನ್ನೂ ಓದಿ:ಮತ್ತೆ ಅಂಬರ ಏರಿದ ಬಂಗಾರ: ಮದುವೆ ಸಂಭ್ರಮದ ನಡುವೆ ತೊಲ ಚಿನ್ನಕ್ಕೆ 500 ರೂ.,ಕೆಜಿ ಬೆಳ್ಳಿಗೆ 800ರೂ ಹೆಚ್ಚಳ

ABOUT THE AUTHOR

...view details