ಕರ್ನಾಟಕ

karnataka

ETV Bharat / international

ಸಿಂಗಾಪುರ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ: ಭಾರತ ಮೂಲದ ವ್ಯಕ್ತಿಗೆ 5 ವಾರಗಳ ಜೈಲು ಶಿಕ್ಷೆ - Indian jailed in Singapore - INDIAN JAILED IN SINGAPORE

ಸಿಂಗಾಪುರದಲ್ಲಿ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಭಾರತೀಯ ಮೂಲದ ವ್ಯಕ್ತಿಗೆ ಅಲ್ಲಿಯ ನ್ಯಾಯಾಲಯ 5 ವಾರಗಳ ಕಾಲ ಶಿಕ್ಷೆ ವಿಧಿಸಿ ಆದೇಶ ಮಾಡಿದೆ.

ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ
ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ (ETV Bharat)

By PTI

Published : Jun 19, 2024, 12:14 PM IST

ಸಿಂಗಾಪುರ: ಮದ್ಯದ ಅಮಲಿನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಸಿಂಗಾಪುರದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಭಾರತೀಯ ಮೂಲದ ವ್ಯಕ್ತಿಗೆ ಐದು ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ ಎಂದು ವರದಿಯಾಗಿದೆ. 24 ವರ್ಷದ ದೇವೇಶ್ ರಾಜ್ ರಾಜಶೇಖರನ್ ಐದು ವಾರಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಸಿಂಗಾಪುರದಲ್ಲಿ ನೆಲೆಸಿರುವ ರಾಜಶೇಖರನ್​ 2022ರಲ್ಲಿ ತನ್ನ ಸ್ನೇಹಿತನಾದ ರವಿ ಎಂಬಾತನ ಜೊತೆ ಸೇರಿ ಇತರರೊಂದಿಗೆ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್​ ಅಧಿಕಾರಿಯೊಬ್ಬರು ವಿಚಾರಿಸಲು ತೆರಳಿದ್ದಾರೆ. ಈ ವೇಳೆ, ಪಾನಮತ್ತನಾಗಿದ್ದ ರಾಜಶೇಖರನ್​ ಅಧಿಕಾರಿಯೊಂದಿಗೆ ಜಗಳಕ್ಕಿಳಿದು ಮುಖಕ್ಕೆ ಬಲವಾಗಿ ಹೊಡೆದಿದ್ದ. ಪರಿಣಾಮ ಪೊಲೀಸ್​ ಅಧಿಕಾರಿ ಸ್ಥಳದಲ್ಲೇ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೂ ಸಾಗಿಸಲಾಗಿತ್ತು. ಹಲವು ದಿನಗಳ ಬಳಿಕ ಚೇತರಿಸಿಕೊಂಡಿದ್ದರು.

ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ವಿಚಾರಿಸಿದ್ದರು. ಈ ವೇಳೆ ಈ ವರ್ಷದ ಮಾರ್ಚ್​ ತಿಂಗಳಲ್ಲಿ ಆರೋಪಿ ರಾಜಶೇಖರನ್​ ತಾನು ಪೊಲೀಸ್​ ಅಧಿಕಾರಿಗೆ ಹೊಡೆದಿರುವುದಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕಣವನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ 5 ವಾರಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಇದೇ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5000 ಸಿಂಗಾಪುರ ಡಾಲರ್​ ಶಿಕ್ಷೆ ವಿಧಿಸುವ ಸಾಧ್ಯತೆ ಇತ್ತು. ಆದರೇ ಆರೋಪಿ ಪಾನಮತ್ತನಾಗಿದ್ದು ಮತ್ತು ಮಾಡಿರುವ ತಪ್ಪನ್ನು ಒಪ್ಪಿಕೊಂಡದ್ದಕ್ಕೆ ಶಿಕ್ಷೆಯ ಪ್ರಮಾಣ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ:ಲೇಖಕ ಸಲ್ಮಾನ್ ರಶ್ದಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ: ವಿಚಾರಣೆ ವೇಳೆ ಆರೋಪಿ ಪರ ವಕೀಲ ಹೇಳಿದ್ದು ಹೀಗೆ.. - Author Salman Rushdie

ABOUT THE AUTHOR

...view details