ETV Bharat / international

ಭಾರತವು ಸಾಕಷ್ಟು ಸುಂಕ ವಿಧಿಸುತ್ತದೆ ಎಂದ ಟ್ರಂಪ್​: ‘ಪರಸ್ಪರ’ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ಡೊನಾಲ್ಡ್​ - US TRUMP TARIFF

ನೀವು ಹೇಗೆ ನಡೆದುಕೊಳ್ಳುತ್ತಿರೋ ಹಾಗೇ ನಾವು ನಡೆದುಕೊಳ್ಳುತ್ತೇವೆ. ನೀವು ತೆರಿಗೆ ವಿಧಿಸಿದರೆ ನಾವೂ ತೆರಿಗೆ ವಿಧಿಸುತ್ತೇವೆ ಎಂದು ಟ್ರಂಪ್​ ತಮ್ಮ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.

US-TRUMP-TARIFF
ಭಾರತವು ಸಾಕಷ್ಟು ಸುಂಕ ವಿಧಿಸುತ್ತದೆ ಎಂದ ಟ್ರಂಪ್​: ‘ಪರಸ್ಪರ’ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ಡೊನಾಲ್ಡ್ (AP)
author img

By PTI

Published : 3 hours ago

ವಾಷಿಂಗ್ಟನ್,ಅಮೆರಿಕ; ಕೆಲವು ಅಮೆರಿಕನ್​ ಉತ್ಪನ್ನಗಳ ಆಮದಿನ ಮೇಲೆ ನವದೆಹಲಿ ವಿಧಿಸಿರುವ "ಹೆಚ್ಚಿನ ಸುಂಕ"ಕ್ಕೆ ಪ್ರತೀಕಾರವಾಗಿ ಪರಸ್ಪರ ಹೆಚ್ಚುವರಿ ಸುಂಕ ವಿಧಿಸುವ ಉದ್ದೇಶ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್​ ಟ್ರಂಪ್​ ಪುನರುಚ್ಚರಿಸಿದ್ದಾರೆ.

ಅವರು ನಮಗೆ ತೆರಿಗೆ ವಿಧಿಸಿದರೆ, ನಾವು ಅವರಿಗೆ ಅದೇ ಮೊತ್ತದ ಸುಂಕವನ್ನು ಹಾಕುತ್ತೇವೆ. ಅವರು ನಮಗೆ ತೆರಿಗೆ ವಿಧಿಸುತ್ತಾರೆ, ನಾವು ಅವರಿಗೆ ತೆರಿಗೆ ವಿಧಿಸುತ್ತೇವೆ. ಬಹುತೇಕ ಎಲ್ಲ ಸಂದರ್ಭಗಳಲ್ಲಿ, ಅವರು ನಮಗೆ ತೆರಿಗೆ ವಿಧಿಸುತ್ತಿದ್ದಾರೆ ಮತ್ತು ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ ಎಂದು ಟ್ರಂಪ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚೀನಾದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಕೆಲವು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವ ದೇಶಗಳಲ್ಲಿ ಭಾರತ ಮತ್ತು ಬ್ರೆಜಿಲ್ ಸೇರಿವೆ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ

ಏನಿದು ಟ್ರಂಪ್​ ಪರಸ್ಪರ ನೀತಿ?: ಪರಸ್ಪರ ಎಂಬ ಪದ ಬಳಕೆ ಮುಖ್ಯವಾಗಿದೆ. ಏಕೆಂದರೆ ಯಾರಾದರೂ ನಮ್ಮ ಮೇಲೆ ಆರೋಪ ಮಾಡಿದರೆ ನಾವು ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಭಾರತವು ನಮಗೆ 100 ಪ್ರತಿಶತ ಶುಲ್ಕ ವಿಧಿಸಿದರೆ, ಅದಕ್ಕಾಗಿ ನಾವು ಅವರಿಗೆ ಏನನ್ನೂ ವಿಧಿಸುವುದಿಲ್ಲವೇ? ಎಂದು ಮರು ಪ್ರಶ್ನಿಸಿದ್ದಾರೆ. ಅವರು ಸೈಕಲ್​ ಕಳುಹಿಸುತ್ತಾರೆ ಮತ್ತು ನಾವು ಅವರಿಗೆ ಸೈಕಲ್ ಕಳುಹಿಸುತ್ತೇವೆ. ಅವರು ನಮಗೆ 100 ಮತ್ತು 200 ಶುಲ್ಕ ವಿಧಿಸುತ್ತಾರೆ. ಭಾರತ ಅಷ್ಟೇ ಅಲ್ಲ ಬ್ರೆಜಿಲ್ ಸಹ ಸಾಕಷ್ಟು ಶುಲ್ಕ ವಿಧಿಸುತ್ತದೆ. ಅವರು ನಮಗೆ ಶುಲ್ಕ ವಿಧಿಸಲು ಬಯಸಿದರೆ, ಅದು ಸರಿ, ಆದರೆ ನಾವು ಅವರಿಗೆ ಅದೇ ರೀತಿ ಶುಲ್ಕ ವಿಧಿಸಲಿದ್ದೇವೆ" ಎಂದು ಮಾರ್-ಎ-ಲಾಗೊದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರ ವಾಣಿಜ್ಯ ಕಾರ್ಯದರ್ಶಿ ಪಿಕ್ ಹೋವರ್ಡ್ ಲುಟ್ನಿಕ್, ಪರಸ್ಪರತೆ ಎಂಬುದು ಟ್ರಂಪ್ ಆಡಳಿತಕ್ಕೆ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರಿ ಹಾಗೆಯೇ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ರಫ್ತು ವಿಷಯದಲ್ಲಿ ಭಾರತ ದಾಖಲೆ: ಕೇವಲ ಒಂದೇ ತಿಂಗಳಲ್ಲಿ 20 ಸಾವಿರ ಕೋಟಿಗೂ ಹೆಚ್ಚು ವಹಿವಾಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.