ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿ ಕ್ರಿಸ್ಪಿಯಾದ 'ಮಸೂರ ಬೇಳೆ ದೋಸೆ'; ರುಚಿಯು ಅದ್ಭುತ! - HOW TO MAKE MASOOR DAL DOSA AT HOME
Masoor Dal Dosa Recipe: ತೂಕ ಇಳಿಸಿಕೊಳ್ಳಲು ಬಯಸುವ ಜನರಿಗಾಗಿ ನಾವು ತುಂಬಾ ವಿಶೇಷವಾದ ರೆಸಿಪಿಯನ್ನು ತಂದ್ದಿದೇವೆ. ಅದುವೇ ಮಸೂರ ಬೇಳೆ ದೋಸೆ. ಇದನ್ನು ತುಂಬಾ ಸರಳವಾಗಿ ಕೆಲವೇ ನಿಮಿಷಗಳಲ್ಲಿ ರೆಡಿ ಮಾಡಬಹುದು.
How to Make Masoor Dal Dosa at Home:ದೋಸೆ ಅಂದ್ರೆ ಸಾಕು ಬಹುತೇಕರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ದೋಸೆ ಗರಿಗರಿಯಾಗಿರುತ್ತೆ, ಜೊತೆಗೆ ತುಂಬಾ ರುಚಿಯು ಇರುತ್ತವೆ. ದೋಸೆಗಳನ್ನು ರೆಡಿ ಮಾಡಬೇಕಾದರೆ, ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಹಿಂದಿನ ದಿನ ನೆನೆಸಿ ಇಟ್ಟು ನಂತರ, ರುಬ್ಬಿಕೊಳ್ಳಬೇಕಾಗುತ್ತದೆ. ಇದೆಲ್ಲವನ್ನು ಮಾಡುವುದು ತುಂಬಾ ದೀರ್ಘವಾದ ಪ್ರಕ್ರಿಯೆಯಾಗಿದೆ. ಹಾಗಾಗಿ ಅನೇಕ ಜನರು ಹೋಟೆಲ್‌ಗಳಿಂದ ಆರ್ಡರ್ ಮಾಡಿ ದೋಸೆಗಳನ್ನು ಸೇವಿಸುತ್ತಾರೆ.
ಇದೆಲ್ಲರ ಅಗತ್ಯವಿಲ್ಲದೆ ತಕ್ಷಣವೇ ದೋಸೆಗಳನ್ನು ಸಿದ್ಧಪಡಿಸಬಹುದು. ನೀವು ಮಸೂರ ಬೇಳೆಯಿಂದ ಸೂಪರ್ ರುಚಿಕರ ದೋಸೆಯನ್ನು ತಯಾರಿಸಬಹುದು. ಮಸೂರ ಬೇಳೆಯಲ್ಲಿ ಹಲವು ವಿಟಮಿನ್ಸ್ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಈ ಬೇಳೆಯಿಂದ ದೋಸೆ ಮಾಡುವುದು ಕೂಡ ಅಷ್ಟೇ ಸರಳವಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ದೋಸೆಗಳಿಗೆ ಅಗತ್ಯವಿರುವ ಸಾಮಗ್ರಿಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಮಸೂರ ಬೇಳೆ ದೋಸೆಗೆ ಬೇಕಾಗಿರುವ ಪದಾರ್ಥಗಳೇನು?:
ಮಸೂರ್ ಬೇಳೆ - 1 ಕಪ್
ಕ್ಯಾರೆಟ್ ಪೀಸ್ಗಳು - ಅರ್ಧ ಕಪ್
ಬೆಳ್ಳುಳ್ಳಿ ಎಸಳು - 4
ಒಣ ಮೆಣಸಿನಕಾಯಿ - 3
ಉಪ್ಪು - ರುಚಿಗೆ ಬೇಕಾಗುಷ್ಟು
ಮಸೂರ ಬೇಳೆ ದೋಸೆ ತಯಾರಿಸುವ ವಿಧಾನ ಹೇಗೆ?:
ಮಸೂರ ಬೇಳೆಯನ್ನು ತೆಗೆದುಕೊಂದು ಒಂದು ಪಾತ್ರೆಯಲ್ಲಿ ಹಾಕಿ ತೊಳೆದಕೊಳ್ಳಬೇಕಾಗುತ್ತದೆ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಬೇಕಾಗುತ್ತದೆ.
ಮಸೂರ ಬೇಳೆಯನ್ನು ನೆನೆಸಿದ ಬಳಿಕ, ಆ ನೀರನ್ನು ಸೋಸಿ ತೆಗೆದುಕೊಂಡು ಬೇಳೆಯನ್ನು ಮಿಕ್ಸರ್ ಜಾರ್‌ಗೆ ಹಾಕಿಕೊಳ್ಳಬೇಕಾಗುತ್ತದೆ.
ಈಗ ಸಣ್ಣಗೆ ಕಟ್ ಮಾಡಿರುವ ಕ್ಯಾರೆಟ್ ಪೀಸ್ಗಳು, ಬೆಳ್ಳುಳ್ಳಿ ಎಸಳುಗಳು, ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕಾಗುತ್ತದೆ. ಮಿಕ್ಸರ್ ಜಾರಿನಲ್ಲಿ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ.
ಒಂದು ಬಟ್ಟಲಿನಲ್ಲಿ ರುಬ್ಬಿದ ಮಿಶ್ರಣ ತೆಗೆದುಕೊಂಡು ಅದರೊಳಗೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಹಿಟ್ಟನ್ನು ಸಿದ್ಧಪಡಿಸಬೇಕಾಗುತ್ತದೆ.
ಇದೀಗ ಸ್ಟೌವ್ ಆನ್ ಮಾಡಿ, ಅದರ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಬೇಕಾಗುತ್ತದೆ. ಬಿಸಿಯಾಗಿರುವ ಪ್ಯಾನ ಮೇಲೆ ದೋಸೆ ಹಿಟ್ಟನ್ನು ತೆಳುವಾಗಿ ಹಾಕಬೇಕಾಗುತ್ತದೆ.
ಒಲೆಯನ್ನು ಕಡಿಮೆ ಉರಿಯಲ್ಲಿ ಇಡಬೇಕಾಗುತ್ತದೆ.
ಬಳಿಕ ಮಧ್ಯ ಉರಿಯಲ್ಲಿ ಇಟ್ಟು ದೋಸೆಯ ಮೇಲೆ ಎಣ್ಣೆ ಅಥವಾ ತುಪ್ಪವನ್ನು ಹಚ್ಚು ಮೂಲಕ ಕೆಂಪಗಾಗುವವರೆಗೆ ಬೇಯಿಸಬೇಕಾಗುತ್ತದೆ.
ಈ ದೋಸೆಯನ್ನು ಇನ್ನೊಂದು ಬದಿಗೆ ತಿರುಗಿಸಬೇಕು, ಕಡಿಮೆ ಉರಿಯಲ್ಲಿ ಒಂದು ನಿಮಿಷ ಬೇಯಿಸಿ, ನಂತರ ಅದನ್ನು ತಟ್ಟೆಯಲ್ಲಿ ತೆಗೆದುಕೊಂಡರೆ ಸಾಕು ಮಸೂರ ಬೇಳೆ ದೋಸೆ ರೆಡಿಯಾಗುತ್ತದೆ. ಇದೇ ರೀತಿ ಉಳಿದ ಎಲ್ಲಾ ಹಿಟ್ಟಿನಿಂದ ದೋಸೆಗಳಿಗೆ ತಯಾರಿಸಿಬೇಕಾಗುತ್ತದೆ.
ಮಸೂರ ಬೇಳೆ ದೋಸೆಯನ್ನು ಅನ್ನ, ಟೊಮೆಟೊ ಹಾಗೂ ತೆಂಗಿನಕಾಯಿ ಚಟ್ನಿಯೊಂದಿಗೆ ಸೇವನೆ ಮಾಡಬಹುದು. ಅವುಗಳ ರುಚಿ ಹೆಚ್ಚಾಗಿರುತ್ತದೆ.