ವಾಷಿಂಗ್ಟನ್: ''ಉಕ್ರೇನ್‌ಗೆ ಮಿಲಿಟರಿ ನೆರವು ನೀಡಲು, ಇಂಡೋ-ಪೆಸಿಫಿಕ್‌ನಲ್ಲಿ ಚೀನಾ ವಿರುದ್ಧ ದೇಶಗಳನ್ನು ಸಂಘಟಿಸಲು ಮತ್ತು ವಲಸೆ ಬಿಕ್ಕಟ್ಟಿಗೆ ಸಮಗ್ರ ಪರಿಹಾರವನ್ನು ನೀಡಲು ಉದ್ದೇಶಿಸಿರುವ ಉಭಯಪಕ್ಷೀಯ ರಾಷ್ಟ್ರೀಯ ಭದ್ರತಾ ಒಪ್ಪಂದವನ್ನು ತಮ್ಮ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆಯೊಡ್ಡುತ್ತಿದ್ದಾರೆ'' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಮಸೂದೆಗೆ ಡೊನಾಲ್ಡ್ ಟ್ರಂಪ್ ವಿರೋಧ:" ಈ ಮಸೂದೆಯು ಸೆನೆಟ್ನೊಳಗೆ ಮುಂದುವರಿಯುವುದಿಲ್ಲ. ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ತನಗೆ ಕೆಟ್ಟದಾಗಲಿದೆ ಎಂದು ಭಾವಿಸುತ್ತಾರೆ. ಆದ್ದರಿಂದ, ರಾಷ್ಟ್ರೀಯ ಭದ್ರತಾ ಒಪ್ಪಂದವನ್ನು ತಡೆಯುತ್ತಿದ್ದಾರೆ. ಅವರು ಈ ಸಮಸ್ಯೆಯನ್ನು ನಿಜವಾಗಿ ಪರಿಹರಿಸುವುದಕ್ಕಿಂತ ಹೆಚ್ಚಾಗಿ ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಆದರೆ, ಹೌಸ್ ಮತ್ತು ಸೆನೆಟ್ಗೆ ರಿಪಬ್ಲಿಕನ್ನರು ಬಾರದಂತೆ ತಡೆಯಲಾಗುತ್ತಿದೆ. ಜೊತೆಗೆ ಅವರಿಗೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ನಡೆಸಿದ್ದಾರೆ" ಎಂದು ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬೈಡನ್ ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ಭದ್ರತಾ ಒಪ್ಪಂದದಿಂದ ಯಾರಿಗೆ ಅನುಕೂಲ?:''ವಾರಾಂತ್ಯದಲ್ಲಿ, ಎಲ್ಲ ಸಂಸದರು ಶ್ವೇತಭವನದ ಬೆಂಬಲಿತ ಉಭಯಪಕ್ಷೀಯ ಒಪ್ಪಂದವನ್ನು ಅನಾವರಣಗೊಳಿಸಿದರು. ಇದು ಸುಮಾರು 100,000 H-4 ವೀಸಾ ಹೊಂದಿರುವವರಿಗೆ ಸ್ವಯಂಚಾಲಿತವಾಗಿ ಕೆಲಸದ ಅಧಿಕಾರವನ್ನು ಒದಗಿಸುತ್ತದೆ. ಅವರು ನಿರ್ದಿಷ್ಟ ವರ್ಗದ H-1B ವೀಸಾ ಹೊಂದಿರುವ ದಂಪತಿಗಳಿಗೆ ಮತ್ತು ಅವರ ಮಕ್ಕಳಿಗೆ ಅನುಕೂಲ ಆಗಲಿದೆ. US ಸೆನೆಟ್‌ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನಾಯಕತ್ವದ ನಡುವಿನ ಸುದೀರ್ಘ ಮಾತುಕತೆಗಳ ನಂತರ ಭಾನುವಾರ ಘೋಷಿಸಲಾದ ರಾಷ್ಟ್ರೀಯ ಭದ್ರತಾ ಒಪ್ಪಂದವು H-1B ವೀಸಾ ಹೊಂದಿರುವ ಸುಮಾರು 250,000 ಮಕ್ಕಳಿಗೆ ಪರಿಹಾರವನ್ನು ಒದಗಿಸುತ್ತದೆ'' ಎಂದು ಅವರು ತಿಳಿಸಿದರು.
ಟ್ರಂಪ್ ವಿರುದ್ಧ ಬೈಡನ್ ಗರಂ:''ಈ ಕ್ರಮದಿಂದ ಸಾವಿರಾರು ಭಾರತೀಯ ತಂತ್ರಜ್ಞಾನ ವೃತ್ತಿಪರರಿಗೆ ಒಳ್ಳೆಯ ಸುದ್ದಿಯಾಗಿದೆ. ಅವರು ಗ್ರೀನ್ ಕಾರ್ಡ್‌ಗಾಗಿ ದೀರ್ಘಕಾಲ ಕಾಯುತ್ತಿದ್ದಾರೆ. ಆದರೆ, ಈ ದಂಪತಿಗಳು ಕೆಲಸ ಮಾಡಲು ಅವಕಾಶ ನೀಡಲಾಗುವುದಿಲ್ಲ ಮತ್ತು ಅವರ ಮಕ್ಕಳನ್ನು ಗಡೀಪಾರು ಮಾಡುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಸೆನೆಟ್ ವಲಸೆ ಮಸೂದೆಯನ್ನು ಕಿತ್ತುಹಾಕಿ ಎಂದು ಟ್ರಂಪ್ ಮಂಗಳವಾರ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ'' ಎಂದು ಬೈಡೆನ್ ಕಿಡಿಕಾರಿದರು.