ಒಂದೇ ಟೂರ್ನಲ್ಲಿ ಅಜಂತಾ, ಎಲ್ಲೋರಾ, ಮಿನಿ ತಾಜ್ ಮಹಲ್: IRCTC ಸೂಪರ್ ಪ್ಯಾಕೇಜ್, ದರವೂ ಅಗ್ಗ! - IRCTC MAHARASHTRA TOUR PACKAGE
IRCTC Marvels of Maharashtra Package: IRCTC ನಿಮಗಾಗಿ ಅಗ್ಗದ ದರದಲ್ಲಿ ಸೂಪರ್ ಟೂರ್ ಪ್ಯಾಕೇಜ್ ತಂದಿದೆ. ಪ್ರವಾಸ ಅವಧಿಯು ನಾಲ್ಕು ದಿನಗಳ ಆಗಿದೆ. ಈ ಕುರಿತು ಸಮಗ್ರ ವರದಿ ಇಲ್ಲಿದೆ ಸಂಪೂರ್ಣವಾಗಿ ಓದಿ...
IRCTC Marvels of Maharashtra Package:ಅಜಂತಾ ಮತ್ತು ಎಲ್ಲೋರಾ ಗುಹೆಗಳ ಸೌಂದರ್ಯವು ನಿಮ್ಮನ್ನು ಗಾಢವಾಗಿ ಸೆಳೆಯುತ್ತದೆ. ಈ ಸೌಂದರ್ಯ ವರ್ಣಿಸಲು ಪದಗಳೇ ಸಾಲದು. ಆದ್ದರಿಂದಲೇ ಅನೇಕರು ಆ ವಾಸ್ತುಶಿಲ್ಪದ ಸೊಬಗನ್ನು ಕಣ್ಣಾರೆ ನೋಡಲು ಬಯಸುತ್ತಾರೆ. ನೀವು ಕೂಡ ಈ ಪಟ್ಟಿಯಲ್ಲಿ ಇದ್ದೀರಾ? ಹಾಗಾದರೆ, ನಿಮಗಾಗಿಯೇ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಸೂಪರ್ ಟೂರ್ ಪ್ಯಾಕೇಜ್ ತಂದಿದೆ. ಈಗ ಸಂಪೂರ್ಣ ವಿವರಗಳನ್ನು ನೋಡೋಣ.
IRCTC ಈ ಟೂರ್ ಪ್ಯಾಕೇಜ್ ಅನ್ನು ಮಾರ್ವೆಲ್ಸ್ ಆಫ್ ಮಹಾರಾಷ್ಟ್ರದ ಹೆಸರಿನಲ್ಲಿ ತಂದಿದೆ. ಈ ಪ್ಯಾಕೇಜ್ ಒಟ್ಟು ಅವಧಿಯು 3 ರಾತ್ರಿಗಳು ಮತ್ತು 4 ಹಗಲುಗಳು ಒಳಗೊಂಡಿರುತ್ತದೆ. ಈ ಪ್ರವಾಸವನ್ನು ಹೈದರಾಬಾದ್‌ನಿಂದ ರೈಲು ಪ್ರಯಾಣದ ಮೂಲಕ ಆಯೋಜಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿ ಔರಂಗಾಬಾದ್, ಎಲ್ಲೋರಾ, ಅಜಂತಾ ತಾಣಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ ಪ್ರತಿ ಶುಕ್ರವಾರ ಲಭ್ಯವಿರುತ್ತದೆ.
ಪ್ರಯಾಣದ ವಿವರ ಹೀಗಿದೆ:
1ನೇ ದಿನ: ಮೊದಲ ದಿನ ರೈಲು (ಅಜಂತಾ ಎಕ್ಸ್‌ಪ್ರೆಸ್ - 17064) ಕಾಚಿಗುಡ ರೈಲು ನಿಲ್ದಾಣದಿಂದ ಸಂಜೆ 6.40ಕ್ಕೆ ಹೊರಡಲಿದೆ. ಇಡೀ ಪ್ರಯಾಣವು ಆ ರಾತ್ರಿ ಮುಂದುವರಿಯುತ್ತದೆ.
2ನೇ ದಿನ:ಎರಡನೇ ದಿನ, ಅವರು ಮುಂಜಾನೆ ಔರಂಗಾಬಾದ್ ರೈಲು ನಿಲ್ದಾಣವನ್ನು ತಲುಪಲಾಗುವುದು. ಅಲ್ಲಿಂದ ಮೊದಲೇ ಬುಕ್ ಮಾಡಿದ ಹೋಟೆಲ್ಗೆ ಕರೆದುಕೊಂಡು ಹೋಗುತ್ತಾರೆ. ಬೆಳಗಿನ ಉಪಾಹಾರದ ನಂತರ ಎಲ್ಲೋರಾ ಗುಹೆಗಳಿಗೆ ಭೇಟಿ ನೀಡಲಾಗುವುದು. ಘೃಷ್ಣೇಶ್ವರ ದೇವಸ್ಥಾನಕ್ಕೂ ಭೇಟಿ ಕೊಡಲಾಗುವುದು. ಸಂಜೆ ವೇಳೆಯಲ್ಲಿ ಮಿನಿ ತಾಜ್ ಮಹಲ್‌ಗೆ ಭೇಟಿ ನೀಡಲಾಗುವುದು. ರಾತ್ರಿ ಹೊಟೇಲ್ ತಲುಪಿ ಊಟ ಮಾಡಿ ಅಲ್ಲೇ ತಂಗಲಾಗುವುದು.
3ನೇ ದಿನ:ಮೂರನೇ ದಿನ ತಿಂಡಿ ಮುಗಿಸಿ ಅಜಂತಾ ಹೋಟೆಲ್ನಿಂದ ಚೆಕ್ ಔಟ್ ಮಾಡಿ ಹೊರಡಲಾಗುವುದು. ಅಲ್ಲಿಗೆ ಅಜಂತಾ ಗುಹೆಗಳಿಗೆ ಭೇಟಿ ಕೊಡಲಾಗುವುದು. ಸಂಜೆ ಸಮಯದಲ್ಲಿ ಔರಂಗಾಬಾದ್‌ಗೆ ಹಿಂತಿರುಗಿ ಅಲ್ಲಿಂದ ರೈಲು ನಿಲ್ದಾಣ ತಲುಪಲಾಗುವುದು. ರಾತ್ರಿ 10:45ಕ್ಕೆ ಹೈದರಾಬಾದ್‌ಗೆ ಹಿಂದಿರುಗುವ ಪ್ರಯಾಣ (ಟ್ರೈನ್ ಸಂಖ್ಯೆ 17063) ಪ್ರಾರಂಭವಾಗುತ್ತದೆ. ಆ ರಾತ್ರಿ ಇಡೀ ಪ್ರಯಾಣ ಸಾಗುತ್ತದೆ.
4ನೇ ದಿನ:ನಾಲ್ಕನೇ ದಿನ, ಪ್ರವಾಸವು ಕಾಚಿಗುಡಾ ರೈಲು ನಿಲ್ದಾಣ ತಲುಪುವ ಮೂಲಕ ಬೆಳಗ್ಗೆ 10 ಗಂಟೆಗೆ ಕೊನೆಗೊಳ್ಳುತ್ತದೆ.
ಪ್ರವಾಸ ದರಗಳ ಮಾಹಿತಿ:
1 ರಿಂದ 3 ಪ್ರಯಾಣಿಕರಿಗೆ..
1 ಕಂಪರ್ಟ್ ಸೀಟ್ (ಒಬ್ಬ ಪ್ರಯಾಣಿಕರಿಗೆ)- ₹23,120
ಡಬಲ್ ಸೀಟುಗಳ ಹಂಚಿಕೆ (ಒಬ್ಬ ಪ್ರಯಾಣಿಕರಿಗೆ)- ₹12,760
ಮೂರು ಸೀಟುಗಳ ಹಂಚಿಕೆ- ₹10,140 ಎಂದು ನಿಗದಿಪಡಿಸಲಾಗಿದೆ.
ಹಾಸಿಗೆ ಇರುವ 5 ರಿಂದ 11 ವರ್ಷದ ಮಕ್ಕಳಿಗೆ ₹8,700
ಹಾಸಿಗೆ ಇಲ್ಲದೇ ಹೋದರೆ- ₹6,950 ಪಾವತಿಸಬೇಕಾಗುತ್ತದೆ.
ಸ್ಟ್ಯಾಂಡರ್ಡ್‌ನಲ್ಲಿ ಒಂದೇ ಹಂಚಿಕೆಗೆ (ಒಬ್ಬ ಪ್ರಯಾಣಿಕರಿಗೆ) - ₹21,630
ಡಬಲ್ ಹಂಚಿಕೆಗೆ (ಒಬ್ಬ ಪ್ರಯಾಣಿಕರಿಗೆ)- 11,260
ಮೂರು ಸೀಟುಗಳ ಹಂಚಿಕೆಗೆ (ಒಬ್ಬ ಪ್ರಯಾಣಿಕರಿಗೆ) 8,640 ಎಂದು ಪಾವತಿಸಬೇಕಾಗುತ್ತದೆ.
ಹಾಸಿಗೆ ಇರುವ 5 ರಿಂದ 11 ವರ್ಷದ ಮಕ್ಕಳಿಗೆ ₹7,250
ವಿತ್ ಔಟ್ ಬೆಡ್ ಆದರೆ- ₹5,460
ಗ್ರೂಪ್ ಬುಕ್ಕಿಂಗ್‌ನಲ್ಲಿ ಸ್ವಲ್ಪ ಹೆಚ್ಚು ಕಡಿತ ಇರುತ್ತದೆ.
ಪ್ಯಾಕೇಜ್ ಏನೆಲ್ಲಾ ಒಳಗೊಂಡಿರುತ್ತೆ:
ರೈಲು ಟಿಕೆಟ್‌ಗಳು (ಸ್ಟ್ಯಾಂಡರ್ಡ್, 3AC)
ಪ್ರಯಾಣಿಕರಿಗೆ ಎಸಿ ವಾಹನ ಸೌಲಭ್ಯ
ಬ್ರೇಕ್ಫಾಸ್ಟ್ ಮತ್ತು ಡಿನ್ನರ್ ಅನ್ನು ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.
ಪ್ರಯಾಣ ವಿಮೆ ಒದಗಿಸಲಾಗುವುದು.
ಪ್ರಸ್ತುತ ಈ ಪ್ಯಾಕೇಜ್ ನವೆಂಬರ್ 29 ರಿಂದ ಜನವರಿ 10 ರವರೆಗೆ ಲಭ್ಯ ಇರುತ್ತದೆ.