How to Make Ridge Gourd Rice Soup:ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಡಯಟಿಂಗ್ ಕೂಡ ಮಾಡುತ್ತಾರೆ. ಆದರೆ, ಡಯಟಿಂಗ್ ಹೆಸರಿನಲ್ಲಿ ತಿನ್ನುವ ಆಹಾರವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಆದರೆ, ಹೀಗೆ ಬಾಯಿ ಕಟ್ಟಿಕೊಳ್ಳುವುದರಿಂದ ತೂಕ ಕಡಿಮೆಯಾದರು ಕೂಡ ಬೇರೆ ಆರೋಗ್ಯ ಸಮಸ್ಯೆಗಳು ಬರುವುದು ನಿಶ್ಚಿತ. ಅದಕ್ಕಾಗಿಯೇ ವೈದ್ಯರು ಸೂಚಿಸುವಂತಹ ಆರೋಗ್ಯಕರ ಆಹಾರದತ್ತ ಗಮನ ಹರಿಸಲು ಮುಂದಾಗಬೇಕಿದೆ. ಇದರಿಂದ ಕಡಿಮೆ ಕ್ಯಾಲೋರಿ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಿರೇಕಾಯಿ ರೈಸ್ ಸೂಪ್ ಅನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಸೂಪ್ಗೆ ಬೇಕಾಗುವ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಸೂಪ್ಗೆ ಬೇಕಾಗುವ ಪದಾರ್ಥಗಳೇನು?
- ಹಿರೇಕಾಯಿ (ಮಧ್ಯಮ ಗಾತ್ರ) - 2
- ಬಾಸ್ಮತಿ ಅಕ್ಕಿ - 2 ಕಪ್
- ಎಣ್ಣೆ - 2 ಟೀಸ್ಪೂನ್
- ಒಗ್ಗರಣೆಗೆ ಬೇಕಾದ ಧಾನ್ಯಗಳು (ಕಡಲೆಕಾಳು, ಉದ್ದಿನಬೇಳೆ, ಸಾಸಿವೆ, ಜಿರಿಗೆ) - 1 ಟೀಸ್ಪೂನ್
- ಒಣಮೆಣಸಿನಕಾಯಿ - 3
- ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್
- ಈರುಳ್ಳಿ - ಒಂದು
- ಆಲೂಗಡ್ಡೆ - ಒಂದು
- ಕೆಂಪು ಕುಂಬಳಕಾಯಿ ಚೂರುಗಳು - ಒಂದು ಕಪ್
- ಅರಿಶಿನ - 3/4 ಟೀಸ್ಪೂನ್
- ಕಾಳುಮೆಣಸಿನ ಪುಡಿ - ಅರ್ಧ ಟೀಸ್ಪೂನ್
- ಕೊತ್ತಂಬರಿ ಸೊಪ್ಪಿನ ಪುಡಿ - 2 ಟೀಸ್ಪೂನ್
- ನಿಂಬೆ - ಒಂದು
- ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
- ಮೊದಲು ಹಿರೇಕಾಯಿ ಹಾಗೂ ಆಲೂಗಡ್ಡೆ ಮತ್ತು ಈರುಳ್ಳಿ ಸಿಪ್ಪೆಯನ್ನು ತೆಗೆದು ತೆಳುವಾಗಿ ಕತ್ತರಿಸಬೇಕಾಗುತ್ತದೆ. ಬಾಸ್ಮತಿ ರೈಸ್ನ್ನು ಸಹ ತೊಳೆದು ನೆನೆಸಿಡಿ.
- ಈಗ ಒಲೆ ಆನ್ ಮಾಡಿ, ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿಸಿಯಾದಾಗ ಒಗ್ಗರಣೆಗೆ ಬೇಕಾದ ಧಾನ್ಯಗಳು (ಕಡಲೆಕಾಳು, ಉದ್ದಿನಬೇಳೆ, ಸಾಸಿವೆ, ಜಿರಿಗೆ) ಹಾಕಿ ಫ್ರೈ ಮಾಡಿ. ಜೊತೆಗೆ ಒಣ ಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕಾಗುತ್ತದೆ.
- ಅದಾದ ನಂತರ ರುಬ್ಬಿದ ಬೆಳ್ಳುಳ್ಳಿ ಹಾಗೂ ಈರುಳ್ಳಿ ಪೀಸ್ಗಳನ್ನು ಹಾಕಿ ಫ್ರೈ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಈಗ ಅದಕ್ಕೆ ತೆಳುವಾಗಿ ಕತ್ತರಿಸಿದ ಆಲೂಗಡ್ಡೆ, ಕುಂಬಳಕಾಯಿ, ಹಿರೇಕಾಯಿ ಪೀಸ್ಗಳನ್ನು, ಅರಿಶಿನ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
- ಸ್ವಲ್ಪ ಬೇಯಿಸಿದ ನಂತರ, ಬಾಸ್ಮತಿ ರೈಸ್ನ್ನು ಸೇರಿಸಿ. ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.. ಅದರಲ್ಲಿ 2 ಲೀಟರ್ ನೀರು ಸುರಿಯಿರಿ. ಬಳಿಕ ಮಿಶ್ರಣ ಮಾಡಿ. ಈ ವೇಳೆ ಸ್ಟೌ ಅನ್ನು ಕಡಿಮೆ ಉರಿಯಲ್ಲಿ ಇಡಬೇಕಾಗುತ್ತದೆ. ಜೊತೆಗೆ ತರಕಾರಿಗಳು ಚೆನ್ನಾಗಿ ಬೇಯುವವರೆಗೆ ಅಕ್ಕಿಯನ್ನು ಬೇಯಿಸಿ.
- ಅಕ್ಕಿ ಮತ್ತು ತರಕಾರಿಗಳನ್ನು ಬೇಯಿಸಿದ ನಂತರ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಮತ್ತೊಮ್ಮೆ ಮಿಶ್ರಣ ಮಾಡಿ. ಆಗ ಟೇಸ್ಟಿ ಹಾಗೂ ಆರೋಗ್ಯಕರ ಹಿರೇಕಾಯಿ ರೈಸ್ ಸೂಪ್ ಸಿದ್ಧವಾಗುತ್ತದೆ.