ಒಮಾಹಾ (ನೆಬ್ರಸ್ಕಾ) :ತೀವ್ರ ಚಳಿಯಿಂದ ತತ್ತರಿಸಿ ಹೋಗಿದ್ದ ಮಧ್ಯ ಮತ್ತು ಪಶ್ಚಿಮ ಅಮೆರಿಕ ಭಾನುವಾರ ಸೂರ್ಯನ ಬಿಸಿಲ ಕಿರಣಕ್ಕೆ ತನ್ನನ್ನು ಒಡ್ಡಿಕೊಂಡಿತು. ಹೌದು ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳು ಹಿಮದಿಂದ ಆವರಿಸಿಕೊಳ್ಳುವ ಅಮೆರಿಕದ ಬಹುತೇಕ ಪ್ರದೇಶಗಳಲ್ಲಿ ನಿನ್ನೆಯಿಂದ ಸೂರ್ಯನ ದರ್ಶನವಾಗುತ್ತಿದೆ. ನಿನ್ನೆ ಚಳಿಗೆ ವಿರಾಮ ಹೇಳಲು ಮನೆಯಿಂದ ಹೊರ ಬಂದ ಜನ ಸೂರ್ಯನ ಕಿರಣಗಳನ್ನ ಹಾಗೂ ಬೆಚ್ಚಗಿನ ಭಾವ ಅನುಭವಿಸಿದರು. ಒಮಾಹಾ, ನೆಬ್ರಸ್ಕಾದಲ್ಲಿ ನಿನ್ನೆ ಅಧಿಕ ತಾಪಮಾನ ದಾಖಲೆಯಾಗಿದೆ ಎಂದು ಅಲ್ಲಿನ ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
ಒಮಾಹಾವು ತನ್ನ 154 ವರ್ಷಗಳ ಹವಾಮಾನ ಟ್ರ್ಯಾಕಿಂಗ್ ಇತಿಹಾಸದಲ್ಲಿ ಎರಡನೇ ಬೆಚ್ಚಗಿನ ಫೆಬ್ರವರಿ ತಿಂಗಳನ್ನು ಪಡೆದುಕೊಂಡಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಅಂಕಿ - ಅಂಶಗಳು ಹೇಳಿವೆ. ಭಾನುವಾರದ ತಾಪಮಾನ ಆಧಾರದ ಮೇಲೆ ಸೋಮವಾರ(ಇಂದು) ಹೆಚ್ಚಿನ ತಾಪಮಾನ ಉಂಟಾಗುವ ಸಾಧ್ಯತೆ ಇದೆ ಎಂದೂ ಹವಾಮಾನಶಾಸ್ತ್ರಜ್ಞ ಮೈಕೆಲಾ ವುಡ್ ತಿಳಿಸಿದ್ದಾರೆ.
ಶೀತದ ತಾಪಮಾನ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ಝಳ ಹೆಚ್ಚಾಗಲಿದ್ದು ಅಪಾಯವು ಅಧಿಕವಾಗಲಿದೆ. ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿರುವಂತೆ ಉಷ್ಣತೆ, ಕಡಿಮೆ ಆರ್ದ್ರತೆಯ ಸ್ಥಳಗಳಲ್ಲಿ 35 mph (56 kph) ಗಿಂತ ಹೆಚ್ಚು ಉಷ್ಣ ಗಾಳಿ ಬೀಸುತ್ತದೆ. ಹಾಗೆಯೇ 11 ರಾಜ್ಯಗಳ ಭಾಗಗಳಲ್ಲಿ ಸಸ್ಯಗಳು ಹರಡಿದ್ದು ಈ ಪ್ರದೇಶದಲ್ಲಿ ಬೆಂಕಿಯ ಅಪಾಯಗಳು (ಕಾಳ್ಗಿಚ್ಚು) ಅಧಿಕ.