Laughter Yoga Health Benefits:'ನಗು ಯೋಗ'ವು ಹೆಸರೇ ಸೂಚಿಸುವಂತೆ, ಇದು ನಗುವಿನೊಂದಿಗೆ ಮಾಡುವ ಯೋಗದ ವಿಧಾನವಾಗಿದೆ. ಈ ಯೋಗವು ಮೋಜು ಮಾತ್ರವಲ್ಲದೇ ಸಂಪೂರ್ಣ ಆರೋಗ್ಯವನ್ನೂ ನೀಡುತ್ತದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಈ ಯೋಗವನ್ನು ಹೇಗೆ ಮಾಡುವುದು? ಈಗ ಇದರ ಪ್ರಯೋಜನಗಳನ್ನು ತಿಳಿಯೋಣ. 'ನಗು ಯೋಗ' ಎಂದರೆ ಅದರ ಹೆಸರೇ ಸೂಚಿಸುವಂತೆ ನಗುತ್ತಾ ವಿವಿಧ ಯೋಗಾಸನಗಳನ್ನು ಮಾಡುವುದು. ತರಬೇತುದಾರರ ಸೂಚನೆಯಂತೆ ಕೆಲವರು ಗುಂಪಿನಲ್ಲಿ ಅಥವಾ ಕಾರ್ಯಾಗಾರಗಳಲ್ಲಿ/ ತರಬೇತಿ ತರಗತಿಗಳಲ್ಲಿ ಉದ್ದೇಶಪೂರ್ವಕವಾಗಿ ನಗುತ್ತಾ ಕೆಲವು ಆಸನಗಳನ್ನು ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಈ ಹೆಚ್ಚಿನ ಯೋಗ ಅವಧಿಗಳು ಲಯಬದ್ಧವಾದ ಚಪ್ಪಾಳೆ ಮತ್ತು ನಗುವಿನೊಂದಿಗೆ ಪ್ರಾರಂಭವಾಗುತ್ತವೆ. ಅದು 'ಹೋ-ಹೋ' ಅಥವಾ 'ಹ-ಹ-ಹಾ' ಶಬ್ದಗಳನ್ನು ಮಾಡುತ್ತದೆ. ನಂತರ ನಿಧಾನವಾಗಿ ವಿವಿಧ ರೀತಿಯ ಯೋಗಾಸನಗಳು, ಉಸಿರಾಟದ ವ್ಯಾಯಾಮ, ಧ್ಯಾನ ಇತ್ಯಾದಿಗಳನ್ನು ಕಲಿಸುತ್ತಾರೆ. ಆದರೆ, ಇದೊಂದು ಮೋಜಿನ ಹಾಗೂ ನಗುಮೊಗದ ಯೋಗ ಪ್ರಕ್ರಿಯೆಯಾಗಿದ್ದರೂ ಸ್ವಂತವಾಗಿ ಮಾಡುವುದಕ್ಕೂ ಮುನ್ನವೇ, ತಜ್ಞರ ಸಲಹೆ ಮೇರೆಗೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನಲಾಗಿದೆ.
ಒತ್ತಡ ಕಡಿಮೆ ಮಾಡುತ್ತೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ:ನಗು ಯೋಗವು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆದ್ದರಿಂದ, ದೇಹವು ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಬಿಡುಗಡೆ ಮಾಡುತ್ತದೆ. ಈ ಯೋಗದ ಮೂಲಕ ರೋಗನಿರೋಧಕ ವ್ಯವಸ್ಥೆಯ ಕಾರ್ಯವು ಸುಮಾರು 40 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನವು ತೋರಿಸಿದೆ. ನಗು ಯೋಗವು ದೇಹದಲ್ಲಿ ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್‌ಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಹೆಚ್ಚು ಸಂತೋಷದ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಒತ್ತಡ, ಆತಂಕ ಕಡಿಮೆಯಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.
ಈ ಯೋಗದ ವಿಧಾನವು ದೇಹದ ಎಲ್ಲಾ ಅಂಗಗಳಿಗೆ ಉತ್ತಮ ಮಸಾಜ್‌ನಂತೆ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಗು ಯೋಗ ಮಾಡುವಾಗ ನಾವು ಹಲವಾರು ಬಾರಿ ಉಸಿರು ಎಳೆದುಕೊಳ್ಳುತ್ತೇವೆ. ಹೊರಗೆ ಬಿಡುತ್ತೇವೆ ಮತ್ತು ಈ ಪ್ರಕ್ರಿಯೆಯಲ್ಲಿ ದೇಹದ ಎಲ್ಲ ಅಂಗಗಳಿಗೆ ಆಮ್ಲಜನಕದ ಪೂರೈಕೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.