ETV Bharat / international

'ಐಡಿಎಫ್ ಸಿರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿದೆ': ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ - IDF IN SYRIA

ತನ್ನ ಪಡೆಗಳು ಸಿರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿವೆ ಎಂದು ಇಸ್ರೇಲ್ ಹೇಳಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ians)
author img

By ETV Bharat Karnataka Team

Published : Jan 29, 2025, 7:07 PM IST

ಜೆರುಸಲೇಂ: ಸಿರಿಯಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ತಮ್ಮ ಸೇನಾ ಪಡೆಗಳು ಉಳಿಯಲಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

"ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಮೌಂಟ್ ಹರ್ಮನ್ ಶಿಖರದಲ್ಲಿ ಮತ್ತು ಬಫರ್ ವಲಯದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿದೆ" ಎಂದು ಕಾಟ್ಜ್ ಮಂಗಳವಾರ ಮೌಂಟ್ ಹರ್ಮನ್ ಶಿಖರದಲ್ಲಿ ಇಸ್ರೇಲ್ ಸ್ಥಾಪಿಸಿದ ಮಿಲಿಟರಿ ಪೋಸ್ಟ್​ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಇಸ್ರೇಲ್ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. "ಮೌಂಟ್ ಹರ್ಮನ್ ಪೋಸ್ಟ್​ಗಳಲ್ಲಿ ದೀರ್ಘಾವಧಿಯವರೆಗೆ ರಕ್ಷಣೆ ಮತ್ತು ಆಕ್ರಮಣ ಮಾಡುವ ಎರಡೂ ವಿಷಯಗಳಲ್ಲಿ ಐಡಿಎಫ್ ಸೂಕ್ತವಾಗಿ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ತಿಳಿಸಿದರು.

ಇರಾನ್​ ಬೆಂಬಲಿತ ಪಡೆಗಳು ಮತ್ತು ಇಸ್ರೇಲ್​ನೊಂದಿಗೆ ಮೈತ್ರಿ ಹೊಂದಿರದ ಇತರ ಗುಂಪುಗಳು ದಕ್ಷಿಣ ಸಿರಿಯಾದಲ್ಲಿ ಕಾಲಿಡುವುದನ್ನು ತಡೆಯಲು ಇಸ್ರೇಲ್ ನಿರ್ಧರಿಸಿದೆ ಎಂದು ಕಾಟ್ಜ್ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. "ದಕ್ಷಿಣ ಸಿರಿಯಾದ ಬಫರ್ ವಲಯದಲ್ಲಿ ಇಲ್ಲಿಂದ ಸುವೇಡಾ-ಡಮಾಸ್ಕಸ್ ಅಕ್ಷದವರೆಗೆ ಶತ್ರು ಪಡೆಗಳು ಕಾಲಿಡಲು ನಾವು ಅನುಮತಿಸುವುದಿಲ್ಲ ಮತ್ತು ನಮ್ಮ ರಕ್ಷಣೆಗಾಗಿ ನಾವು ಇತರರನ್ನು ಅವಲಂಬಿಸುವುದಿಲ್ಲ. ಆದರೆ ನಾವು ಈ ಪ್ರದೇಶದ ಸ್ನೇಹಪರ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತೇವೆ ಹಾಗೂ ದೊಡ್ಡ ಡ್ರೂಜ್ ಸಮುದಾಯಕ್ಕೆ ಬೆಂಬಲ ನೀಡುತ್ತೇವೆ." ಎಂದು ಅವರು ನುಡಿದರು.

2,814 ಮೀಟರ್ ಎತ್ತರವಿರುವ ಮೌಂಟ್ ಹರ್ಮನ್ ಶಿಖರವು ಪೂರ್ವ ಮೆಡಿಟರೇನಿಯನ್ ಕರಾವಳಿಯ ಅತಿ ಎತ್ತರದ ಸ್ಥಳವಾಗಿದ್ದು, ಇಲ್ಲಿಂದ ಇಸ್ರೇಲ್, ಸಿರಿಯಾ ಮತ್ತು ಲೆಬನಾನ್ ಮೂರೂ ಕಡೆಗಳಲ್ಲಿ ನೋಡಬಹುದಾಗಿದೆ. 1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಈಗಾಗಲೇ ಗೋಲನ್ ಹೈಟ್ಸ್​ನ ಕೆಳಭಾಗವನ್ನು ಆಕ್ರಮಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಆ ಪ್ರದೇಶವು ತನ್ನ ದೇಶದ ಭಾಗವೆಂದು ಘೋಷಿಸಿಕೊಂಡಿತು.

ಡಿಸೆಂಬರ್​ನಲ್ಲಿ ಬಶರ್ ಅಲ್ - ಅಸ್ಸಾದ್ ಸರ್ಕಾರದ ಪತನದ ನಂತರ ಇಸ್ರೇಲ್ ತನ್ನ ಪದಾತಿ ದಳವನ್ನು ಬಫರ್ ವಲಯಕ್ಕೆ ಕಳುಹಿಸಿತ್ತು. ಇದು ವಿಶ್ವಸಂಸ್ಥೆಯ ನಿಷ್ಕ್ರಿಯತೆ ವೀಕ್ಷಕ ಪಡೆ ಮೇಲ್ವಿಚಾರಣೆ ಮಾಡುವ ನಿಶಸ್ತ್ರೀಕೃತ ಪ್ರದೇಶವಾಗಿದೆ. ಇದನ್ನು ಇಸ್ರೇಲ್ ಮತ್ತು ಸಿರಿಯಾ ನಡುವಿನ ನಿಷ್ಕ್ರಿಯತೆಯ ಒಪ್ಪಂದದ ಮೂಲಕ ಸ್ಥಾಪಿಸಲಾಗಿತ್ತು. ನಂತರ ಪರ್ವತದ ಶಿಖರದಲ್ಲಿರುವ ಸಿರಿಯನ್ ಸೇನಾ ಪೋಸ್ಟ್​ಗಳನ್ನು ಕೂಡ ಇಸ್ರೇಲ್ ವಶಪಡಿಸಿಕೊಂಡಿತ್ತು.

ಇದನ್ನೂ ಓದಿ : ಬಾಂಗ್ಲಾದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ದಾಳಿ: ಹ್ಯೂಮನ್ ರೈಟ್ಸ್ ವಾಚ್ ವರದಿ - ATTACKS ON HINDUS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.