ಕರ್ನಾಟಕ

karnataka

ETV Bharat / international

H-1B ವೀಸಾ ವಿಚಾರದಲ್ಲಿ ಹೊಸ ನಿಯಮ ಪ್ರಕಟಿಸಿದ ಬೈಡನ್​ ಆಡಳಿತ: ವಿದೇಶಿ ಉದ್ಯೋಗಿಗಳ ನೇಮಕ ಇನ್ನು ಸುಲಭ - US H1B VISA NEW RULES

ಡೊನಾಲ್ಡ್ ಟ್ರಂಪ್​ ಅಧಿಕಾರ ವಹಿಸಿಕೊಳ್ಳುವ ಒಂದು ತಿಂಗಳು ಮೊದಲೇ ಬೈಡನ್ ಆಡಳಿತ H-1B ವೀಸಾ ನಿಯಮಗಳಿಗೆ ಹೊಸ ನಿಯಮಗಳನ್ನು ಸೇರ್ಪಡೆ ಮಾಡಿ ಜಾರಿಗೆ ತಂದಿದೆ.

US-H1B VISA
H-1B ವೀಸಾ ವಿಚಾರದಲ್ಲಿ ಹೊಸ ನಿಯಮ ಪ್ರಕಟಿಸಿದ ಬೈಡನ್​ ಆಡಳಿತ: ವಿದೇಶಿ ಉದ್ಯೋಗಿಗಳ ನೇಮಕ ಇನ್ನು ಸುಲಭ (Representative Image)

By PTI

Published : 6 hours ago

ವಾಷಿಂಗ್ಟನ್,ಅಮೆರಿಕ: ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುವ ಒಂದು ತಿಂಗಳ ಮುಂಚಿತವಾಗಿ ಬೈಡನ್​ ಆಡಳಿತ ಮಂಗಳವಾರ H-1B ವೀಸಾಗಳಿಗಾಗಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ಹೊಸ ನಿಯಮ ಅಮೆರಿಕನ್ ಕಂಪನಿಗಳಿಗೆ ವಿಶೇಷ ಕೌಶಲ್ಯ ಸೆಟ್‌ಗಳೊಂದಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ. F-1 ವಿದ್ಯಾರ್ಥಿ ವೀಸಾಗಳನ್ನು ಸರಳವಾಗಿ H-1B ವೀಸಾಗಳಿಗೆ ಪರಿವರ್ತನೆ ಮಾಡಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ.

ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (DHS) ನಿಯಮದ ಅನ್ವಯ H-1B ನಲ್ಲಿ ವಾರ್ಷಿಕ ಶಾಸನಬದ್ಧ ಮಿತಿಯಿಂದ ವಿನಾಯಿತಿ ಪಡೆದಿರುವ ಮತ್ತು ಲಾಭೋದ್ದೇಶವಿಲ್ಲದ ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳಿಗೆ ವ್ಯಾಖ್ಯಾನ ಮತ್ತು ಮಾನದಂಡಗಳನ್ನು ಆಧುನೀಕರಿಸುವ ಮೂಲಕ ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಹೆಚ್ಚಿನ ನಮ್ಯತೆ ಒದಗಿಸುವ ಗುರಿಯನ್ನು ಹೊಸ ವೀಸಾ ನೀತಿ ಹೊಂದಿದೆ.

ವೀಸಾ ನೀತಿಯಲ್ಲಿ ಸರಳೀಕರಣ:ಅಮೆರಿಕದ ಉದ್ಯೋಗದಾತರು ತಮ್ಮ ವ್ಯಾಪಾರದ ಅಗತ್ಯಗಳಿಗೆ ಅನುಗುಣವಾಗಿ ನೌಕರರನ್ನು ನೇಮಕ ಮಾಡಿಕೊಳ್ಳಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡುವಂತೆ ವೀಸಾ ನೀತಿಯನ್ನು ಸರಳೀಕರಣ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನವೇ ಪ್ರಸ್ತುತ ಅಧ್ಯಕ್ಷ ಜೋ ಬೈಡನ್​ ವೀಸಾ ನೀತಿಗೆ ಹೊಸ ನಿಯಮಗಳನ್ನು ಪ್ರಕಟಿಸಿ, ಜಟೀಲತೆಯನ್ನು ಪರಿಹರಿಸುವ ಕೆಲಸ ಮಾಡಿದ್ದಾರೆ.

ಹಲವು ಅಡೆತಡೆಗಳ ನಿವಾರಣೆಗೆ ಹೊಸ ನೀತಿ ಸುಲಭ ಪರಿಹಾರ:DHS ಪ್ರಕಾರ, F-1 ವೀಸಾ ಹೊಂದಿರುವ ವಿದ್ಯಾರ್ಥಿಗಳಿಗೆ ಕಾನೂನುಬದ್ಧ ಸ್ಥಿತಿ ಮತ್ತು ಉದ್ಯೋಗದ ಅಧಿಕಾರದಲ್ಲಿ ಆಗುವ ಅಡಚಣೆಗಳನ್ನು ತಪ್ಪಿಸಲು ಎಫ್-1 ವಿದ್ಯಾರ್ಥಿ ವೀಸಾವನ್ನು​​ H-1B ಗೆ ಬದಲಾಯಿಸಲು ಹೊಸ ನಿಯಮದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಹೊಸ ನಿಯಮದನ್ವಯ ಸುಲಭವಾಗಿ ಈ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಇದು ಹಿಂದೆ H1-B ವೀಸಾಗೆ ಅನುಮೋದಿಸಲ್ಪಟ್ಟಿರುವ ಹೆಚ್ಚಿನ ವ್ಯಕ್ತಿಗಳಿಗೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳಿಗೆ (USCIS) ಹೆಚ್ಚು ತ್ವರಿತವಾಗಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಇದು ಅನುಕೂಲ ಮಾಡಿಕೊಡುತ್ತದೆ.

ಅರ್ಜಿ ಸಲ್ಲಿಸುವ ಸಂಸ್ಥೆಯಲ್ಲಿ ಹಿತಾಸಕ್ತಿ ಹೊಂದಿರುವ H1-B ವೀಸಾ ಹೊಂದಿರುವವರು, ಸಮಂಜಸವಾದ ಷರತ್ತುಗಳಿಗೆ ಒಳಪಟ್ಟು H-1B ವೀಸಾ ಪಡೆಯಲು ಅರ್ಹರಾಗಲು ಸಹ ಹೊಸ ನಿಯಮಗಳು ಅನುಕೂಲ ಮಾಡಿಕೊಡುತ್ತದೆ. ಬೈಡನ್​ ಆಡಳಿತದ ಇತ್ತೀಚಿನ ಕ್ರಮವು ಕಾನೂನಿನ ಅಡಿ, ಅಮೆರಿಕದ ಕಾರ್ಮಿಕರ ರಕ್ಷಣೆಗಳಿಗೆ ಬದ್ಧವಾಗಿರುವಾಗ ಉದ್ಯೋಗದಾತರ ಮೇಲಿನ ಅನಗತ್ಯ ಹೊರೆಯನ್ನು ಕಡಿಮೆ ಮಾಡಲು ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಪ್ರತಿಭೆಗಳ ನೇಮಕಕ್ಕೆ ಇದು ಮಾನದಂಡ:ಹೆಚ್ಚು ನುರಿತ ಪ್ರತಿಭೆಗಳ ನೇಮಕಾತಿಗಾಗಿ H-1B ವೀಸಾ ಪ್ರಮುಖ ಮಾನದಂಡವಾಗಿದೆ. ಈ ಹಿನ್ನೆಲೆಯಲ್ಲಿ ವೀಸಾ ನಿಯಮಗಳನ್ನು ಸರಳೀಕರಣ ಮಾಡಿ, ಹೊಸ ನಿಯಮಳನ್ನು ಜಾರಿಗೆ ತರಲಾಗಿದೆ. ಇವು ದೇಶಾದ್ಯಂತ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಅಲೆಜಾಂಡ್ರೊ ಎನ್. ಮಯೋರ್ಕಾಸ್ ಹೇಳಿದ್ದಾರೆ.

1990ರಲ್ಲಿ ಜಾರಿಗೆ ಬಂದ ನಿಯಮ:1990ರಲ್ಲಿ ಅಮೆರಿಕ ಕಾಂಗ್ರೆಸ್​​​ H-1B ನಿಯಮಗಳನ್ನು ರಚಿಸಿತ್ತು. ಅಮೆರಿಕದ ಬೆಳೆಯುತ್ತಿರುವ ಆರ್ಥಿಕತೆಯನ್ನು ಬೆಂಬಲಿಸಲು ಅದನ್ನು ಆಧುನೀಕರಿಸುವ ಯಾವುದೇ ಪ್ರಶ್ನೆಯಿಲ್ಲ ಎಂದು USCIS ನಿರ್ದೇಶಕ ಉರ್ ಎಂ. ಜಡ್ಡೌ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ:ಮೃತ ಉತ್ತರ ಕೊರಿಯಾ ಸೈನಿಕನ ಶವಕ್ಕೆ ಬೆಂಕಿ ಇಟ್ಟರಾ ರಷ್ಯಾ ಸೈನಿಕರು? ವೀಡಿಯೊ ಶೇರ್ ಮಾಡಿದ ಝೆಲೆನ್ ಸ್ಕಿ
ಭಾರತವು ಸಾಕಷ್ಟು ಸುಂಕ ವಿಧಿಸುತ್ತದೆ ಎಂದ ಟ್ರಂಪ್​: ‘ಪರಸ್ಪರ’ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ಡೊನಾಲ್ಡ್​

ABOUT THE AUTHOR

...view details