IRCTC Shirdi With Aurangabad Package:2024ರ ವರ್ಷ ಪೂರ್ಣಗೊಳ್ಳಲು ಇನ್ನು ಕೆಲವು ದಿನಗಳು ಬಾಕಿ ಉಳಿದಿವೆ. ಅನೇಕ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ಶಿರಡಿಗೆ ಹೋಗಬೇಕು ಎಂದು ಅಂದುಕೊಂಡವರ ಪಟ್ಟಿಯಲ್ಲಿ ನೀವೂ ಇದ್ದೀರಾ? ಹಾಗಾದರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ನಿಮಗಾಗಿ ಗುಡ್ನ್ಯೂಸ್ ಕೊಟ್ಟಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಶಿರಡಿ ಹಾಗೂ ಇತರ ಸ್ಥಳಗಳನ್ನು ನೋಡಲು ಅದ್ಭುತ ಟೂರ್ ಪ್ಯಾಕೇಜ್ ಇದಾಗಿದೆ.
IRCTC 'ಶಿರಡಿ ವಿತ್ ಔರಂಗಾಬಾದ್' ಎಂಬ ಪ್ಯಾಕೇಜ್ ತಂದಿದೆ. ಈ ಪ್ರವಾಸದ ಒಟ್ಟು ಅವಧಿ 3 ರಾತ್ರಿಗಳು, 4 ಹಗಲುಗಳಾಗಿವೆ. ಈ ಪ್ರವಾಸದಲ್ಲಿ ನೀವು ಸಾಯಿಬಾಬಾ ದರ್ಶನ, ಔರಂಗಾಬಾದ್, ಎಲ್ಲೋರಾ ಗುಹೆಗಳು ಹಾಗೂ ಶನಿಶಿಂಗಣಾಪುರ ನೋಡಬಹುದು. ಪ್ರವಾಸದ ಪ್ಯಾಕೇಜ್ ಘೋಷಿಸಿದ ದಿನಾಂಕಗಳ ಪ್ರಕಾರ, ಈ ಪ್ರವಾಸವು ಪ್ರತಿ ಶುಕ್ರವಾರ ಲಭ್ಯವಿರುತ್ತದೆ.
1ನೇ ದಿನ:ಮೊದಲ ದಿನ ರೈಲು (ಅಜಂತಾ ಎಕ್ಸ್‌ಪ್ರೆಸ್ - 17064) ಕಾಚಿಗುಡ ರೈಲು ನಿಲ್ದಾಣದಿಂದ ಸಂಜೆ 6.40ಕ್ಕೆ ಹೊರಡುತ್ತದೆ. ಪ್ರಯಾಣವು ಇಡೀ ರಾತ್ರಿ ನಡೆಯುತ್ತದೆ.
2ನೇ ದಿನ:ಎರಡನೇ ದಿನ ಬೆಳಗ್ಗೆ 7 ಗಂಟೆಗೆ ನಾಗರ್ಸೋಲ್ ರೈಲು ನಿಲ್ದಾಣಕ್ಕೆ ತಲುಪಲಿದೆ. ಅಲ್ಲಿಂದ ಶಿರಡಿಗೆ ಪ್ರಯಾಣ ಬೆಳಸಲಾಗುತ್ತದೆ . ಅಲ್ಲಿನ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ಉಪಹಾರದ ನಂತರ ಸಾಯಿಬಾಬಾ ಅವರ ದರ್ಶನ ಮಾಡಿಸಲಾಗುತ್ತದೆ. ಮಧ್ಯಾಹ್ನ ಶನಿಶಿಂಗಣಾಪುರಕ್ಕೆ ಪ್ರಯಾಣ ಆರಂಭವಾಗಲಿದೆ. ಅಲ್ಲಿರುವ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಔರಂಗಾಬಾದ್‌ಗೆ ತೆರಳಲಾಗುವುದು. ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ ಹಾಗೂ ರಾತ್ರಿ ಅಲ್ಲಿ ಉಳಿಯಲಾಗುವುದು.