ನ್ಯೂಯಾರ್ಕ್/ಕೈರೋ (ಈಜಿಪ್ಟ್):ಭಾರತ ಮೂಲದ ನ್ಯೂಯಾರ್ಕ್ನ ಟೆಕ್ ಬಿಲಿಯನೇರ್ ಮತ್ತು ಬಿಲ್ಟ್ ರಿವಾರ್ಡ್ಸ್ ಸಿಇಒ ಅಂಕುರ್ ಜೈನ್ ಅವರು ಮಾಜಿ ಡಬ್ಲ್ಯೂಡಬ್ಲ್ಯೂಇ ತಾರೆ ಎರಿಕಾ ಹ್ಯಾಮಂಡ್ ಅವರನ್ನು ವರಿಸಿದ್ದಾರೆ. ಈಜಿಫ್ಟ್ನ ಐಕಾನಿಕ್ ಪಿರಮಿಡ್ನ ಗ್ರೇಟ್ ಸ್ಫಿಂಕ್ಸ್ ಮುಂದೆ ನಡೆದ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂಕುರ್ ಜೈನ್ ತಮ್ಮ ಮದುವೆಯ ವಿಡಿಯೋಗಳು ಮತ್ತು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಮದುವೆ ಈಜಿಪ್ಟ್ನಲ್ಲಿ 4/26/2024ರಂದು ನೆರವೇರಿತು. ನಮ್ಮೊಂದಿಗೆ ಆಚರಿಸಲು ಬಂದ ಎಲ್ಲರಿಗೂ, ನಮ್ಮ ಕುಟುಂಬಗಳಿಗೂ!! ಮತ್ತು ನನ್ನನ್ನು ಮದುವೆಯಾಗಿದ್ದಕ್ಕಾಗಿ ಎರಿಕಾ ಹ್ಯಾಮಂಡ್ ಅವರಿಗೂ ಧನ್ಯವಾದಗಳು!! ಮತ್ತು ನಮ್ಮ ಮದುವೆಯನ್ನು ಸಾಧ್ಯವಾಗಿಸಿದ ಎಲ್ಲರಿಗೆ ಧನ್ಯವಾದಗಳು ಎಂದು ಅವರು ಪೋಸ್ಟ್ ಹಾಕಿದ್ದಾರೆ.
ಅಂಕುರ್ ಅವರ ತಂದೆ ನವೀನ್ ಕೆ. ಜೈನ್ ಅವರು ಉತ್ತರ ಪ್ರದೇಶದಿಂದ ಮೂಲದವರು. ರೂರ್ಕಿ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಇವರು ಯಶಸ್ವಿ ಭಾರತೀಯ ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ತಮ್ಮ ಅದ್ಧೂರಿ ಏಪ್ರಿಲ್ 26ರ ವಿವಾಹದ ಕುರಿತು ಎರಿಕಾ ಹ್ಯಾಮಂಡ್ ಪೀಪಲ್ ಮ್ಯಾಗಜೀನ್ನೊಂದಿಗೆ ಮಾತನಾಡಿ, ಇದು ಜೀವಮಾನದಲ್ಲಿ ಒಮ್ಮೆ ಮಾತ್ರ ಆಗುವ ಅನುಭವ ಎಂದು ಹೇಳಿದರು.