ಕರ್ನಾಟಕ

karnataka

ETV Bharat / international

ಸಿವಿಲ್ ವಂಚನೆ ಕೇಸ್​: ಡೊನಾಲ್ಡ್ ಟ್ರಂಪ್​ಗೆ 355 ಮಿಲಿಯನ್​ ಡಾಲರ್​ ದಂಡ ವಿಧಿಸಿದ ಕೋರ್ಟ್​ - civil fraud case

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೇಸ್​ಗಳ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಪೋರ್ನ್​ ಸ್ಟಾರ್​ಗೆ ಹಣ ನೀಡಿದ ಆರೋಪದಲ್ಲಿ ವಿಚಾರಣೆಗೆ ಕೋರ್ಟ್​ ದಿನಾಂಕ ಮಾಡಿದ ಬೆನ್ನಲ್ಲೇ, ಸಿವಿಲ್​ ಕೇಸೊಂದರಲ್ಲಿ ಭಾರೀ ದಂಡನೆಗೆ ಗುರಿಯಾಗಿದ್ದಾರೆ.

ಡೊನಾಲ್ಡ್ ಟ್ರಂಪ್​ಗೆ ದಂಡ
ಡೊನಾಲ್ಡ್ ಟ್ರಂಪ್​ಗೆ ದಂಡ

By ANI

Published : Feb 17, 2024, 6:56 AM IST

Updated : Feb 17, 2024, 7:26 AM IST

ನ್ಯೂಯಾರ್ಕ್ (ಅಮೆರಿಕ):ಅಧ್ಯಕ್ಷೀಯ ಚುನಾವಣೆಗೂ ಮೊದಲು ಡೊನಾಲ್ಡ್​ ಟ್ರಂಪ್​ ಸರಣಿ ಆಘಾತಗಳನ್ನು ಎದುರಿಸುವಂತಾಗಿದೆ. ತನ್ನ ಕಂಪನಿಯ ವಿಮಾದಾರರು, ಸಿಬ್ಬಂದಿ, ಬ್ಯಾಂಕ್​ಗಳಿಗೆ ವಂಚಿಸಿದ ಸಿವಿಲ್ ಪ್ರಕರಣದಲ್ಲಿ 355 ಮಿಲಿಯನ್ ಡಾಲರ್ ದಂಡನೆಗೆ ಒಳಗಾಗಿದ್ದಾರೆ. ನ್ಯೂಯಾರ್ಕ್ ಕೋರ್ಟ್​ ಅಮೆರಿಕದ ಮಾಜಿ ಅಧ್ಯಕ್ಷರಿಗೆ ದಂಡವನ್ನು ಕಟ್ಟುವಂತೆ ಶುಕ್ರವಾರ ಆದೇಶಿಸಿದೆ. ಜೊತೆಗೆ ಟ್ರಂಪ್ ಮೂರು ವರ್ಷ ಕಂಪನಿಯ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನೂ ಹೇರಿದೆ.

ಟ್ರಂಪ್​ ಮತ್ತು ಕುಟುಂಬಸ್ಥರು ನಡೆಸುತ್ತಿರುವ ಕಂಪನಿಯಲ್ಲಿ ಆದಾಯಕ್ಕಿಂತಲೂ ಅಧಿಕವಾಗಿ ಲಾಭವನ್ನು ತೋರಿಸಿ ಬ್ಯಾಂಕ್​ಗಳಿಂದ ಸಾಲ, ವಿಮೆ ಪಡೆದುಕೊಂಡಿದ್ದರು. ಬಳಿಕ ಮರುಪಾವತಿಯಲ್ಲಿ ನಷ್ಟ ತೋರಿಸಿದ್ದರು. ಇದರಿಂದ ಸಿಬ್ಬಂದಿ ಸೇರಿ ಬ್ಯಾಂಕ್​, ವಿಮಾ ಕಂಪನಿ ನಷ್ಟವಾಗುವಂತೆ ಮಾಡಿದ್ದರು. ಇದರ ವಿರುದ್ಧ ದಾಖಲಾದ ಪ್ರಕರಣದಲ್ಲಿ ನ್ಯೂಯಾರ್ಕ್​ ಕೋರ್ಟ್​ ಇದೀಗ ಮಾಜಿ ಅಧ್ಯಕ್ಷರಿಗೆ ಭಾರೀ ಪ್ರಮಾಣದ ದಂಡ ವಿಧಿಸಿದೆ.

ಟ್ರಂಪ್​ ಮಕ್ಕಳಿಗೂ ದಂಡ:ಪ್ರಕರಣದಲ್ಲಿ ಟ್ರಂಪ್​ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಪುತ್ರಿ ಎರಿಕ್ ಟ್ರಂಪ್​ಗೂ ಕೂಡ ತಲಾ 4 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಜೊತೆಗೆ ಇಬ್ಬರೂ ಕೂಡ 2 ವರ್ಷ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನು ಹಾಕಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್​ ಕೋರ್ಟ್​ನ ನ್ಯಾಯಾಧೀಶ ಆರ್ಥರ್ ಎಂಗೊರಾನ್ ಅವರು ಜನವರಿಯಲ್ಲಿ ಪ್ರಕರಣವನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಫೆಬ್ರವರಿ 16 ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಟ್ರಂಪ್​ ಕಂಪನಿಯು ಬೇಕಂತಲೇ ಹಣದ ಅವ್ಯವಹಾರ ನಡೆಸಿದೆ ಎಂದು ಆರೋಪಿಸಲಾಗಿದೆ. ಟ್ರಂಪ್​ ಕುಟುಂಬಕ್ಕೆ ದಂಡದ ಜೊತೆಗೆ ಅಧಿಕಾರದ ಮೇಲೂ ನಿರ್ಬಂಧ ವಿಧಿಸಿ ತೀರ್ಪು ನೀಡಲಾಗಿದೆ.

ಆರೋಪ ನಿರಾಕರಿಸಿದ ಟ್ರಂಪ್​:ಕೋರ್ಟ್​ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್​ ಟ್ರಂಪ್​, ಪ್ರಕರಣದಲ್ಲಿ ತಮ್ಮ ಮೇಲೆ ಹಾಕಲಾಗಿರುವ ದಂಡ ಮತ್ತು ತೀರ್ಪನ್ನು ಒಪ್ಪಲಾಗಲ್ಲ. ಇದು ರಾಜಕೀಯ ಪ್ರೇರಿತ ಮತ್ತು ನನ್ನನ್ನೇ ವಂಚಿಸುವ ಆದೇಶವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ತಾವೂ ಕೂಡ ಯಾವ ತಪ್ಪು ಮಾಡಿಲ್ಲ ಎಂದು ಟ್ರಂಪ್​ ಪುತ್ರ, ಪುತ್ರಿ ಹೇಳಿದ್ದಾರೆ.

ನ್ಯೂಯಾರ್ಕ್​ ಕೋರ್ಟ್​ ಪ್ರಕರಣದಲ್ಲಿ ಅಸಲಿಗೆ ಟ್ರಂಪ್​ ಮೇಲೆ 370 ಮಿಲಿಯನ್​ ಡಾಲರ್​ ದಂಡವನ್ನು ವಿಧಿಸಿತ್ತು. 15 ಮಿಲಿಯನ್​ ಕಡಿತಗೊಳಿಸಿ, 355 ಅಮೆರಿಕನ್​ ಮಿಲಿಯನ್​ ಡಾಲರ್​ ಪಾವತಿಸುವಂತೆ ಆದೇಶಿಸಲಾಗಿದೆ. 90 ಪುಟಗಳ ಆದೇಶವನ್ನು ಕೋರ್ಟ್​ ನೀಡಿದೆ.

ಇದನ್ನೂ ಓದಿ:ಪೋರ್ನ್​​ಸ್ಟಾರ್​ಗೆ ಹಣ ನೀಡಿದ ಆರೋಪ: ಟ್ರಂಪ್​​​ ಮನವಿ ತಿರಸ್ಕರಿಸಿ, ವಿಚಾರಣೆಗೆ ದಿನಾಂಕ ನಿಗದಿ ಮಾಡಿದ ಕೋರ್ಟ್

Last Updated : Feb 17, 2024, 7:26 AM IST

ABOUT THE AUTHOR

...view details