ಕರ್ನಾಟಕ

karnataka

ETV Bharat / lifestyle

ತ್ವಚೆಯ ನೈಸರ್ಗಿಕ ಸೌಂದರ್ಯಕ್ಕೆ ವೀಗನ್​ ಸ್ಕಿನ್​ ಕೇರ್​ ಪದ್ಧತಿ: ಕೇವಲ ನಾಲ್ಕೇ ಹಂತಗಳಲ್ಲಿ ತಿಳಿಯಿರಿ

ವೀಗನ್ ಸ್ಕಿನ್​ ಕೇರ್​ ಪದ್ಧತಿ ಪ್ರಾಣಿ ಮೂಲದ ವಸ್ತುಗಳಿಂದ ಮುಕ್ತವಾಗಿದ್ದು, ಸಸ್ಯ ಆಧಾರಿತ ಪದಾರ್ಥಗಳ ಬಗ್ಗೆ ಕೇಂದ್ರೀಕೃತವಾಗಿದೆ. ಈ ಸಸ್ಯಮೂಲ ಸೌಂದರ್ಯವರ್ಧಕಗಳು ಭಾರತೀಯ ತ್ವಚೆಗೆ ಸಂಪೂರ್ಣ ಸೂಕ್ತವಾಗಿದೆ ಎನ್ನುತ್ತಾರೆ ಸುಪ್ರಿಯಾ ಜಿಂದಾಲ್.

Kriti Sanon
ಬಾಲಿವುಡ್‌ ನಟಿ ಕೃತಿ ಸನೋನ್​ (Getty Images)

By ETV Bharat Lifestyle Team

Published : Nov 24, 2024, 10:41 AM IST

ಆಹಾರ ಪದ್ಧತಿಯಲ್ಲಿ ಮಾತ್ರವಲ್ಲ, ಬ್ಯೂಟಿಕೇರ್​ ಕ್ಷೇತ್ರದಲ್ಲೂ ವೀಗನ್​ ಪದ್ಧತಿ ಕಾಲಿಟ್ಟಿದೆ. ವೀಗನ್​ ಸ್ಕಿನ್​ಕೇರ್​ ಎನ್ನುವುದು ಟ್ರೆಂಡ್​ ಆಗಿ ಮಾತ್ರವಲ್ಲ, ಇದು ಸೌಂದರ್ಯ ವೃದ್ಧಿ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ಚಿಂತನಾಶೀಲ ವಿಧಾನವಾಗಿಯೂ ಮಾರ್ಪಟ್ಟಿದೆ. ನೀವು ಈ ವೀಗನ್​ ಸ್ಕಿನ್​ ಕೇರ್​ ವಿಧಾನವನ್ನು ಆಯ್ಕೆ ಮಾಡಿಕೊಂಡಲ್ಲಿ, ಪ್ರಾಣಿ ಮೂಲದ ಪದಾರ್ಥಗಳಿಂದ ಮುಕ್ತವಾದ ಹಾಗೂ ಕ್ರೌರ್ಯ- ಮುಕ್ತ ಉತ್ಪನ್ನಗಳಿಂದ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ನೀವು ಈಗಾಗಲೇ ವೀಗನ್​ ಪದ್ಧತಿಯನ್ನು ಅನುಸರಿಸುತ್ತಿದ್ದರೆ ಅಥವಾ ಇನ್ನಷ್ಟೇ ವೀಗನ್​ ಪದ್ಧತಿಯನ್ನು ಅಳವಡಿಸಿಕೊಂಡರೂ ಸರಿ, ಸಸ್ಯ ಆಧಾರಿತ ಸ್ಕಿನ್​ ಕೇರ್​ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮಾತ್ರವಲ್ಲ ಈ ಮೂಲಕ ನೀವು ಈ ಭೂಮಿ ಹಾಗೂ ಅದರ ಮೇಲಿನ ಜೀವರಾಶಿಗಳ ಮೇಲೆ ದಯೆ ತೋರಿಸಿದಂತಾಗುತ್ತದೆ. ನಿಮ್ಮ ಸೌಂದರ್ಯ ಕಾಪಾಡಿಕೊಳ್ಳುವ ವಿಧಾನಗಳನ್ನು ರಿಫ್ರೆಶ್​ ಮಾಡಲು ಸಿದ್ಧರಿದ್ದೀರಾ? ಹಾಗಾದರೆ, ಬ್ರಿಲೇರ್​ನ ಸುಪ್ರಿಯಾ ಜಿಂದಾಲ್​ ಅವರು ವೀಗನ್​ ಸ್ಕಿನ್​ಕೇರ್​ ಬಗ್ಗೆ ವಿವರಿಸಿರುವ ನಾಲ್ಕು ಅಗತ್ಯ ಹಂತಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ (Freepik)

ವೀಗನ್ ಸ್ಕಿನ್​ ಕೇರ್​ ಪದ್ಧತಿ, ಪ್ರಾಣಿ ಮೂಲದ ವಸ್ತುಗಳಿಂದ ಮುಕ್ತವಾಗಿದ್ದು, ಸಸ್ಯ ಆಧಾರಿತ ಪದಾರ್ಥಗಳ ಬಗ್ಗೆ ಕೇಂದ್ರೀಕೃತವಾಗಿದೆ. ಈ ಸಸ್ಯಮೂಲ ಸೌಂದರ್ಯವರ್ಧಕಗಳು ಭಾರತೀಯ ತ್ವಚೆಗೆ ಸಂಪೂರ್ಣ ಸೂಕ್ತವಾಗಿದೆ ಎನ್ನುತ್ತಾರೆ ಸುಪ್ರಿಯಾ ಜಿಂದಾಲ್.

ಮೊದಲ ಹಂತ: ನಿಮ್ಮ ಸ್ಕಿನ್​ ಕೇರ್​ ಅನ್ನು ನಯವಾದ ಹೈಡ್ರೇಟಿಂಗ್​ ಕ್ಲೆನ್ಸರ್​ನಿಂದ ಫೇಸ್​ ಸ್ಕ್ರಬ್​ ಮಾಡುವ ಮೂಲಕ ಪ್ರಾರಂಭಿಸಿ. ಗುಲಾಬಿ ಅಥವಾ ತೆಂಗಿನಕಾಯಿ ಆಧಾರಿತ ಹೈಡ್ರೇಟಿಂಗ್​ ಕ್ಲೆನ್ಸರ್​ಗಳು ಉತ್ತಮವಾಗಿರುತ್ತವೆ. ಮುಖ ಸ್ಕ್ರಬ್​ ಮಾಡಲು ದೊಡ್ಡ ಕಣಗಳಿರುವ ಸ್ಕ್ರಬ್​ ಬದಲು ಸಣ್ಣ ಕಣಗಳಿರುವ ಹಾಗೂ ನಯವಾದ ಸ್ಕ್ರಬ್​ ಆಯ್ಕೆ ಮಾಡಿಕೊಳ್ಳಿ.

ಸಾಂದರ್ಭಿಕ ಚಿತ್ರ (Freepik)

ಎರಡನೇ ಹಂತ: ಪೋಷಣೆಯುಕ್ತ ಸಿರಮ್​ ಅನ್ನು ಹಚ್ಚುವ ಮೂಲಕ ತ್ವಚೆಯ ಮೇಲಿನ ಲಿಪಿಡ್​ ತಡೆಗೋಡೆಯನ್ನು ರಕ್ಷಿಸಿಕೊಳ್ಳಬಹುದು. ಸಿರಮ್​ನಲ್ಲಿರುವ ವಿಟಮಿನ್​ ಸಿ ಶಕ್ತಿಯುತ ತ್ವಚೆ ಹಾಗೂ ತ್ವಚೆಯ ಹೈಡ್ರೇಶನ್​ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಅದರಲ್ಲಿರುವ ಪ್ರೋಬಯಾಟಿಕ್​ಗಳು ಚರ್ಮದ ನೈಸರ್ಗಿಕ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ (Freepik)

ಮೂರನೇ ಹಂತ: ನಿಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ಮಾಯಿಶ್ಚರೈಸರ್​ ಅನ್ನು ಆಯ್ಕೆ ಮಾಡಿಕೊಳ್ಳಿ. ಮಾಯಿಶ್ಚರೈಸರ್​ನಲ್ಲಿರುವ ಹೈಲುರಾನಿಕ್ ಆಮ್ಲ ಒಣ ಚರ್ಮಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಾಂಬಿನೇಷನ್​ ಚರ್ಮಕ್ಕೆ ವಿಟಮಿನ್​ ಸಿ ಸೂಕ್ತ. ಮಾಯಿಶ್ಚರೈಸರ್​ಗಳ ಪರಿಣಾಮಕಾರಿಕತ್ವವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಬಾರಿ ಉತ್ಪನ್ನದ, ಬಳಸಿದ ವಸ್ತುಗಳ ವಿವರಗಳಿರುವ ಲೇಬಲ್​ ಅನ್ನು ಪರಿಶೀಲಿಸಲು ಮರೆಯದಿರಿ.

ಸಾಂದರ್ಭಿಕ ಚಿತ್ರ (Freepik)

ನಾಲ್ಕನೇ ಹಂತ: ತ್ವಚೆಗೆ ಸನ್​ಸ್ಕ್ರೀನ್​ ಹಚ್ಚುವುದು ಅತ್ಯಗತ್ಯ. ಮುಖ್ಯವಾಗಿ ಝಿಂಕ್​ ಆಕ್ಸೈಡ್​ ಇರುವಂತಹ ಖನಿಜ ಆಧಾರಿತ ಸನ್​ಸ್ಕ್ರೀನ್​ ಅನ್ನು ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ಅಂತಹವುಗಳು ತ್ವಚೆಯ ಮೇಲೆ ಉಳಿಯುತ್ತದೆ. ಮತ್ತು ತ್ವಚೆಯ ರಕ್ತಪ್ರವಾಹವಾಗುವ ಜಾಗಕ್ಕೆ ಹೀರಿಕೊಳ್ಳುವುದಿಲ್ಲ.

ಇದನ್ನೂ ಓದಿ:ಈ ರೂಲ್ಸ್ ಪ್ರಕಾರ ವಾಕಿಂಗ್ ಮಾಡಿದರೆ ಹೃದಯದ ಸಮಸ್ಯೆಗಳು ದೂರ: ಸಂಶೋಧನೆ

ABOUT THE AUTHOR

...view details