ಕರ್ನಾಟಕ

karnataka

ETV Bharat / lifestyle

ಯಾವಾಗಲಾದರೂ 'ಈರುಳ್ಳಿ ಚಪಾತಿ' ಸೇವಿಸಿದ್ದೀರಾ?: ಉಪಹಾರ & ಊಟಕ್ಕೆ ಸೂಪರ್ ಆಯ್ಕೆ! - HOW TO MAKE ONION CHAPATI

How to Make Onion Chapati at Home: ಪದೇ ಪದೇ ಸಾಮಾನ್ಯ ಚಪಾತಿ ತಿಂದು ಬೇಸರವಾಗಿದೆಯೇ? ಹಾಗಾದ್ರೆ ಒಮ್ಮೆಯಾದರೂ ಈರುಳ್ಳಿ ಚಪಾತಿಯನ್ನು ಟ್ರೈ ಮಾಡಿ ನೋಡಿ. ರುಚಿಯೂ ಕೂಡ ಅಷ್ಟೇ ಸೂಪರ್​ ಆಗಿರುತ್ತದೆ.

CHAPATHI RECIPES  HOW TO MAKE ONION CHAPATI AT HOME  ONION CHAPATI MAKING PROCESS  PERFECT TIPS FOR ONION CHAPATI
ಈರುಳ್ಳಿ ಚಪಾತಿ (ETV Bharat)

By ETV Bharat Lifestyle Team

Published : 8 hours ago

How to Make Onion Chapati at Home:ಬಹುತೇಕರು ಚಪಾತಿ ಸೇವಿಸಲು ತುಂಬಾ ಇಷ್ಟಪಡುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು, ಬಿಪಿ, ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರು ಕೂಡ ದಿನಕ್ಕೆ ಒಮ್ಮೆಯಾದರೂ ಈ ಚಪಾತಿ ಸೇವಿಸುತ್ತಾರೆ. ಇದರ ಜೊತೆಗೆ ಅನೇಕ ತಾಯಂದಿರು ತಮ್ಮ ಮಕ್ಕಳ ಲಂಚ್​ ಬಾಕ್ಸ್​ಗೆ ಚಪಾತಿಗಳನ್ನೇ ಕಟ್ಟುತ್ತಾರೆ. ಹೀಗಾಗಿ ಪ್ರತಿನಿತ್ಯ ಚಪಾತಿ ತಿನ್ನಲು ಬೇಸರವಾಗುತ್ತದೆ. ನೀವು ಚಪಾತಿಯ ಬದಲಿಗೆ ಬೇರೆ ಏನಾದರೂ ತಿನ್ನಲು ಬಯಸುತ್ತೀರಿ. ಅಂತಹವರು ಈರುಳ್ಳಿ ಚಪಾತಿಯನ್ನು ಟ್ರೈ ಮಾಡಬಹುದು. ಈ ಚಪಾತಿ ತುಂಬಾ ಸಾಫ್ಟ್​ ಹಾಗೂ ಹೆಚ್ಚು ರುಚಿಕರವಾಗಿರುತ್ತದೆ. ಇವುಗಳ ರುಚಿ ಸಾಮಾನ್ಯ ಚಪಾತಿಗಿಂತ ಟೇಸ್ಟಿ ಆಗಿರುತ್ತದೆ. ಮುಖ್ಯವಾಗಿ ಚಪಾತಿಯೊಂದಿಗೆ ನೆಂಚಿಕೊಳ್ಳಲು ಪಲ್ಯ ಅಗತ್ಯವಿಲ್ಲ. ಈ ರೆಸಿಪಿ ತಯಾರಿಸಲು ಬೇಕಾಗುವ ಪದಾರ್ಥಗಳೇನು? ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ..

ಈರುಳ್ಳಿ ಚಪಾತಿಗೆ ಬೇಕಾಗುವ ಪದಾರ್ಥಗಳೇನು?

  • ಗೋಧಿ ಹಿಟ್ಟು - 2 ಕಪ್
  • ಹಸಿಮೆಣಸಿನಕಾಯಿ - 2
  • ಈರುಳ್ಳಿ - 1
  • ಈರುಳ್ಳಿ ಸೊಪ್ಪು (Scallion) - ಅರ್ಧ ಕಪ್
  • ಉಪ್ಪು - ರುಚಿಗೆ ತಕ್ಕಷ್ಟು
  • ಗರಂ ಮಸಾಲ - 1 ಟೀಸ್ಪೂನ್
  • ಖಾರದ ಪುಡಿ - 1 ಟೀಸ್ಪೂನ್

ಈರುಳ್ಳಿ ಚಪಾತಿಗೆ ತಯಾರಿಸುವ ವಿಧಾನ:

  • ಮೊದಲು ಈರುಳ್ಳಿ ಹಾಗೂ ಈರುಳ್ಳಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ.
  • ಈಗ ಒಂದು ಬೌಲ್ ತೆಗೆದುಕೊಂಡು ಅದರೊಳಗೆ ಗೋಧಿ ಹಿಟ್ಟು, ಸಣ್ಣಗೆ ಕಟ್​ ಮಾಡಿದ ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ ಹಾಕಿ.
  • ಅದರ ನಂತರ ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ ಹಾಗೂ ಹಸಿಮೆಣಸಿನಕಾಯಿ ಹಾಕಿ.
  • ಬಳಿಕ ಈರುಳ್ಳಿ ಪೀಸ್​ಗಳನ್ನು ಹಿಸುಕಿ ಹಾಗೂ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಸ್ವಲ್ಪ ನೀರನ್ನು ಚಪಾತಿ ಹಿಟ್ಟಿಗೆ ಹಾಕಿ. ಆದರೆ, ಇಲ್ಲಿ ಹಿಟ್ಟನ್ನು ಹೆಚ್ಚು ಸಮಯ ಒತ್ತಿದರೆ ಚಪಾತಿ ಮೃದು ಹಾಗೂ ರುಚಿಯಾಗಿರುತ್ತದೆ.
  • ಹಿಟ್ಟನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಹಾಗೂ 30 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.
  • ಅರ್ಧ ತಾಸಿನ ಬಳಿಕ ಹಿಟ್ಟನ್ನು ಮತ್ತೆ ಮಿಶ್ರಣ ಮಾಡಿ ಹಾಗೂ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
  • ಈಗ ಉಂಡೆಗಳನ್ನು ತೆಗೆದುಕೊಂಡು ಚಪಾತಿ ತಟ್ಟೆಯಲ್ಲಿ ಇಡಬೇಕಾಗುತ್ತದೆ ಮತ್ತು ಒಣ ಹಿಟ್ಟನ್ನು ಸಿಂಪಡಿಸಿ ಹಾಗೂ ಅದನ್ನು ರೌಂಡ್​ ಆಗಿ ಚಪಾತಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
  • ನಂತರ ಒಲೆ ಆನ್ ಮಾಡಿಕೊಳ್ಳಬೇಕು, ಚಪಾತಿಗಳನ್ನು ಒಂದೊಂದಾಗಿ ಬೇಯಿಸಬೇಕಾಗುತ್ತದೆ. ತವೆಯ ಮೇಲೆ ಎರಡೂ ಬದಿಗಳಲ್ಲಿ ಒಂದು ನಿಮಿಷ ಫ್ರೈ ಮಾಡಿ.
  • ಅದರ ನಂತರ ಎರಡೂ ಬದಿಗಳಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕಾಗುತ್ತದೆ. ಬೇಯಿಸಿದ ವಸ್ತುಗಳನ್ನು ಹಾಟ್​ಬಾಕ್ಸ್​ನಲ್ಲಿ ಹಾಕಿ ಇಟ್ಟುಕೊಳ್ಳಬೇಕಾಗುತ್ತದೆ.
  • ಇದೇ ರೀತಿಯಾಗಿ ಎಲ್ಲಾ ಚಪಾತಿಗಳನ್ನು ಬೇಯಿಸಿಕೊಂಡರೆ ಸಾಕು, ತುಂಬಾ ಸಾಫ್ಟ್​ ಆದ ಹಾಗೂ ತುಂಬಾ ರುಚಿಯಾಗಿರುವ ಈರುಳ್ಳಿ ಚಪಾತಿ ರೆಡಿಯಾಗುತ್ತದೆ.
  • ಅವುಗಳನ್ನು ಪ್ರತ್ಯೇಕವಾಗಿ ಹಾಗೆ ಸೇವಿಸಿದರೂ ರುಚಿ ಚೆನ್ನಾಗಿರುತ್ತದೆ. ಕಾಂಬಿನೇಷನ್ ಬೇಕಿದ್ದರೆ ಮೊಸರಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಮಚ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಚಪಾತಿ ಜೊತೆಗೆ ಸೇವಿಸಿದರೆ ಸಖತ್​ ಕಾಂಬಿನೇಷನ್ ಆಗಿರುತ್ತದೆ.
  • ಅಷ್ಟೇ ಅಲ್ಲ, ಹಸಿ ಮೆಣಸಿನಕಾಯಿ ಚಟ್ನಿ ಕೂಡ ಇದರ ಜೊತೆಗೆ ಸೂಪರ್ ಆಗಿರುತ್ತದೆ.

ಇದನ್ನೂ ಓದಿ:ಹಿಟ್ಟು ಸಿದ್ಧಪಡಿಸುವಾಗ ಈ ಪದಾರ್ಥ ಸೇರಿಸಿ ನೋಡಿ: ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುವ ಸೂಪರ್ ಸಾಫ್ಟ್ ಚಪಾತಿ ರೆಡಿ!

ABOUT THE AUTHOR

...view details