ಲಾಸ್ ವೇಗಾಸ್ (ಅಮೆರಿಕ):ಆನ್ಲೈನ್ ಕಂಟೆಂಟ್ ಕ್ರಿಯೆಟರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಲಾಸ್ವೇಗಾಸ್ನಲ್ಲಿರುವ ಗೋಳಾಕಾರದ ಎಲ್ಇಡಿ ಪರದೆ ಹೊಂದಿರುವ ಸ್ಫಿಯರ್ನ ಮೇಲ್ಭಾಗಕ್ಕೆ ಹತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸದ್ಯ ಆತನನ್ನು ಮೈಸನ್ ಡೆಸ್ ಚಾಂಪ್ಸ್ ಎಂದು ಗುರುತಿಸಲಾಗಿದ್ದು, ತಾನು ನಿರಾಶ್ರಿತ ಗರ್ಭಿಣಿಗೆ ಹಣವನ್ನು ಸಂಗ್ರಹಿಸುವ ಸಲುವಾಗಿ ಈ ರೀತಿಯಾಗಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಲಾಸ್ ವೆಗಾಸ್ನ ನೆವಾಡಾದ ಸ್ಪಿಯರ್ ಲೊಕೇಶನ್ ಎಂಬ ದೊಡ್ಡ ಕನ್ಸರ್ಟ್ ಹಾಲ್ನಲ್ಲಿ ಈ ಘಟನೆ ನಡೆದಿದ್ದು ಕಾನೂನು ಎನ್ಫೋರ್ಸ್ಮೆಂಟ್ ಮತ್ತು ಇತರ ಏಜೆನ್ಸಿಗಳು ಪ್ರತಿಕ್ರಿಯಿಸಿವೆ. ಘಟನೆಯ ತಕ್ಷಣವೇ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.