ETV Bharat / international

ಗಾಜಾದಲ್ಲಿ ಕದನ ವಿರಾಮ: ಮತ್ತೆ ತಲೆ ಎತ್ತಲಿದೆಯಾ ಹಮಾಸ್?.. ಅವಲೋಕನ - ISRAEL HAMAS CEASEFIRE

ಇಸ್ರೇಲ್ ಮತ್ತು ಹಮಾಸ್ ಮಧ್ಯದ ಕದನ ವಿರಾಮ ಮತ್ತು ಅದರ ಪರಿಣಾಮಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಹಮಾಸ್​ನಿಂದ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ದೃಶ್ಯ
ಹಮಾಸ್​ನಿಂದ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ದೃಶ್ಯ (AP)
author img

By Major General Harsha Kakar

Published : Jan 21, 2025, 7:51 PM IST

ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನವಿರಾಮ ಒಪ್ಪಂದವಾಗಿದ್ದು, ಇದು ಭಾನುವಾರದಿಂದ ಜಾರಿಯಾಗಿದೆ. ಬೈಡನ್ ಅಮೆರಿಕ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತಿರುವ ಮಧ್ಯೆ ತಿಂಗಳುಗಳ ಕಾಲ ನಡೆದ ಸಮಗ್ರ ಮಾತುಕತೆಗಳ ನಂತರ ಈ ಒಪ್ಪಂದ ಜಾರಿಯಾಗುತ್ತಿರುವುದು ಗಮನಾರ್ಹ. ಬೈಡನ್ ಮತ್ತು ಟ್ರಂಪ್ ಇಬ್ಬರೂ ಕದನ ವಿರಾಮದ ಶ್ರೇಯಸ್ಸು ತಮ್ಮದೇ ಎಂದು ಹೇಳಿಕೊಂಡಿದ್ದಾರೆ. ನವೆಂಬರ್​ನಲ್ಲಿ ನಮ್ಮ ಪಕ್ಷಕ್ಕೆ ಐತಿಹಾಸಿಕ ಗೆಲುವು ಸಿಕ್ಕಿದ್ದರಿಂದಲೇ ಕದನ ವಿರಾಮ ಒಪ್ಪಂದ ಜಾರಿಯಾಗಲು ಸಾಧ್ಯವಾಗಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ನಾವಿನ್ನೂ ಶ್ವೇತಭವನಕ್ಕೆ ಬರುವ ಮುನ್ನವೇ ಇದನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಬೈಡನ್, ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದೇವೆ, ಏಕೆಂದರೆ ಅಮೆರಿಕದ ಯಾವುದೇ ಅಧ್ಯಕ್ಷರು ಅದನ್ನೇ ಮಾಡುತ್ತಾರೆ ಎಂದು ಹೇಳಿದ್ದಾರೆ.

ಕೊನೆಗೂ ಯುದ್ಧ ಅಂತ್ಯವಾಗಿದ್ದಕ್ಕೆ ಗಾಜಾ ಜನತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಹಮಾಸ್​ನ ಹಿರಿಯ ನಾಯಕ ಮತ್ತು ಮಧ್ಯಸ್ಥಿಕೆ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಲೀಲ್ ಅಲ್ - ಹಯ್ಯಾ, 'ನಮ್ಮ ಜನರು ಆಕ್ರಮಣದ ಘೋಷಿತ ಮತ್ತು ಗುಪ್ತ ಗುರಿಗಳನ್ನು ವಿಫಲಗೊಳಿಸಿದ್ದಾರೆ. ಆಕ್ರಮಣವು ನಮ್ಮ ಜನರನ್ನು ಮತ್ತು ಅವರ ಪ್ರತಿರೋಧವನ್ನು ಎಂದಿಗೂ ಮಣಿಸಲಾಗದು ಎಂಬುದನ್ನು ಇಂದು ನಾವು ಸಾಬೀತುಪಡಿಸಿದ್ದೇವೆ.' ಎಂದರು.

ಏತನ್ಮಧ್ಯೆ, ತನ್ನ ಗುಂಪಿಗೆ ಹೊಸದಾಗಿ ಸದಸ್ಯರನ್ನು ನೇಮಿಸಿಕೊಳ್ಳುವ ಮೂಲಕ ಹಮಾಸ್ ಆಕ್ರಮಣದ ಮೊದಲು ಇದ್ದ ತನ್ನ ಶಕ್ತಿಯನ್ನು ಮರಳಿ ಸ್ಥಾಪಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದು ವಿನಾಶ ಮತ್ತು ನಷ್ಟಗಳ ಹೊರತಾಗಿಯೂ ಅದರ ಸಿದ್ಧಾಂತ ಮತ್ತು ಜನಪ್ರಿಯತೆ ಮೊದಲಿನಂತೆಯೇ ಉಳಿದುಕೊಂಡಿವೆ ಎಂಬುದರ ಸಂಕೇತವಾಗಿದೆ.

ಗಾಜಾ ಜನತೆ ಕದನ ವಿರಾಮ ಸಂಭ್ರಮಿಸ್ತಿದ್ದಾರೆ.. ಆದರೆ?: ಯುದ್ಧದ ಸಮಯದಲ್ಲಿ ಗಾಜಾ ಜನತೆ ತಮ್ಮ ಮನೆಗಳು ಮತ್ತು ಆಸ್ಪತ್ರೆಗಳ ನಾಶದ ಬಗ್ಗೆ ಜಗತ್ತಿನ ಮುಂದೆ ಕಿರುಚಾಡಿದ್ದರು. ತಮ್ಮ ನಲವತ್ತು ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದ್ದರು. ಇಸ್ರೇಲಿ ಆಕ್ರಮಣವನ್ನು ನರಮೇಧ ಎಂದು ಕರೆದ ಅವರು ಹಸಿವಿನಿಂದ ಬಳಲುತ್ತಿರುವ ಮತ್ತು ಸಾಯುತ್ತಿರುವ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸಿದ್ದರು. ಆದರೆ, ಈಗ ಅದೇ ಗಾಜಾ ಜನತೆ ಕದನ ವಿರಾಮವನ್ನು ತಮ್ಮ ವಿಜಯವೆಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದು ವಿಪರ್ಯಾಸವೇ ಅಥವಾ ಅವರು ಬ್ರೈನ್ ವಾಶ್​ಗೆ ಒಳಗಾಗಿದ್ದಾರಾ ಎಂಬುದು ತಿಳಿಯುತ್ತಿಲ್ಲ.

ಗಾಝಾದಲ್ಲಿ ಹಮಾಸ್ ತನ್ನ ಜನರಿಗೆ ಊಹಿಸಲಾಗದ ಯಾತನೆಯನ್ನು ಉಂಟುಮಾಡಿದರೂ ಅದು ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಹಮಾಸ್​ನಿಂದಾಗಿ ಗಾಜಾ ಜನತೆ ಆಹಾರ ಮತ್ತು ಔಷಧಗಳಿಗಾಗಿ ಪರಿತಪಿವಂತಾಯಿತು. ಯಾವುದೇ ಯಾವುದೇ ಕಾರ್ಯತಂತ್ರದ ಲೆಕ್ಕಾಚಾರಗಳಿಲ್ಲದೇ ಪ್ರಾರಂಭಿಸಿದ ಯುದ್ಧದಲ್ಲಿ ಜನ ಒಂದು ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ಓಡಬೇಕಾಯಿತು. ಇನ್ನು ಇಸ್ರೇಲಿ ದಾಳಿಗಳಿಂದ ಹಮಾಸ್​ ತನ್ನ ಸಂಪೂರ್ಣ ನಾಯಕತ್ವವನ್ನು ಕಳೆದುಕೊಂಡಿತು. ಆದಾಗ್ಯೂ, ಭಯೋತ್ಪಾದಕ ಸಂಘಟನೆಗಳಲ್ಲಿ ನಾಯಕನೊಬ್ಬ ಹತನಾದರೆ ಆ ಸ್ಥಾನಕ್ಕೆ ಮತ್ತೊಬ್ಬ ಬರುವುದು ಅತ್ಯಂತ ಸುಲಭ.

ಸಾಮಾನ್ಯ ಇಸ್ರೇಲಿ ಜನ ಕದನ ವಿರಾಮ ಒಪ್ಪಂದದ ಬಗ್ಗೆ ಖುಷಿ ಪಟ್ಟಿದ್ದು, ಒತ್ತೆಯಾಳುಗಳ ಕುಟುಂಬಸ್ಥರು ತಮ್ಮವರು ಮರಳಿ ಬರಲಿ ಎಂದು ಕಾಯುತ್ತಿದ್ದಾರೆ. ಆದರೆ ಕದನ ವಿರಾಮ ಒಪ್ಪಂದಿಂದ ಇಸ್ರೇಲ್ ಸರ್ಕಾರದೊಳಗೆ ಅಸಮಾಧಾನ ಸೃಷ್ಟಿಯಾಗಿದೆ. ಸೈನಿಕರ ಕುಟುಂಬಗಳು ಸಹ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹೋರಾಟದಲ್ಲಿ ಇಸ್ರೇಲ್ ಈವರೆಗೆ 400 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಹಾಗೂ ಅನೇಕರು ಗಾಯಗೊಂಡಿದ್ದಾರೆ.

ಕದನ ವಿರಾಮ ವಿರೋಧಿಸಿ ಇಬ್ಬರು ಇಸ್ರೇಲಿ ಸಚಿವರ ರಾಜೀನಾಮೆ: ಇಸ್ರೇಲ್​ನ ತೀವ್ರಗಾಮಿ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಮತ್ತು ಧಾರ್ಮಿಕ ಯಹೂದಿ ಪವರ್ ಪಕ್ಷದ ಇತರ ಇಬ್ಬರು ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪ್ರಸ್ತುತ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದಿಲ್ಲ ಅಥವಾ ಕದನ ವಿರಾಮದ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಇದು ಆಡಳಿತಾರೂಢ ಮೈತ್ರಿಕೂಟವನ್ನು ಅಸ್ಥಿರಗೊಳಿಸಿದೆ.

ನೆತನ್ಯಾಹು ತಮ್ಮ ರಾಜಕೀಯ ಲಾಭಕ್ಕಾಗಿ ಕದನ ವಿರಾಮ ಒಪ್ಪಂದಕ್ಕೆ ಬರಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ. ಕದನ ವಿರಾಮ ಒಪ್ಪಂದ ಜಾರಿಯಾದರೆ ತಮ್ಮ ಅಧಿಕಾರಕ್ಕೆ ಕುತ್ತು ಬರಬಹುದು ಎಂಬ ಆತಂಕ ಇದಕ್ಕೆ ಕಾರಣ ಎನ್ನಲಾಗಿದೆ. ಕದನ ವಿರಾಮದ ಮೊದಲ ಹಂತದ ನಂತರ ಮತ್ತೆ ಯುದ್ಧ ಆರಂಭಿಸಬೇಕಾ ಎಂಬ ಬಗ್ಗೆ ಪರಿಶೀಲಿಸಲು ನೆತನ್ಯಾಹು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಕದನ ವಿರಾಮದ ಮೊದಲ ಹಂತದಲ್ಲಿ 33 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಯ ಪ್ರಸ್ತಾಪವಿದೆ.

ಕದನ ವಿರಾಮವು ಹಮಾಸ್​ನ ಸಿದ್ಧಾಂತವನ್ನು ಸೋಲಿಸಲು ಇಸ್ರೇಲ್​ಗೆ ಸಾಧ್ಯವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇಸ್ರೇಲ್​ ಹಮಾಸ್​ನ ಮಿಲಿಟರಿ ವ್ಯವಸ್ಥೆಯನ್ನು ಹಾಳು ಮಾಡಿದ ನಂತರ ಈಗ ಅದು ದಂಗೆಕೋರ ಶಕ್ತಿಯಾಗಿ ಮಾರ್ಪಟ್ಟಿದೆ. ಈಗಲೂ ಅದು ಇಸ್ರೇಲಿ ಸೈನ್ಯದ ಮೇಲೆ ದಾಳಿ ನಡೆಸುತ್ತಿದೆ. ಕಳೆದ ಒಂದು ವಾರದಲ್ಲಿ ಇಸ್ರೇಲ್ 16 ಸೈನಿಕರನ್ನು ಕಳೆದುಕೊಂಡಿರುವುದು ಗಮನಾರ್ಹ. ಗಾಜಾದಿಂದ ಹಮಾಸ್ ಅನ್ನು ತೆಗೆದುಹಾಕುವುದು ಸುಲಭವಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಹಮಾಸ್ ಈಗಲೂ ಅಸ್ತಿತ್ವದಲ್ಲಿದೆ ಮತ್ತು ಒಂದು ಶಕ್ತಿಯಾಗಿ ಉಳಿದಿದೆ ಎಂಬುದು ಸತ್ಯ.

ಅಯತೊಲ್ಲಾ ಖಮೇನಿ ಟ್ವೀಟ್: ಗಾಜಾ ಜನತೆಯ ಪ್ರತಿರೋಧದ ಹೋರಾಟವನ್ನು ಇರಾನ್ ಬೆಂಬಲಿಸಿದೆ. "ಜನರ ತಾಳ್ಮೆ ಮತ್ತು ಪ್ಯಾಲೆಸ್ಟೈನ್ ಪ್ರತಿರೋಧ ಮತ್ತು ಪ್ರತಿರೋಧ ಗುಂಪಿನ ದೃಢತೆಯಿಂದಾಗಿ ಇಸ್ರೇಲ್ ಸರ್ಕಾರವು ನಮಗೆ ಮಣಿಯಿತು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ" ಎಂದು ಅಯತೊಲ್ಲಾ ಖಮೇನಿ ಟ್ವೀಟ್ ಮಾಡಿದ್ದಾರೆ.

ಇರಾನ್ ಈಗ ಬಹುತೇಕ ಏಕಾಂಗಿಯಾಗಿದೆ ಹಾಗೂ ಸಿರಿಯಾದ ಬಲ ಕೊನೆಗೊಂಡಿದೆ. ಹಿಜ್ಬುಲ್ಲಾ ದುರ್ಬಲಗೊಂಡಿದ್ದು, ಅದು ಈಗಾಗಲೇ ಇಸ್ರೇಲ್​ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಹೌತಿಗಳಿಗೆ ತೀವ್ರ ಹೊಡೆತ ಬಿದ್ದಿದ್ದು, ಹಮಾಸ್​ ಅನ್ನು ಶೀಘ್ರದಲ್ಲೇ ಮರು ಸಮರ್ಥಗೊಳಿಸುವುದು ಸಾಧ್ಯವಿಲ್ಲ. ಇಸ್ರೇಲಿ ವೈಮಾನಿಕ ದಾಳಿಯಿಂದ ಇರಾನ್​ನ ವಾಯು ರಕ್ಷಣೆ ನಿಷ್ಪ್ರಯೋಜಕವಾಗಿದೆ. ಸರ್ಕಾರವನ್ನು ಬದಲಾಯಿಸುವುದೇ ಇಸ್ರೇಲ್ ಮತ್ತು ಯುಎಸ್ ನ ಮುಖ್ಯ ಉದ್ದೇಶ ಎಂಬುದು ಇರಾನ್ ಸರ್ಕಾರಕ್ಕೆ ಗೊತ್ತಿದೆ.

ಭವಿಷ್ಯದ ಚರ್ಚೆಗಳಲ್ಲಿ ಮೇಲುಗೈ ಸಾಧಿಸಬಹುದಾದ ಭಿನ್ನಾಭಿಪ್ರಾಯಗಳು ಗಾಜಾದ ಆಡಳಿತ ಮತ್ತು ಅದರ ಪುನರ್ ನಿರ್ಮಾಣವನ್ನು ಒಳಗೊಂಡಿವೆ. ಇಸ್ರೇಲ್ ಈಜಿಪ್ಟ್ ಮತ್ತು ಕತಾರ್ ಮತ್ತು ವಿಶ್ವಸಂಸ್ಥೆಗೆ ಆದ್ಯತೆ ನೀಡಿದರೆ, ಪ್ಯಾಲೆಸ್ಟೈನ್ ಪ್ರಾಧಿಕಾರವು ಗಾಜಾವನ್ನು ಆಳುವ ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿದೆ. ಟೆಲ್ ಅವೀವ್ ಪ್ಯಾಲೆಸ್ಟೈನ್ ಪ್ರಾಧಿಕಾರವನ್ನು ನಂಬುವುದಿಲ್ಲ ಮತ್ತು ಅದಕ್ಕೆ ಯಾವುದೇ ಪಾತ್ರವನ್ನು ನೀಡಲು ಸಿದ್ಧವಿಲ್ಲ. ಯುಎಸ್ ಹಿಂದೆ ಸರಿದ ಕೂಡಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಾಡಿದಂತೆ ಗಾಜಾದಲ್ಲಿ ಹಮಾಸ್ ಮತ್ತೆ ಹೊರಹೊಮ್ಮುವುದನ್ನು ತಡೆಯಲು ಇಸ್ರೇಲ್ ಸಾಧ್ಯವಿರುವ ಎಲ್ಲ ತಂತ್ರಗಳನ್ನು ಬಳಸಬೇಕಾಗುತ್ತದೆ. ಆದರೆ ಇದು ಸುಲಭವಲ್ಲ.

ಒಪ್ಪಂದದ ಷರತ್ತುಗಳನ್ನ ಬಲವಂತವಾಗಿ ಹೇರಿತಾ ಅಮೆರಿಕ: ಕದನ ವಿರಾಮ ಒಪ್ಪಂದದ ಷರತ್ತುಗಳನ್ನು ಹಮಾಸ್ ಮತ್ತು ಇಸ್ರೇಲ್ ಮೇಲೆ ಯುಎಸ್ ಮತ್ತು ಅದರ ಸಮಾಲೋಚಕರು ಬಲವಂತದಿಂದ ಹೇರಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಕತಾರ್ ಮತ್ತು ಈಜಿಪ್ಟ್ ಹಮಾಸ್ ಮೇಲೆ ಒತ್ತಡ ಹೇರಿದರೆ, ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಯುಎಸ್ ನೆತನ್ಯಾಹು ಅವರನ್ನು ಮನವೊಲಿಸಿತು. ಇಸ್ರೇಲ್​ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಒಪ್ಪಂದ ಜಾರಿಯಾಗುವುದು ಸ್ಪಷ್ಟವಾಗಿತ್ತು. ಇದು ಬೈಡನ್​ಗೆ ಮುಖ ಉಳಿಸಿಕೊಳ್ಳುವ ಮಾರ್ಗವಾಗಿದ್ದರೆ, ಟ್ರಂಪ್​ಗೆ ಒಂದು ರೀತಿಯ ಗೆಲುವಾಗಿದೆ. ಆದರೆ ಯುಎಸ್​ನಲ್ಲಿ ಟ್ರಂಪ್ ಆಡಳಿತ ಆರಂಭವಾದ ನಂತರವೂ ಈ ಒಪ್ಪಂದ ಮುಂದುವರಿಯಲಿದೆಯಾ ಎಂಬುದು ಪ್ರಶ್ನೆಯಾಗಿದೆ.

ಇಸ್ರೇಲ್​ಗೆ ಹಮಾಸ್​ನ ಪುನರುತ್ಥಾನವು ಸ್ವೀಕಾರಾರ್ಹವಲ್ಲವಾದರೂ ಅದೇ ಸತ್ಯವಾಗಿದೆ. ಗಾಜಾ ಜನತೆಯಲ್ಲಿ ಅದರ ಸಿದ್ಧಾಂತ ಮತ್ತು ಬೆಂಬಲ ಮೊದಲಿನಂತೆಯೇ ಪ್ರಬಲವಾಗಿವೆ. ಹೀಗಾಗಿ ಗಾಜಾ ರಾಜಕೀಯದಿಂದ ಅದನ್ನು ಹೊರಗಿಡುವುದು ಕಷ್ಟ. 33 ಒತ್ತೆಯಾಳುಗಳ ಈ ಗುಂಪನ್ನು ಬಿಡುಗಡೆ ಮಾಡುವವರೆಗೂ ಇಸ್ರೇಲ್ ಶಾಂತಿಯನ್ನು ಕಾಪಾಡುತ್ತದೆ ಎಂಬುದು ಮಾತ್ರ ಸತ್ಯ. ಅಲ್ಲಿಯವರೆಗೆ ಅದು ಒಪ್ಪಂದದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ.

ಇಸ್ರೇಲ್​ನ ಪರಿಸ್ಥಿತಿಗಳು ಕೂಡ ಈಗ ಮೊದಲಿನಂತೆ ಇಲ್ಲ. ಇನ್ನು ಹಮಾಸ್​ನ ಬಹುತೇಕ ಸುರಂಗಗಳು ನಾಶವಾಗಿವೆ ಮತ್ತು ಮೊದಲಿನಂತೆ ಅದು ಇರಾನ್​ನಿಂದ ಶಸ್ತ್ರಾಸ್ತ್ರಗಳನ್ನು ಪಡೆಯುವುದು ಸಾಧ್ಯವಿಲ್ಲ. ಹಮಾಸ್​ನ ಕಾರ್ಯಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಕ್ಟೋಬರ್ 7 ರಂತೆಯೇ ಅದೇ ರೀತಿಯ ದಾಳಿಯ ಭಯವು ಇಸ್ರೇಲ್​ನಲ್ಲಿ ಮುಂದುವರೆಯುವುದರಿಂದ ಸಣ್ಣದೊಂದು ಘಟನೆಯಾದರೂ ಇಸ್ರೇಲ್ ಮತ್ತೆ ಗಾಜಾ ಮೇಲೆ ವಾಯುದಾಳಿಗಳನ್ನು ಆರಂಭಿಸಬಹುದು. ಸದ್ಯ ಪ್ಯಾಲೆಸ್ಟೈನಿಯರು ಮತ್ತು ಇಸ್ರೇಲಿಗಳ ನಡುವಿನ ವಿಶ್ವಾಸಕ್ಕೆ ಧಕ್ಕೆಯಾಗಿದ್ದು, ಇದು ದೀರ್ಘಕಾಲದವರೆಗೆ ಸಾಮಾನ್ಯ ಸ್ಥಿತಿಗೆ ಮರಳದಿರಬಹುದು.

ಬಲಾಢ್ಯ ಅರಬ್​​​​​​ ರಾಷ್ಟ್ರಗಳು ತಟಸ್ಥ: ಅತ್ಯಂತ ಶಕ್ತಿಶಾಲಿ ಅರಬ್ ರಾಷ್ಟ್ರಗಳು ಸಂಘರ್ಷದ ಉದ್ದಕ್ಕೂ ತಟಸ್ಥವಾಗಿ ಉಳಿದಿವೆ ಅಥವಾ ಮೌನಕ್ಕೆ ಶರಣಾಗಿ ಇಸ್ರೇಲ್ ಅನ್ನು ಬೆಂಬಲಿಸಿವೆ. ಈ ದೇಶಗಳು ಇಸ್ರೇಲ್ ಅನ್ನು ಟೀಕಿಸಿದರೂ ಅದಕ್ಕೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಲಿಲ್ಲ. ನೆರೆಯ ಈಜಿಪ್ಟ್ ಸೇರಿದಂತೆ ಯಾವುದೇ ದೇಶವು ಪ್ಯಾಲೆಸ್ಟೈನ್ ನಿರಾಶ್ರಿತರನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಜಾಗತಿಕವಾಗಿ ಗಾಜಾ ಜನತೆಗೆ ಸಿಕ್ಕ ಬೆಂಬಲ ಕಡಿಮೆಯೇ ಇತ್ತು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಸರ್ಕಾರಗಳು ಅಥವಾ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರಗಳಿಂದ ಗಾಜಾಗೆ ಒಂದಿಷ್ಟು ಬೆಂಬಲ ವ್ಯಕ್ತವಾಯಿತು. ಈ ಪ್ರದೇಶದ ದೇಶಗಳು ಮುಖಾಮುಖಿಗಿಂತ ಇಸ್ರೇಲ್ ನೊಂದಿಗೆ ಶಾಂತಿ ಮತ್ತು ಸಹಕಾರವನ್ನು ಬಯಸುತ್ತವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ದೇಶಗಳು ಗಾಜಾದ ಪುನರ್ ನಿರ್ಮಾಣಕ್ಕೆ ಕೊಡುಗೆ ನೀಡಿದರೂ, ಹಮಾಸ್ ಪುನರುತ್ಥಾನವನ್ನು ಅವು ಎಂದಿಗೂ ಬಯಸುವುದಿಲ್ಲ. ಒಂದು ಸಂಘಟನೆಯಾಗಿ ಹಮಾಸ್ ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಅಥವಾ ಅದನ್ನು ಗೌರವಿಸಲಾಗುವುದಿಲ್ಲ. ಇದು ಪಶ್ಚಿಮ ಏಷ್ಯಾದ ಪರಿಸ್ಥಿತಿಗಳು ಬದಲಾಗುತ್ತಿರುವುದರ ಸೂಚನೆಯಾಗಿದೆ. ಇದು ತಾತ್ಕಾಲಿಕ ಕದನ ವಿರಾಮವಾಗಿದೆ. ಇದನ್ನು ಎರಡೂ ಕಡೆಯವರು ಯಾವಾಗ ಬೇಕಾದರೂ ಮುರಿಯಬಹುದು.

ಲೇಖನ: ಮೇಜರ್ ಜನರಲ್ ಹರ್ಷ ಕಾಕರ್ (ನಿವೃತ್ತ)

ಇದನ್ನೂ ಓದಿ : ಡಾಲರ್​ ಬದಲಿಸಿದರೆ ಶೇ.100 ರಷ್ಟು ಸುಂಕ: ಬ್ರಿಕ್ಸ್​ ರಾಷ್ಟ್ರಗಳಿಗೆ ಟ್ರಂಪ್​ ಬೆದರಿಕೆ - TRUMP TARIFF THREATENS ON BRICS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.