ಕರ್ನಾಟಕ

karnataka

ETV Bharat / international

ಬೈಡನ್​ಗೆ ಪ್ರಾಚೀನ ಶೈಲಿಯ ಬೆಳ್ಳಿಯ ರೈಲಿನ ಮಾದರಿ ಉಡುಗೊರೆ ನೀಡಿದ ಪ್ರಧಾನಿ ಮೋದಿ - PM Modi in US - PM MODI IN US

ಪ್ರಾಚೀನ ಶೈಲಿಯ ಬೆಳ್ಳಿಯ ರೈಲಿನ ಮಾದರಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದರು.

ಬೈಡನ್​ಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಬೆಳ್ಳಿಯ ರೈಲಿನ ಮಾದರಿ
ಬೈಡನ್​ಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಬೆಳ್ಳಿಯ ರೈಲಿನ ಮಾದರಿ (IANS)

By PTI

Published : Sep 22, 2024, 5:47 PM IST

ನವದೆಹಲಿ: ಭಾರತದಲ್ಲಿ ಕರಕುಶಲ ಕಲೆಯಿಂದ ತಯಾರಿಸಲಾದ ಪ್ರಾಚೀನ ಶೈಲಿಯ ಬೆಳ್ಳಿಯ ರೈಲಿನ ಮಾದರಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು ಭಾರತದ ಕರಕುಶಲ ಕಲೆಯನ್ನು ಬಿಂಬಿಸುವ ಮಹಾರಾಷ್ಟ್ರದ ಕುಶಲಕರ್ಮಿಗಳು ಅದ್ಭುತವಾಗಿ ರಚಿಸಿದ ಅಪರೂಪದ ಮತ್ತು ಅಸಾಧಾರಣ ಸೃಷ್ಟಿಯಾಗಿದೆ.

ಈ ವಿಂಟೇಜ್ ಮಾದರಿಯು ಸಂಕೀರ್ಣವಾದ ಫಿಲಿಗ್ರೀ ಹೆಸರಿನ ಕುಶಲತೆಯನ್ನು ಒಳಗೊಂಡಿದ್ದು, ಇದನ್ನು ಶೇಕಡಾ 92.5 ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದಿನ ಉಗಿಬಂಡಿಯ ಯುಗಕ್ಕೆ ಗೌರವಾರ್ಪಣೆ ಸಲ್ಲಿಸುವ ದೃಷ್ಟಿಯಿಂದ ಐತಿಹಾಸಿಕ ಪ್ರಾಮುಖ್ಯತೆಯ ಈ ಕರಕುಶಲ ಮಾದರಿಯನ್ನು ತಯಾರಿಸಲಾಗಿದೆ.

ಭಾರತ ಮತ್ತು ಯುಎಸ್ ನಡುವಿನ ದೃಢವಾದ ಬಾಂಧವ್ಯವನ್ನು ಸೂಚಿಸುವ ಈ ರೈಲು ಮಾದರಿಯ ಮುಖ್ಯ ಬೋಗಿಯ ಬದಿಗಳಲ್ಲಿ "ದೆಹಲಿ-ಡೆಲಾವೇರ್" ಮತ್ತು ಎಂಜಿನ್ ಬದಿಗಳಲ್ಲಿ "ಭಾರತೀಯ ರೈಲ್ವೆ" ಎಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯುವ ಮೂಲಕ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಮಾದರಿಯು ಕುಶಲಕರ್ಮಿಯ ಅಸಾಧಾರಣ ಕೌಶಲ್ಯವನ್ನು ಎತ್ತಿ ತೋರಿಸುವುದಲ್ಲದೆ, ಭಾರತೀಯ ರೈಲ್ವೆಯ ದೀರ್ಘ ಇತಿಹಾಸ ಮತ್ತು ಅದರ ಜಾಗತಿಕ ಪ್ರಭಾವಗಳಿಗೆ ಉಜ್ವಲ ಸಾಕ್ಷಿಯಾಗಿದೆ.

ಇದಲ್ಲದೆ ಪ್ಯಾಪಿಯರ್ ಮ್ಯಾಶೆ ಬಾಕ್ಸ್​ನಲ್ಲಿ ಪ್ಯಾಕ್​ ಮಾಡಲಾದ ಪಶ್ಮಿನಾ ಶಾಲನ್ನು ಕೂಡ ಪ್ರಧಾನಿ ಅವರು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಮಿನಾ ಶಾಲುಗಳನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀಮಂತ ಮತ್ತು ಅದ್ಭುತ ಕರಕುಶಲ ಪರಂಪರೆಯ ರಾಯಭಾರಿ ಎಂದು ಪರಿಗಣಿಸಲಾಗಿದೆ. ಸಮಕಾಲೀನ ಪಶ್ಮಿನಾ ವಿನ್ಯಾಸಕರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಗಾಢ ವರ್ಣಗಳು, ಆಕರ್ಷಕ ಮಾದರಿಗಳು ಮತ್ತು ಸಮ್ಮಿಳನ ಶೈಲಿಗಳೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಶ್ಮಿನಾ ಶಾಲುಗಳನ್ನು ಸಾಂಪ್ರದಾಯಿಕವಾಗಿ ಜಮ್ಮು ಮತ್ತು ಕಾಶ್ಮೀರದ ಪ್ಯಾಪಿಯರ್ ಮ್ಯಾಶೆ ಬಾಕ್ಸ್​ಗಳಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಅವು ತಮ್ಮ ಸೊಗಸಾದ ಸೌಂದರ್ಯ ಮತ್ತು ಕರಕುಶಲತೆಗೆ ಹೆಸರುವಾಸಿಯಾಗಿವೆ. ಈ ಪೆಟ್ಟಿಗೆಗಳನ್ನು ಕಾಗದದ ತಿರುಳು, ಅಂಟು ಮತ್ತು ಇತರ ನೈಸರ್ಗಿಕ ವಸ್ತುಗಳ ಮಿಶ್ರಣವನ್ನು ಬಳಸಿ ಕೈಯಿಂದ ತಯಾರಿಸಲಾಗುತ್ತದೆ. ಪ್ರತಿಯೊಂದು ಪೆಟ್ಟಿಗೆಯು ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಕಲಾಕೃತಿಯಾಗಿದೆ. ಈ ಪೆಟ್ಟಿಗೆಗಳನ್ನು ವಿಶಿಷ್ಟ ಅಲಂಕಾರಿಕ ವಸ್ತುಗಳನ್ನಾಗಿಯೂ ಬಳಸಲಾಗುತ್ತದೆ.

ಇದನ್ನೂ ಓದಿ : ಜೈಲಿನಲ್ಲಿರುವ ಕಲ್ಲು ತೂರಾಟಗಾರರು, ಭಯೋತ್ಪಾದಕರನ್ನು ಬಿಡುಗಡೆ ಮಾಡಲ್ಲ: ಗೃಹ ಸಚಿವ ಅಮಿತ್ ಶಾ - Jammu Kashmir Elections

ABOUT THE AUTHOR

...view details