ಕಠ್ಮಂಡು(ನೇಪಾಳ):ಪೈಲಟ್ ಹಾಗೂ ಸಿಬ್ಬಂದಿ ಸೇರಿ 19 ಪ್ರಯಾಣಿಕರಿದ್ದವಿಮಾನವೊಂದು ರನ್ವೇನಿಂದ ಜಾರಿ ಪತನಗೊಂಡಿರುವ ಘಟನೆ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿತು. ಈ ದುರಂತದಲ್ಲಿ 18 ಜನ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಸ್ಥಳಕ್ಕೆ ತುರ್ತು ಸೇವೆಗಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ನೇಪಾಳ ಕಠ್ಮಂಡು ಏರ್ಪೋರ್ಟ್‌ನಲ್ಲಿ ವಿಮಾನ ಪತನ; 18 ಮಂದಿ ಸಾವು, ಪೈಲಟ್ ಬಚಾವ್ - Nepal Plane Crash - NEPAL PLANE CRASH
ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ 19 ಪ್ರಯಾಣಿಕರ ಪೈಕಿ 18 ಮಂದಿ ಮೃತಪಟ್ಟಿದ್ದಾರೆ. ಪೈಲಟ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಯಿಂದ ಪರಿಹಾರ ಕಾರ್ಯ (ANI)
Published : Jul 24, 2024, 12:06 PM IST
|Updated : Jul 24, 2024, 12:59 PM IST
ಇಲ್ಲಿನ ತ್ರಿಭುವನ್ ಏರ್ಪೋರ್ಟ್ನಿಂದ ದೇಶಿಯ ಶೌರ್ಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬೆಳಗ್ಗೆ ಪೋಖಾರಾಕ್ಕೆ ತೆರಳಲು ಟೇಕ್ಆಫ್ ಆಗುತ್ತಿತ್ತು. ಈ ವೇಳೆ, 11:15ರ ಸುಮಾರಿಗೆ ದಿಢೀರ್ ರನ್ವೇನಿಂದ ಜಾರಿ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿ ಪತನಗೊಂಡು ಭಾರೀ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು.
Last Updated : Jul 24, 2024, 12:59 PM IST