Tomato Onion Chutney Recipe: ಬಹುತೇಕರಿಗೆ ರೊಟ್ಟಿ ಚಟ್ನಿ ಎಂದರೆ ಸಾಕು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದಿದ್ದಾಗ, ರೊಟ್ಟಿ ಮತ್ತು ಚಟ್ನಿ ತಿಂದರೆ ಮನಸ್ಸಿಗೆ ತುಂಬಾ ತೃಪ್ತಿಯಾಗುತ್ತದೆ. ಇದರಿಂದ ಹೆಚ್ಚಿನ ಜನರು ತಯಾರಿಸುವ ಖಾದ್ಯಗಳಲ್ಲಿ ಟೊಮೆಟೊ ಚಟ್ನಿ ಮುಂಚೂಣಿಯಲ್ಲಿ ಬರುತ್ತದೆ. ಮನೆಯಲ್ಲಿ ಕೆಲವರು ಯಾವಾಗಲೂ ಒಂದೇ ಅಡುಗೆಗೆ ಅಂಟಿಕೊಳ್ಳುವ ಬದಲು ಹೊಸ ರೆಸಿಪಿಯನ್ನು ಪ್ರಯತ್ನಿಸಿ ನೋಡಿ. ನಿಮಗಾಗಿ ನಾವು 'ಟೊಮೆಟೋ ಈರುಳ್ಳಿ ಚಟ್ನಿ' ರೆಸಿಪಿಯನ್ನು ತಂದಿದ್ದೇವೆ.
ಸಖತ್ ರುಚಿಯ ಚಟ್ನಿಯನ್ನು ಬಿಸಿ ಬಿಸಿಯಾದ ಅನ್ನದ ಜೊತೆಗೆ ತಿಂದರೆ ಅದ್ಭುತವಾಗಿರುತ್ತದೆ. ಈ ಚಟ್ನಿ ಅನ್ನದೊಂದಿಗೆ ಮಾತ್ರವಲ್ಲದೇ ಚಪಾತಿ, ಇಡ್ಲಿ, ದೋಸೆ, ವಡೆ ಸೇರಿದಂತೆ ವಿವಿಧ ಯಾವುದೇ ಉಪಹಾರಗಳೊಂದಿಗೆ ಸಹ ಸೂಪರ್ ರುಚಿಯನ್ನು ನೀಡುತ್ತದೆ. ಹೆಚ್ಚು ತಲೆ ಕೆಡಿಸಿಕೊಳ್ಳದೇ ಸೂಪರ್ ಟೇಸ್ಟಿಯಾದ ಟೊಮೆಟೊ ಈರುಳ್ಳಿ ಚಟ್ನಿ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಟೊಮೆಟೊ ಈರುಳ್ಳಿ ಚಟ್ನಿಗೆ ಅಗತ್ಯವಿರುವ ಪದಾರ್ಥಗಳು:
- ಎಣ್ಣೆ - 5 ಟೀಸ್ಪೂನ್
- ಮೆಂತ್ಯ ಸೊಪ್ಪು - ಕಾಲು ಟೀಸ್ಪೂನ್
- ಒಣಮೆಣಸಿನಕಾಯಿ - 10
- ಸಾಸಿವೆ - ಅರ್ಧ ಟೀಸ್ಪೂನ್
- ಇಂಗು - ಒಂದು ಚಿಟಿಕೆ
- ಕರಿಬೇವು - ಸ್ವಲ್ಪ
- ದೊಡ್ಡ ಗಾತ್ರದ ಟೊಮೆಟೊ - 2
- ದೊಡ್ಡ ಗಾತ್ರದ ಈರುಳ್ಳಿ - 2
- ಅರಿಶಿನ - ಅರ್ಧ ಟೀಸ್ಪೂನ್
- ಉಪ್ಪು - ರುಚಿಗೆ ಬೇಕಾಗುಷ್ಟು
- ಹುಣಸೆಹಣ್ಣು - ಸ್ವಲ್ಪ
ಟೊಮೆಟೊ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ:
- ಮೊದಲು ಹುಣಸೆಹಣ್ಣನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಬೇಕು. ಪಾಕವಿಧಾನಕ್ಕೆ ಬೇಕಾದ ಟೊಮೆಟೊ ಹಾಗೂ ಈರುಳ್ಳಿ ಪೀಸ್ಗಳಾಗಿ ಕತ್ತರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
- ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಎರಡು ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಮೆಂತ್ಯ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
- ಇವೆಲ್ಲಾ ಫ್ರೈ ಆದ ಬಳಿಕ ಒಣಗಿದ ಒಣ ಮೆಣಸಿನಕಾಯಿ, ಸಾಸಿವೆ, ಕರಿಬೇವು ಹಾಗೂ ಇಂಗು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಅವುಗಳನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ.
- ಅದೇ ಪ್ಯಾನ್ನಲ್ಲಿ ಮೂರು ಟೀಸ್ಪೂನ್ ಎಣ್ಣೆ ಬಿಸಿ ಮಾಡಬೇಕಾಗುತ್ತದೆ. ಎಣ್ಣೆ ಬಿಸಿಯಾದ ಬಳಿಕ ಕತ್ತರಿಸಿದ ಈರುಳ್ಳಿ ಹಾಗೂ ಅರಿಶಿನ ಸೇರಿಸಬೇಕಾಗುತ್ತದೆ. ಮಧ್ಯಮ ಉರಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಬೆರೆಸುತ್ತಾ ಬೇಯಿಸಬೇಕಾಗುತ್ತದೆ.
- ಬಳಿಕ ಕತ್ತರಿಸಿದ ಟೊಮೆಟೊ ಪೀಸ್ಗಳು, ಉಪ್ಪು, ಹುಣಸೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಈ ಮಿಶ್ರಣವನ್ನು ಇನ್ನೊಂದು 5 ನಿಮಿಷಗಳ ಕಾಲ ಬೇಯಿಸಿ ಒಲೆ ಆಫ್ ಮಾಡಬೇಕಾಗುತ್ತದೆ.
- ಮೊದಲೇ ಹುರಿದ ಮೆಣಸಿನಕಾಯಿಯನ್ನು ಮಿಕ್ಸರ್ ಜಾರ್ಗೆ ಸೇರಿಸಿ ನುಣ್ಣಗೆ ಪುಡಿಮಾಡಿ.
- ನಂತರ ಬೇಯಿಸಿದ ಟೊಮೆಟೊ ಮತ್ತು ಈರುಳ್ಳಿ ಮಿಶ್ರಣವನ್ನು ಅದರೊಳಗೆ ಸೇರಿಸಿ ಹಾಗೂ ಅದನ್ನು ತುಂಬಾ ರುಬ್ಬಿಕೊಳ್ಳಬೇಕಾಗುತ್ತದೆ. ಆದ್ರೆ, ತುಂಬಾ ನುಣ್ಣಗೆ ರುಬ್ಬಿಕೊಳ್ಳಬಾರದು.
- ಈ ರೀತಿ ರುಬ್ಬಿದ ಬಳಿಕ ಚಟ್ನಿಯನ್ನು ಒಂದು ಬಟ್ಟಲಿಗೆ ತೆಗೆದುಕೊಂಡು ತಟ್ಟೆಗೆ ಬಡಿಸಿ. ಈಗ ರುಚಿಕರವಾದ ಟೊಮೆಟೊ ಈರುಳ್ಳಿ ಚಟ್ನಿ ಸಿದ್ಧವಾಗಿದೆ.
- ನಿಮ್ಮ ಹತ್ತಿರ ರುಬ್ಬುವ ಒಳ್ಳು ಲಭ್ಯವಿಲ್ಲದಿದ್ದರೆ, ಅವುಗಳನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ ಒರಟಾಗಿ ಇರುವಂತೆ ರುಬ್ಬಿದರೆ ಸಾಕು. ಈ ಚಟ್ನಿ ರೊಟ್ಟಿ ಜೊತೆಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.