ಕರ್ನಾಟಕ

karnataka

ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ: ಐತಿಹಾಸಿಕ ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌!

ಇಡೀ ವಿಶ್ವದ ಗಮನ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ಇತ್ತೀಚಿನ ವರದಿಗಳಂತೆ ಡೊನಾಲ್ಡ್‌ ಟ್ರಂಪ್ 2ನೇ ಬಾರಿ ಅಮೆರಿಕದ ಅಧ್ಯಕ್ಷ ಗಾದಿಗೇರುವುದು ಖಚಿತವಾಗಿದೆ.

Donald Trump and Kamala Harris
ಡೊನಾಲ್ಡ್​ ಟ್ರಂಪ್​ ಹಾಗೂ ಕಮಲಾ ಹ್ಯಾರಿಸ್​ (AP)

By ETV Bharat Karnataka Team

Published : 5 hours ago

Updated : 1 hours ago

ವಾಷಿಂಗ್ಟನ್(ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಹಾಗು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇದೀಗ ಬಂದಿರುವ ವರದಿಗಳಂತೆ 267 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿ ಹಾಗು ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ 214 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಗುರುತರ ಪಾತ್ರ ವಹಿಸುವ ಬಹುತೇಕ ಪ್ರಮುಖ ರಾಜ್ಯಗಳನ್ನು (ಸ್ವಿಂಗ್‌ ಸ್ಟೇಟ್ಸ್‌) ಜಯಿಸುವಲ್ಲಿ ಟ್ರಂಪ್‌ ಯಶಸ್ವಿಯಾಗಿದ್ದಾರೆ.

ಮ್ಯಾಜಿಕ್ ನಂಬರ್ 270: ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿ ಒಟ್ಟು 538 ಎಲೆಕ್ಟೋರಲ್ ಮತಗಳ ಪೈಕಿ 270 ಮತಗಳನ್ನು ಪಡೆಯಬೇಕು.

ಉತ್ತರ ಕರೋಲಿನಾ, ಪೆನ್ಸಿಲ್ವೇನಿಯಾ, ವಿಸ್ಕೋನ್ಸಿನ್, ಮಿಚಿಗನ್, ಜಾರ್ಜಿಯಾ, ಅರಿಜೋನಾ ಮತ್ತು ನೆವಡಾ ರಾಜ್ಯಗಳು ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ.

ನಿನ್ನೆಯ (ಮಂಗಳವಾರ) ಎಲೆಕ್ಷನ್ ಡೇಗೂ ಮುನ್ನವೇ 82 ಮಿಲಿಯನ್‌ಗೂ ಹೆಚ್ಚು ಅಮೆರಿಕನ್ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇವರು ಮತಗಟ್ಟೆಗಳಿಗೆ ಬಂದು ಅಥವಾ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಹಾಕಿದ್ದಾರೆ.

ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

Last Updated : 1 hours ago

ABOUT THE AUTHOR

...view details