ETV Bharat / state

ಹಾವೇರಿ: ಯಲ್ಲಾಪುರ ಭೀಕರ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಆಕ್ರಂದನ - YELLAPUR ACCIDENT

ಭೀಕರ ಅಪಘಾತದಲ್ಲಿ ಮೃತಪಟ್ಟ ಹತ್ತೂ ಜನರ ಅಂತ್ಯಕ್ರಿಯೆಯು ಸವಣೂರಿನಲ್ಲಿ ನಡೆಯಿತು. ಅಂತ್ಯಕ್ರಿಯೆಗೂ ಮುನ್ನ ಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಲಾಯಿತು.

YELLAPUR ACCIDENT
ಭೀಕರ ಅಪಘಾತದಲ್ಲಿ ಮೃತಪಟ್ಟ ಹತ್ತೂ ಜನರ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : Jan 22, 2025, 9:38 PM IST

ಹಾವೇರಿ: ಲಾರಿ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆಯು ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ ನಡೆಯಿತು.

ಅದಕ್ಕೂ ಮುನ್ನ ಪಟ್ಟಣಕ್ಕೆ ಶಾಸಕ ಯಾಸೀರಖಾನ್ ಪಠಾಣ ನೇತೃತ್ವದಲ್ಲಿ ಎಲ್ಲ ಮೃತದೇಹಗಳನ್ನು ಘಟನಾ ಸ್ಥಳದಿಂದ ತರಲಾಯಿತು. ಮೃತದೇಹಗಳನ್ನು ಹೊತ್ತ ವಾಹನ ಪಟ್ಟಣ ತಲುಪುತ್ತಿದ್ದಂತೆ ದಾರಿ ಉದ್ದಕ್ಕೂ ಸಂಬಂಧಿಕರು, ನಿವಾಸಿಗಳು, ಸಾವಿರಾರು ಸಂಖ್ಯೆಯಲ್ಲಿ ನಿಂತು ಪಾರ್ಥಿವ ಶರೀರಗಳ ವೀಕ್ಷಣೆ ಮಾಡಿದರು. ನಂತರ ಮೃತರ ಮನೆಗಳಿಗೆ ಪಾರ್ಥಿವ ಶರೀರಗಳನ್ನು ತಗೆದುಕೊಂಡು ಹೋಗಲಾಯಿತು. ಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಲಾಯಿತು. ಈ ವೇಳೆ ಮೃತ ಕುಟುಂಬದ ಸಂಬಂಧಿಕರ ಆಕ್ರಂದನ ಮಗಿಲು ಮುಟ್ಟಿತ್ತು.

ಹೆಸ್ಕಾಂ ಅಧ್ಯಕ್ಷರಾಗಿ ಸೈಯದ್ ಅಜ್ಜಂಪೀರ್ ಖಾದ್ರಿ (ETV Bharat)

ಸಾಮೂಹಿಕ ಪ್ರಾರ್ಥನೆ : ಬಳಿಕ ಅಲ್ಲಿಂದ ಮೃತದೇಹಗಳನ್ನು ಈದ್ಗಾ ಮೈದಾನಕ್ಕೆ ತರಲಾಯಿತು. ಈದ್ಗಾ ಮೈದಾನದಲ್ಲಿ ಸಾಲಾಗಿ ಶವವಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಯೂ ಮುಸ್ಲಿಂ ಧರ್ಮದ ವಿಧಿವಿಧಾನಗಳನ್ನ ಪೂರೈಸಲಾಯಿತು. ಆ ಬಳಿಕ ಮೃತರ ಸಂಬಂಧಿಕರು ಮೃತ ದೇಹಗಳನ್ನು ತಮ್ಮನ್ನಗಲಿದ ಹಿರಿಯರನ್ನು ದಫನ್ ಮಾಡಿದ ಖಬರಸ್ತಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಕ್ರಿಯೆ ಮಾಡಿದರು. ಈ ಮೂಲಕ ಕುಮಟಾಕ್ಕೆ ಸಂತೆಗಾಗಿ ಹೋದವರು ತಮ್ಮ ಬದುಕಿನ ಸಂತೆ ಮುಗಿಸಿದ ಹಾಗೂ ಅಪಘಾತದಲ್ಲಿ ಜೀವ ಕಳೆದುಕೊಂಡ ಹತ್ತೂ ಜನರಿಗೆ ಅಂತಿಮ ವಿದಾಯ ಹೇಳಲಾಯಿತು. ಘಟನೆ ನೆನೆದು ಎಲ್ಲರೂ ಕಣ್ಣೀರು ಸುರಿಸುತ್ತಿದ್ದರು.

1972 ರಲ್ಲೂ ನಡೆದಿತ್ತು ಇಂತಹುದ್ದೇ ದುರ್ಘಟನೆ: ಈ ಹಿಂದೆ 1972ರಲ್ಲಿ ನಡೆದ 9 ಜನರ ಸಾವು ಸವಣೂರಿಗೆ ದೊಡ್ಡ ಪೆಟ್ಟು ನೀಡಿತ್ತು. ಇದೀಗ 10 ಜನ ಸಾವು ಮತ್ತೊಂದು ಆಘಾತಕಾರಿ ಘಟನೆಗೆ ಸವಣೂರು ಸಾಕ್ಷಿಯಾಯಿತೆಂದು ಸ್ಥಳೀಯರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅಪಘಾತವಾದಾಗಿನಿಂದ ಅಂತ್ಯಕ್ರಿಯೆ ನಡೆಯುವವರೆಗೂ ಸವಣೂರು ಪಟ್ಟಣದಲ್ಲಿ ನೀರವ ಮೌನ ಅವರಿಸಿತ್ತು.

ಪಟ್ಟಣದೆಲ್ಲೆಡೆ ನೀರವ ಮೌನ, ಆಕ್ರಂದನ: ಮೃತರ ಮನೆಗಳ ಮುಂದೆ ಜನದಟ್ಟಣೆಯಿದ್ದರೆ, ಮನೆ ಒಳಗಡೆ ಹೆಣ್ಣುಮಕ್ಕಳ ಆಕ್ರಂದನ ಕರಳುಹಿಂಡುವಂತಿತ್ತು. ದೂರ ದೂರದ ಊರುಗಳಲ್ಲಿರುವ ಸಂಬಂಧಿಕರು, ಸ್ನೇಹಿತರು, ಪಟ್ಟಣದ ನಿವಾಸಿಗಳು ಮೃತ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದರು. ಕೆಲವೊಬ್ಬರು ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದು ಕಂಡು ಬಂದಿತು.

ಇದನ್ನೂ ಓದಿ: ಯಲ್ಲಾಪುರ ಬಳಿ ಉರುಳಿ ಬಿದ್ದ ಲಾರಿ : ಹಣ್ಣು, ತರಕಾರಿ ಸಾಗಿಸುತ್ತಿದ್ದ 10 ಮಂದಿ ಸಾವು - LORRY ACCIDENT

ಘಟನೆಯ ಹಿನ್ನೆಲೆ: ಹಾವೇರಿ ಜಿಲ್ಲೆಯ ಸವಣೂರಿನಿಂದ ಹಣ್ಣು, ತರಕಾರಿ ತುಂಬಿಕೊಂಡು ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಘಟ್ಟದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಸವಣೂರು ಕಡೆಯವರಾಗಿದ್ದು, ಸಿಎಂ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ರಾಜ್ಯ ಸರ್ಕಾರದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಮೃತರ ಪ್ರತಿ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ 2 ಲಕ್ಷ ರೂ. ಪರಿಹಾರ, ಗಾಯಾಳುಗಳಿಗೆ 50,000 ರೂ. ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಮೃತ ದುರ್ದೈವಿಗಳು: ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸೀಮ್ ವಿರುಲ್ಲಾ ಮುಡಗೇರಿ (35), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷಾ ಫಾರಷ್ (30), ಗುಲಾಮ್​ಹುಸೇನ್ ಜವಳಿ (40), ಇಮ್ತಿಯಾಜ್ ಮಮಜಾಫರ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25) ಹಾಗೂ ಅಸ್ಲಂ ಬಾಬುಲಿ ಬೆಣ್ಣಿ (24) ಎಂಬವರು ಸ್ಥಳದಲ್ಲೇ ಅಸುನೀಗಿದ್ದಾರೆ. ಜಲಾಲ್‌ ತಾರಾ (30) ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ ಭೀಕರ ಅಪಘಾತ: ತಂದೆಗೆ ಎಳನೀರು ಕುಡಿಸಿ ಹೋದ ಮಗ ಮರಳಿದ್ದು ಶವವಾಗಿ!: ಹತ್ತೂ ಮೃತರದ್ದು ಒಂದೊಂದು ಕಥೆ..!! - YELLAPUR LORRY ACCIDENT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.