ETV Bharat / business

ಗೃಹಸಾಲಗಾರರಿಗೆ ಗುಡ್​ ನ್ಯೂಸ್​: 5 ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿದರ ಕಡಿತ ಮಾಡಿದ ಆರ್​​​ಬಿಐ: 25 ಬೇಸಿಸ್ ಪಾಯಿಂಟ್‌​ ಇಳಿಕೆ - RBI TO CUT REPO RATE

ಆರ್​ಬಿಐ ತನ್ನ ಹಣಕಾಸು ನೀತಿ ಪ್ರಕಟಿಸಿದೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಿದೆ.

RBI cuts policy rate by 25 bps to 6.25 pc , first reduction in five years
ಆರ್​​ಬಿಐ ಗವರ್ನರ್​ ಸಂಜಯ್ ಮಲ್ಹೋತ್ರಾ (PTI)
author img

By ETV Bharat Karnataka Team

Published : Feb 7, 2025, 11:00 AM IST

Updated : Feb 7, 2025, 11:08 AM IST

ಮುಂಬೈ: ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಆರ್‌ಬಿಐ ಸುಮಾರು ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಿದೆ. ಮಂದಗತಿಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಆರ್​ ಬಿಐ ಈ ಕ್ರಮ ಕೈಗೊಂಡಿದೆ.

ಮೇ 2020ರಲ್ಲಿ ಕೊನೆ ಬಾರಿಗೆ ರೆಪೋರೇಟ್​ ಕಡಿತದ ನಂತರ, ಇದೇ ಮೊದಲ ಬಾರಿಗೆ 25 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ. ಫೆಬ್ರವರಿ 2023ರಲ್ಲಿ 25 ಬೇಸಿಸ್ ಪಾಯಿಂಟ್‌ ಏರಿಕೆಯೊಂದಿಗೆ ಶೇಕಡಾ 6.5ಕ್ಕೆ ಹೆಚ್ಚಿಸಲಾಗಿತ್ತು.

ವಿತ್ತೀಯ ನೀತಿ ಸಮಿತಿ MPC ಸರ್ವಾನುಮತದಿಂದ ರೆಪೋದರವನ್ನು 25 ಬೇಸಿಸ್ ಪಾಯಿಂಟ್‌ಗಳು ಎಂದರೆ, ಶೇ.6.50 ರಿಂದ 6.25 ಶೇಕಡಾಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಮಲ್ಹೋತ್ರಾ ಪ್ರಕಟಿಸಿದರು.

ಸತತ ಆರು ದರ ಏರಿಕೆಗಳ ನಂತರ ಏಪ್ರಿಲ್ 2023 ರಲ್ಲಿ ದರ ಹೆಚ್ಚಳದ ಚಕ್ರಕ್ಕೆ ವಿರಾಮ ನೀಡಲಾಗಿತ್ತು.ಮೇ 2022 ರಿಂದ ಒಟ್ಟು 250 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಲಾಗಿತ್ತು. ಫೆಬ್ರವರಿ 2023 ರಲ್ಲಿ ಕೊನೆಯ ದರ ಏರಿಕೆಯನ್ನು RBI ಮಾಡಿತ್ತು.

ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿರುವುದರಿಂದ ಆರ್‌ಬಿಐ ದರ ಕಡಿತಗೊಳಿಸುವುದು ನಿಶ್ಷಿತ ಎಂಬ ಸುಳಿವು ಸಿಕ್ಕಿತ್ತು. ಆ ನಿರೀಕ್ಷೆ ಈಗ ನಿಜವಾಗಿದೆ.

ಭಾರತೀಯ ರಿಸರ್ವ್​​ ಬ್ಯಾಂಕ್​ನ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ತಮ್ಮ ಮೊದಲ ಹಣಕಾಸು ನೀತಿಯನ್ನು ಇಂದು ಪ್ರಕಟಿಸುವ ಮೂಲಕ ತಮ್ಮ ಅಧಿಕಾರವಧಿಗೆ ಆರಂಭಿಕ ಮುದ್ರೆ ಒತ್ತಿದ್ದಾರೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟು ಆರ್ಥಿಕ ಬೆಳವಣಿಗೆಗೆ ಬೆಂಬಲಿಸಲು ಕೇಂದ್ರ ಬ್ಯಾಂಕ್​ ರೆಪೋ ದರವನ್ನು 25 ಬೇಸಿಸ್​ ಪಾಯಿಂಟ್​ಗಳಿಂದ ರೆಪೋ ದರವನ್ನು ಕಡಿತ ಮಾಡಿದೆ.

ಬ್ಯಾಂಕ್​ ಆಫ್​ ಬರೋಡಾ ವರದಿ ಪ್ರಕಾರ, ಪ್ರಾಥಮಿಕವಾಗಿ ಈರುಳ್ಳಿ, ಟೊಮಟೊ ಮತ್ತು ಆಲೂಗಡ್ಡೆಯಂತಹ ಅಗತ್ಯ ತರಕಾರಿಗಳ ಬೆಲೆ ಕಡಿತದಿಂದಾಗಿ ಹಣದುಬ್ಬರದ ಒತ್ತಡವೂ ಕಡಿಮೆಯಾಗಿದೆ. ಇವು ಗ್ರಾಹಕ ದರ ಸೂಚ್ಯಂಕದ ಕಡಿಮೆ ಚಂಚಲತೆಯ ಸುಧಾರಿತ ಪೂರೈಕೆಗೆ ಬೆಂಬಲ ನೀಡಿದೆ. ಇದು ಆರ್​ಬಿಐ ದರದ ಮಾಪನಕ್ಕೆ ಅವಕಾಶ ನೀಡಿದೆ.

ಸ್ಥೂಲ ಮತ್ತು ಭೌಗೋಳಿಕ ಅಂಶಗಳು ಸಮತೋಲಿತವಾಗಿದೆ. ಈ ಹಿನ್ನಲೆ ಆರ್​ಬಿಐನ ಮುಂದಿನ ನೀತಿಯಲ್ಲಿ 25 ಬೇಸಿಸ್​ ಪಾಯಿಂಟ್​​ ದರ ಕಡಿತಕ್ಕೆ ಅವಕಾಶ ಸಿಕ್ಕಂತಾಗಿದೆ. ಸದ್ಯ ರೆಪೊ ದರ 6.50 ರಷ್ಟಿದ್ದು. ಆರ್​ಬಿಐ ಕ್ರಮದಿಂದಾಗಿ ಅದು 6.25ಕ್ಕೆ ಇಳಿಕೆ ಆಗಿದೆ. ಸತತ ಕಳೆದ 11 ಸಭೆಗಳಿಂದ ಕಾಯ್ದುಕೊಂಡು ಬಂದಿದ್ದ ಯಥಾಸ್ಥಿತಿಗೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ: ಮಹಿಳೆಯರಿಗೆ ಅಷ್ಟೇ ಅಲ್ಲ ಇನ್ಮುಂದೆ ಪುರುಷರಿಗೂ ಸ್ವಸಹಾಯ ಸಂಘ: ಉಳಿತಾಯದ ಆರುಪಟ್ಟು ಸಾಲ ಸೌಲಭ್ಯ! ಏನೆಲ್ಲ ನಿಯಮ?

ಇದನ್ನೂ ಓದಿ: ಇನ್ವೆಸ್ಟ್‌ ಕರ್ನಾಟಕ ಸಮಾವೇಶದಲ್ಲಿ 19 ದೇಶಗಳು ಭಾಗಿ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್

Last Updated : Feb 7, 2025, 11:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.